ದ ಪಾಲಿಟಿಕ್

ಇಂದು ರಾಹುಲ್ ಗಾಂಧಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಅಮಿತ್ ಶಾಗೆ ವಕೀಲರಾಗಿದ್ದರು

ದ ಪಾಲಿಟಿಕ್

ದ ಪಾಲಿಟಿಕ್

ಮೋದಿ ಉಪನಾಮ ಉಲ್ಲೇಖಿಸಿ ರಾಹುಲ್ ನೀಡಿದ್ದ ಹೇಳಿಕೆಗೆ ಸಂಬoಧಿಸಿದoತೆ ಮಾನಹಾನಿ ಪ್ರಕರಣದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಾದ ರಾಬಿನ್ ಪಾಲ್ ಮೊಗೆರಾ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಮೇಲಿದ್ದ ೨೦೦೬ರ ತುಳಸಿರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾ ಅವರಿಗೆ ವಕೀಲರಾಗಿದ್ದವರು.

ರಾಹುಲ್ ಅವರು ೨೦೧೯ರ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಬಾರ್ ಅಂಡ್ ಬೆಂಚ್ ಪ್ರಕಾರ ರಾಹುಲ್ ಗಾಂಧಿ ಅವರು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಮೊಗೆರಾ ಅವರು ಮಂಗಳವಾರ (ಏಪ್ರಿಲ್ ೧೩) ವಿಚಾರಣೆ ನಡೆಸಿದರು.

ಆರ್.ಪಿ.ಮೊಗೆರಾ ಅವರು ಜನವರಿ ೨೦೧೮ರಲ್ಲಿ ನ್ಯಾಯಾಧೀಶರಾಗಿ ನೇಮಕ ಆಗುತ್ತಾರೆ. ಮೊಗೆರಾರವರು ಸೂರತ್‌ನ ೮ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು. ಇವರು ವಕೀಲರಾಗಿದ್ದಾಗ ಶಾ ವಿರುದ್ಧದ ೨೦೦೬ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾ ಅವರ ಪರವಾಗಿ ವಾದ ಮಾಡಿದರು. ಈ ನಕಲಿ ಎನ್‌ಕೌಂಟರ್ ಪ್ರಕರಣ ಆಗ ಇಡೀ ದೇಶದ ಗಮನ ಸೆಳೆದಿತ್ತು. ನಂತರ ಶಾ ಅವರು ಗುಜರಾತ್ ಗೃಹ ಮಂತ್ರಿ ಆದರು. ಅಮಿತ್ ಶಾ ವಿರುದ್ಧದ ನಕಲಿ ಎನ್‌ಕೌಂಟರ್ ಪ್ರಕರಣ ಮುಂಬೈನ ಸಿಬಿಐ ಕೋರ್ಟ್ ಅಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಮೊಗೆರಾ ಅವರು ೨೦೧೪ವರೆಗೂ ಶಾ ಅವರ ಪರವಾಗಿ ವಾದ ಮಂಡಿಸಿದ್ದಾರೆ.

ಈ ಹಿಂದೆ ಹಿಂದಿ ದಿನಪತ್ರಿಕೆ ಜನಸತ್ತಾ ಕೂಡ ನಕಲಿ ಎನ್‌ಕೌಂಟರ್ ಕೇಸ್ ಅಲ್ಲಿ ಸಿಬಿಐ ಕೋರ್ಟ್ ಅಲ್ಲಿ ೨೦೧೪ರಲ್ಲಿ ಶಾ ಪರವಾಗಿ ಮೊಗೆರಾ ಅವರು ವಾದ ಮಂಡಿಸಿದ್ದಾರೆ ಎಂದು ವರದಿ ಮಾಡಿತ್ತು. ದಿ ಹಿಂದು ಪತ್ರಿಕೆಯು ೨೦೧೪ರಲ್ಲಿ ಹೀಗೆ ವರದಿ ಮಾಡಿತ್ತು – ನ್ಯಾಯಾಲಯದ ವಿಚಾರಣೆಗಳಿಗೆ ಶಾ ರವರು ಖುದ್ದು ಹಾಜರಿರಬೇಕು ಎಂಬುವುದಕ್ಕೆ ಶಾಅವರಿಗೆ ವಿನಾಯಿತಿ ನೀಡಬೇಕು ಎಂದು ಮೊಗೆರಾ ಅವರು ಸಿಬಿಐ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿ ಅಲ್ಲಿ ವಿನಾಯಿತಿಗೆ ಯಾವುದೇ ಕಾರಣಗಳನ್ನು ನೀಡದಿರುವುದ್ದರಿಂದ ಸಿಬಿಐ ಕೋರ್ಟ್ ಶಾ ಪರ ವಕೀಲ ಮೊಗೆರಾ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಹಲವು ಬಿಜೆಪಿ ಮುಖಂಡರ ಪರವಾಗಿ ಕೋರ್ಟ್ ವಿಚಾರಣೆಗಳಿಗೆ ಖುದ್ದು ಹಾಜರಿರಬೇಕು ಎಂಬುದಕ್ಕೆ ವಿನಾಯಿತಿ ಕೋರಿ ಮೊಗೆರಾ ಅವರು ಸಲ್ಲಿಸಿದ್ದ ಹಲವು ಮನವಿಗಳಲ್ಲಿ ಇದೂ ಒಂದು.
ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರಿಗೆ ಜೈಲು ಶಿಕ್ಷೆ ಮತ್ತು ಲೋಕಸಭೆಯಿಂದ ಅನರ್ಹಗೊಳಿಸಿದ್ದನ್ನು ಬಿಜೆಪಿಯ ಪ್ರತಿಕಾರದ ರಾಜಕೀಯ ಎಂದು ಹೇಳಿದೆ. ಎರಡು ಪಕ್ಷಗಳ ಹಿತಾಸಕ್ತಿಯ ಸಂಘರ್ಷದ ಕಾರಣದಿಂದ ನ್ಯಾಯಾಧೀಶ ಮೊಗೆರಾ ಅವರಿಂದ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿಕೂಲ ಆದೇಶಗಳನ್ನು ಕಾಣಲೂಬಹುದು.

ಪ್ರಜಾಪತಿ ಒಬ್ಬ ಸಾಧಾರಣ “ಕ್ರಿಮಿನಲ್” ಆಗಿದ್ದ. ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಸಾಯಿಸುವಾಗ ಆತನ ವಯಸ್ಸು ಕೇವಲ ೨೮. ಆ ವರ್ಷ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಇದು ಅಂತರ್‌ರಾಜ್ಯ ರಾಜಕಾರಣಿಗಳು ಮತ್ತು ಪೊಲೀಸರು ಸೇರಿ ನಡೆಸಿದ್ದು ಎಂದು ಹೇಳಿತ್ತು.
ಸೊಹ್ರಾಬುದ್ದೀನ್, ಕೌಸರ್ಬಿ, ತುಳಸಿರಾಮ್ ಪ್ರಜಾಪತಿ ಅವರ ಹತ್ಯೆ ಕೇಸ್ ಅಲ್ಲಿ ಸಿಬಿಐ ದೋಷಾರೋಪ ಪಟ್ಟಿಯಲ್ಲಿ ೩೭ ಜನರ ಹೆಸರುಗಳನ್ನು ಸೇರಿಸಿತ್ತು. ದೋಷಾರೋಪದಲ್ಲಿ ಅಮಿತ್ ಶಾ, ರಾಜಸ್ತಾನದ ಮಾಜಿ ಉಪಮುಖ್ಯಮಂತ್ರಿ ಗುಲಾಬ್ ಚಂದ್ ಕಟಾರಿಯಾ, ಗುಜರಾತ್, ರಾಜಸ್ತಾನ್, ಆಂಧ್ರ ಪ್ರದೇಶದ ಹಲವು ಐಪಿಎಸ್ ಅಧಿಕಾರಿಗಳು ಮತ್ತು ಕೆಳಹಂತದ ಪೊಲೀಸ್ ಅಧಿಕಾರಿಗಳು ಇದ್ದರು. ನಂತರ ಎಲ್ಲಾ ರಾಜಕಾರಣಿಗಳ ಹೆಸರನ್ನು ಮತ್ತು ಹಿರಿಯ ಐಪಿಎಸ್ ಅಧಿಕಾರಗಳ ಹೆಸರನ್ನು ಪ್ರಕರಣದಿಂದ ತೆಗೆಯಲಾಯಿತು. ಕೇವಲ ಕೆಳಹಂತದ ಪೊಲೀಸರ ವಿರುದ್ಧ ವಿಚಾರಣೆಯನ್ನು ನಡೆಸಲಾಯಿತು.

ಇಂಥ ಗಂಬೀರ ಪ್ರಕರಣದಲ್ಲಿ ಮೊಗೆರಾ ಅವರು ಅಮಿತ್ ಶಾಗೆ ವಕೀಲರಾಗಿದ್ದವರು. ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟನೆ ಆದ ಮೇಲೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ರಾಹುಲ್ ಕ್ಷಮೆ ಕೋರಿದ್ದರೆ ಅನರ್ಹರಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದರು. ಪ್ರತಿಯಾಗಿ ರಾಹುಲ್ ಅವರು ಕ್ಷಮೆ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ ಅಂದರು. ಲೋಕಸಭೆಯಿಂದ ಅನರ್ಹಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಪುನಃ ಮೋದಿ ಮತ್ತು ಅದಾನಿ ಸಂಬಂಧದ ಪ್ರಶ್ನೆ ಎತ್ತಿದರು. ೨೦.೦೦೦ಕೋಟಿ ರೂಪಾಯಿ ಅದಾನಿ ಕಂಪನಿಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಇಂದು ಬಿಎಸ್‌ಪಿಯಿಂದ ಬಿ-ಫಾರಂ ಪಡಿಯಲು ಮುಖಂಡರಿಗೆ ಐವತ್ತು ಲಕ್ಷ ನೀಡಬೇಕೆ?

ರಾಹುಲ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಅವರ ಧ್ವನಿಯನ್ನು ಅಡಗಿಸುವುದಕ್ಕಾಗಿ. ರಾಹುಲ್ ಅವರು ತಮ್ಮ ಧ್ವನಿಯನ್ನು ಅಡಗಿಸಿಕೊಳ್ಳುತ್ತಾರಾ ಇಲ್ಲವಾ ಅನ್ನುವುದು ಬಿಜೆಪಿಗೆ ಮುಖ್ಯ ಆಗಿದೆ. ಅವರು ತಮ್ಮ ಧ್ವನಿಯನ್ನು ಅಡಗಿಸಿಕೊಂಡರೆ ಕೆಲ ಕಾಲ ನಂತರ ಎಲ್ಲಾವು ‘ಸರಿ’ ಆಗಬಹುದು. ಅವರ ಅನರ್ಹತೆ ಮರುಪರುಶೀಲನೆ ಆಗಬಹುದು ಕೂಡ. ಧ್ವನಿ ಹೆಚ್ಚು ಮಾಡಿದರೆ ಜಾಮೀನು ರದ್ದು ಆಗಬಹುದು. ಯಾಕೆಂದರೆ ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅಮಿತ್ ಶಾಗೂ ನ್ಯಾಯಾಧೀಶ ಮೊಗೆರಾ ಅವರಿಗೂ ಬಲವಾದ ನಂಟಿದೆ. ನ್ಯಾಯಾಲಯ ಕೂಡ ಬಿಜೆಪಿ ಪಕ್ಷದ ಸಾಧನವಾಗಿ ಬಳಕೆಯಾಗಿದೆ. ದೇಶದಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಇಡಲಾಗಿತ್ತು. ಆದರೆ ನ್ಯಾಯಾಂಗ ವ್ಯವಸ್ಥೆಯು ನಂಬಿಕೆಯನ್ನು ಪೂರ್ತಿ ಕಳೆದುಕೊಳ್ಳುತ್ತಿದೆ.

ಲೇಖಕ: ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ
ಅನುವಾದ: ಸಂಜಯ್
ಮೂಲ: ದಿ ವೈರ್

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!