ದ ಪಾಲಿಟಿಕ್

ಮೊಟ್ಟೆ ಹೋರಾಟದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹೊಡೆತ!

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಎಲ್ಲಾ 99 ಉಪಪಂಗಡಗಳು ಒಗ್ಗೂಡಿಸುವಲ್ಲಿ ಸ್ವಲ್ಪ ಯಶಸ್ವಿ ಆಗಿತ್ತು. ಆದರೆ, ಕೆಲವೊಂದು ಸಂಘಟನೆ ಹಾಗೂ ಕೆಲವು ಮಠಾಧಿಪತಿಗಳ ಸ್ವನಿರ್ಣಯದ ಮೊಟ್ಟೆ ವಿರುದ್ಧ ಹೋರಾಟ ಮತ್ತೆ ಲಿಂಗಾಯತ ಧರ್ಮದಲ್ಲಿ ಭೇದಭಾವ ಹುಟ್ಟಿ ಹಾಕುವಂತಿದೆ. ನಮ್ಮ ಲಿಂಗಾಯತ ಧರ್ಮ ಮಾನ್ಯತೆ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದವರು ದಲಿತರು, ಹಿಂದುಳಿದವರು. ಆದರೆ, ಉಚ್ಚ ಜಾತಿಯವರು, ಆರೆಸ್ಸೆಸ್ ಹಾಗೂ ಅದರ ಅಂಗಸಂಘಟನೆಗಳು ನಮ್ಮ ಹೋರಾಟಕ್ಕೆ ಪ್ರಬಲವಾಗಿ ವಿರೋಧ ಮಾಡಿ, ತಮ್ಮ ಕಪಿಮುಷ್ಠಿಯಲ್ಲಿ ಇರುವ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ನಮ್ಮ ಬೇಡಿಕೆ ತಿರಸ್ಕರಿಸಲು ಯಶಸ್ವಿ ಆಗಿದ್ದಾರೆ.

ಬಸವಾದಿ ಶರಣರು ಲಿಂಗಾಯತ ಧರ್ಮ ಸ್ಥಾಪನೆ ವೈದಿಕ ಸನಾತನ ಧರ್ಮದ ಅಸಮಾನತೆ, ಜಾತಿ, ಲಿಂಗ, ವರ್ಗ ಮತ್ತು ವರ್ಣ ಮತ ಭೇದದ ವಿರುದ್ಧವಾಗಿ ಸ್ಥಾಪನೆ ಮಾಡಿದ್ದು. ಇದು ವಚನ ಸಾಹಿತ್ಯ ಬಸವ ತತ್ವ ಮುಖಾಂತರ ತಿಳಿದು ಬರುತ್ತದೆ.ಆದರೆ ಇಂದು ಕೆಲವು ಮಠಾಧಿಪತಿಗಳು ಹಾಗೂ ಕೆಲವು ಮೂಲಭೂತವಾದಿ ಸಂಘಟನೆಗಳು ಬಸವಣ್ಣನವರು ಯಾರನ್ನು ವಿರೋಧ ಮಾಡಿದ್ದಾರೆ ಅವರ ಜೊತೆ ಕೂಡಿಕೊಂಡು ಮೊಟ್ಟೆ ವಿರುದ್ಧ ಹೋರಾಟ ಮಾಡಲು ಪ್ರಯತ್ನ ಮಾಡುತ್ತಾ ಇದ್ದಾರೆ.

ಸಾಮಾಜಿಕ ತುಳಿತಕ್ಕೆ ಒಳಗಾದವರೂ , ಸಮಾಜದಿಂದ ಬಹಿಷ್ಕೃತ ಆಗಿದ್ದವರೂ, ಪುರೋಹಿತ ಶಾಹಿಗಳ ಶೋಷಣೆಗೆ ಗುರಿ ಆದವರನ್ನೂ ಮತ್ತು ತಳ ಕೆಳವರ್ಗದವರನ್ನು ಒಟ್ಟುಗೂಡಿಸಿ, ಹೋರಾಟ ಮಾಡಿ, ಅವರನ್ನು ಪುರೋಹಿತಶಾಹಿಗಳ ಕಪಿಮುಷ್ಠಯಿಂದ ಹೊರತಂದು ಅವರಿಗೆ ಘನತೆ, ಗೌರವ ಜೀವನ, ಮಾನವ ಹಕ್ಕು, ಸ್ವಾಂತಂತ್ರ್ಯ ತಂದುಕೊಟ್ಟಿದ್ದು ಬಸವಾದಿ ಶರಣರ ಚಳುವಳಿ.
ಇದು ಇಡೀ ವಿಶ್ವದಲ್ಲೆ ವಿನೂತನ ಮತ್ತು ಪ್ರಥಮ ಹೋರಾಟ ಆಗಿದೆ. ಆದರೆ ಇಂದು ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಂಡು ಬಸವ ಕ್ರಾಂತಿಯ ವಿರುದ್ಧವಾಗಿ ಪುರೋಹಿತಶಾಹಿ ಬ್ರಾಹ್ಮಣ,ಜೈನ ಮೂಲಭೂತವಾದಿಗಳನ್ನು ಒಟ್ಟುಗೂಡಿಸಿ, ಸಸ್ಯಾಹಾರ ನೆಪದಲ್ಲಿ, ದಲಿತರು – ಹಿಂದುಳಿದವರು- ಅಲ್ಪಸಂಖ್ಯಾತರು – ಸಾಮಾಜಿಕ ತುಳಿತಕ್ಕೆ ಒಳಗಾದವರ – ಸಮಾಜದಿಂದ ಬಹಿಷ್ಕೃತರ – ಸಾವಿರಾರು ವರ್ಷದಿಂದ ಶೋಷಣೆಗೆ ಗುರಿಯಾದವರ ಆಹಾರ ಪದ್ಧತಿ ವಿರುದ್ಧ ಹೋರಾಟ ಮಾಡುತ್ತಾ ಇದ್ದಾರೆ.

ಕೆಲವರು ಸಸ್ಯಹಾರಿಗಳಿಗೆ ಮೌಂಸಹಾರಿಗಳಿಗೆ ಪ್ರತೇಕ ಶಾಲೆ ಬೇಡಿಕೆ ಇಟ್ಟು,ಈ ಮೂಲಕ ಸಮಾಜದಲ್ಲಿ ಜಾತಿಯತೆ-ಅಸ್ಪೃಶ್ಯತೆ ಶಾಸ್ವತವಾಗಿ ಹೇರಲು ಹವಣಿಸುತ್ತಿದ್ದಾರೆ.ಈ ಮೂಲಕ ಬಸವಣ್ಣನವರ ಸಮಾನತೆ ನೀತಿ ವಿರುದ್ಧ ಅಸಮಾನತೆ ನೀತಿ ಜಾರಿಗೆ ತರಲು ಮುಂದಾಗಿದ್ದಾರೆ.

ಆಹಾರ ಕಟ್ಟಪ್ಪಣೆ ಇರುವ ಜೈನ್ ಧರ್ಮ ಇಡೀ ಭಾರತ ದೇಶದ ತುಂಬಾ ಇತ್ತು.ಆದರೆ, ಇಂದು ಕೇವಲ ಬೆರಳೆಣಿಕೆ ಅಷ್ಟೇ ಕುಟುಂಬ ಇವೆ.ಅವು ಕೇವಲ ನಗರ ಪ್ರದೇಶದಲ್ಲಿ ಮಾತ್ರ. ಅದಕ್ಕೆ ಮುಖ್ಯ ಕಾರಣ ಅವರ ಆಹಾರ ಪದ್ಧತಿಯ ಮಡಿವಂತಿಕೆ.ಇಂದು ಲಿಂಗಾಯತ ಧರ್ಮಕ್ಕೆ, ಬಸವ ತತ್ವಕೇ ತೊಡಕ್ಕಾಗಿದ್ದವರು ಲಿಂಗಾಯತ ಧರ್ಮದ ಧಾರ್ಮಿಕ ಮುಖಂಡರು(ಮೂಲಭೂತವಾದಿಗಳು) ಇವರು ಹೇಳೋದು ಜಾತಿ ರಹಿತ ಸಮಾಜ – ಸಮಾನತೆ, ಆದರೆ, ಮಾಡುವದು ಪಕ್ಕಾ ಜಾತಿಯತೆಯ ಕೆಲಸ. ಇಂದು ಕೆಲ ಮೂಲಭೂತವಾದಿ ಲಿಂಗಾಯತರು ಮತ್ತು ವೈದಿಕರು ಒಂದು ನಾಣ್ಯದ ಎರಡು ಮುಖಗಳಂತೆ ಆಗಿದ್ದಾರೆ. ವೈದಿಕರು ಲಿಂಗಾಯತ ಮುಖವಾಡ ಹಾಕಿ ಬಸವ ತತ್ವ ಅಪಚಾರ ಮಾಡುತ್ತಾ ಇದ್ದಾರೆ. ಬಸವಾದಿ ಶರಣರು ಅಪ್ಪಿಕೊಂಡಿದು ಕೆಳ ಜಾತಿಯವರನ್ನ. ವಿರೋಧ ಮಾಡಿದ್ದು ವೈಧಿಕರನ್ನ. ಆದರೆ, ಇಂದಿನ ಲಿಂಗಾಯತ ಧರ್ಮದ ಧಾರ್ಮಿಕ ಮುಖಂಡರು, ಮಠಾಧಿಪತಿಗಳು ಹಾಗೂ ಸ್ವಾಮಿಗಳು ಅಪ್ಪಿಕೊಳ್ಳುತ್ತ ಇರೋದು ಬ್ರಾಹ್ಮಣರ ಆರೆಸ್ಸೆಸ್ ಹಿಂದೂ ಸಂಘಟನೆಯನ್ನು. ವಿರೋಧ ಮಾಡುತ್ತಿರುವದು ಕೆಳ ಜಾತಿ ದಲಿತ ಹಿಂದುಳಿದವರನ್ನು.

ಕಲ್ಯಾಣ ರಾಜ್ಯ ಆಳಿದವರು ಜೈನರು, ಆದರಿಂದಲೆ ಬಸವಣ್ಣನವರ ಜೈನರ ನಂಬುಗೆ ವಿರುದ್ಧ ವಚನಗಳಲ್ಲಿ ತಿಳಿಸಿ ಹೇಳಿದ್ದಾರೆ. ಎಲ್ಲಾ ಧರ್ಮದಲ್ಲಿ ೫೦ % ಜನ ತಮ್ಮ ಧರ್ಮದ ಕಟ್ಟಳೆ ಪಾಲಿಸುವುದಿಲ್ಲ, ಅದು ಲಿಂಗಾಯತ – ಬೌದ್ಧ – ಮುಸ್ಲಿಮ – ಕ್ರಿಶ್ಚಿಯನ್ – ಸಿಖ್ – ಹಿಂದೂ ಯಾರೇ ಆಗಲಿ. ಮುಖ್ಯ ಅಂದರೆ ತತ್ವ ಪಾಲನೆಯಲ್ಲಿ ಮಾನವೀಯತೆ ಇರಬೇಕು, ಭೇದ ಭಾವ ಮಾಡಬಾರದು, ಮೂಢ ನಂಬಿಕೆ ಆಚರಣೆ ಮೌಢ್ಯ ಪಾಲಿಸಬಾರದು.

ಲಿಂಗಾಯತ ಧರ್ಮ ಕಠೋರ ತತ್ವ ಅಲ್ಲ, ಸರಳತೆ ಧರ್ಮ,ಎಲ್ಲರನ್ನೂ ಒಳಗೊಳ್ಳುವ inclusiveness ಧರ್ಮ. ಅದಕ್ಕೆ ಮೌಂಸಹಾರಿ ಮಧ್ಯ ವ್ಯಸನಿ ಇದ್ದರು ಅವರನ್ನು ಸ್ವಾಗತ ಮಾಡಿದ್ದಾರೆ.
ಬಸವಣ್ಣನವರ ವಚನ

“ಎಡಗೈಯಲ್ಲಿ ಖಡ್ಗ, ಬಲಗೈಯಲ್ಲಿ ಮೌಂಸ, ಬಾಯಿಯಲ್ಲಿ ಸೂರೆ ಗಡುಗೆ, ಕೊರಳಲ್ಲಿ ದೇವರಿರಲು ಅವರ ಸಂಗನೆಂಬೇ ಲಿಂಗನೆಂಬೇ, ಸಾಕ್ಷಾತ ಕೂಡಲಸಂಗನ ಮುಖಲಿಂಗಿಗಳೆಂಬೇ.”

ನಮ್ಮ ತತ್ವ ವಿರೋಧ ಮಾಡುವದು ಅಲ್ಲ, ಅವರನ್ನು ತಿಳಿಸಿ ಹೇಳಿ ಬದಲಾವಣೆ ಮಾಡುವ ತತ್ವ. ಪರಿವರ್ತನೆ ದಾರಿ ಮಾಡಿಕೊಡಬೇಕು, ಅದನ್ನೇ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿ ಹೇಳಿದ್ದು, “ಲಿಂಗಾಯತರ ರೈಲು ಗಾಡಿಯ ಡಬ್ಬಿಗಳಲ್ಲಿ ಒಂದು ಮೌಂಸಹಾರ ಡಬ್ಬಿ ಇದ್ದರು ಪರವಾ ಇಲ್ಲ ಅಂತ”. ಚಿಕ್ಕ ಮಕ್ಕಳು ತಿಳಿಯದೆ ನೆಲದ ಮೇಲೆ ಬಿದ್ದ ಏನೇನೋ ತಿನ್ನುತ್ತವೆ, ಅದಕ್ಕೆ ಮಕ್ಕಳು ನಮ್ಮವು ಅಲ್ಲ ಎಂದು ತಂದೆ ತಾಯಿ ಹೊರಹಾಕುವದಿಲ್ಲ. ಮಕ್ಕಳಿಗೆ ತಿನ್ನಬಾರದು ಎಂದು ತಿಳುವಳಿಕೆ ಮೂಡಿಸುತ್ತಾರೆ. ಅದನ್ನೇ ಧರ್ಮ ಗುರುಗಳು ಮಠಾಧೀಶರು ಸ್ವಾಮಿಗಳು ಮಾಡಬೇಕು. ಅದು ಬಿಟ್ಟು ಕರ್ತವ್ಯ ವಿಮುಖರಾಗಿ ರಾಜಕೀಯ ನಾಯಕರ ಹಾಗೆ ಹೋರಾಟ ಚೀರಾಟ ಮಾಡುತ್ತಾ ಇದ್ದಾರೆ. ಬೇರೆಯವರ ಮಕ್ಕಳು ಏನು ತಿನ್ನಬೇಕು ಎಂದು ಹೇಳಲು ನಾವು ಯಾರು? ನಮ್ಮ ಸಂವಿಧಾನದಲ್ಲಿ ಆಹಾರ ಸ್ವಾತಂತ್ರ್ಯ ಕೊಟ್ಟಿದ್ದಾರೆ, ಆಹಾರ ಸ್ವಾಂತಂತ್ರ್ಯ ವಿರುದ್ಧ ಮಾಡುವದು ಕ್ರಿಮಿನಲ್ ಅಪರಾಧ. ನಮ್ಮ ಸಮುದಾಯದ ಆಹಾರ ಪದ್ಧತಿ ನೀವು ಬಳಸಿ ಎಂದು ಹೇರುವ ಉದ್ಧಟತನ ನಮಗೇಕೆ? ಹಾಗಾದರೆ ಜೈನರು ಇರುಳಿ ಬೆಳ್ಳುಳ್ಳಿ ತಿನ್ನಬಾರದು ಅನ್ನುತ್ತಾರೆ. ಮತ್ತೊಬ್ಬರು ಮಸಾಲೆ ರಾಜಸ ತಾಮಸ ಆಹಾರ , ಸಾತ್ವಿಕ ಆಹಾರ ಕೊಡಿ ಅನ್ನುತ್ತಾರೆ, ಆವಾಗ ಜನಸಾಮಾನ್ಯರ ತಿನ್ನುವ ಪದ್ಧತಿ ಮೇಲೆ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ. ಮೊಟ್ಟೆ ವಿತರಣೆಗೆ ಪೌಲ್ಟ್ರಿ ಫಾರ್ಮ್ ಅವರು ಸರಕಾರದ ಮೇಲೆ ಒತ್ತಡ ಹಾಕುತ್ತಾ ಇದ್ದಾರೆ ಎಂದು ನಿಂದಿಸುತ್ತಾರೆ, ಹಾಗಾದರೆ ಬೆಳೆ ಕಾಳು ಕೊಡಿ ಎಂದು ದಾಲ್ ಮಿಲ್ ವ್ಯಾಪಾರಿಗಳ ಪ್ರಭಾವ ಇರಬಹುದು ಅಲ್ವೇ?

ಸರಕಾರಿ ಶಾಲೆ ಸಾರ್ವಜನಿಕ ಸಂಸ್ಥೆ; ಧಾರ್ಮಿಕ ಸಂಸ್ಥೆ ಅಲ್ಲ, ಧಾರ್ಮಿಕ ಮುಖಂಡರ ಆಲಿಸಲು ಸಾಧ್ಯ ಇಲ್ಲ. ಸರಕಾರಿ ಶಾಲೆಯಲ್ಲಿ ಎಲ್ಲಾ ಧರ್ಮ, ಜಾತಿ, ಸಮುದಾಯದ ಮಕ್ಕಳು ಇರುತ್ತಾರೆ‌. ಅಲ್ಲಿ ಏಕರೂಪದ ಆಹಾರ ಕೊಡಲು ಸಾಧ್ಯ ಇಲ್ಲ.

ಮತ್ತೆ ನೀವು ಏಕರೂಪ ಪಠ್ಯ ಬೇಕು ಎಂದು ಹೋರಾಟ ಮಾಡಿದರೆ ಹೇಗೆ? ಪಠ್ಯ ಪುಸ್ತಕದಲ್ಲಿ ಕೂಡ ಎಲ್ಲಾ ಧರ್ಮ ಜಾತಿ ಇತಿಹಾಸ ವಿಷಯಗಳು ಇರುತ್ತವೆ, ಮತ್ತೆ ಕೆಲವರು ಒಂದೇ ಧರ್ಮ ಸಮುದಾಯದ ವಿಷಯ ಇರಲಿ, ಬೇರೆ ವಿಷಯಗಳ ಪಾಠ ಬೇಡ ಅಂದರೆ ಹೇಗೆ?

ಭಾರತದಲ್ಲಿ ಬಡತನದಿಂದ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯರಲ್ಲಿ ಅಪೌಷ್ಠಿಕತೆ ಕಡಿಮೆ ಆಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದಾರೆ, ಆದರಿಂದ ಹಿಂದುಳಿದ ಪ್ರದೇಶದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಲು ಕೇಂದ್ರ ಸರ್ಕಾರ – ರಾಜ್ಯ ಸರಕಾರ ಜಂಟಿಯಾಗಿ ಮಕ್ಕಳಿಗೆ ಮೊಟ್ಟೆ, ಹಾಲು, ಬಾಳೆಹಣ್ಣು, ಶೇಂಗಾ ಚಿಕ್ಕಿ ಕೊಡಲು ನಿರ್ಣಯ ತೆಗೆದುಕೊಂಡಿದೆ. ಅದು ಸ್ವಾಗತಾರ್ಹವಾಗಿದೆ. ಮೊಟ್ಟೆ ತಿನ್ನುವ ಮಕ್ಕಳು ಮೊಟ್ಟೆ ತಿನ್ನುತ್ತಾರೆ, ಬಾಳೆಹಣ್ಣು ಹಾಲು ಕುಡಿಯುವ ಮಕ್ಕಳು ಅದನ್ನು ಸೇವಿಸಲು ಸ್ವತಂತ್ರರು. ಇದು ಮಕ್ಕಳ ಪಾಲಕರ ಆಯ್ಕೆ, ಮಠಾಧಿಪತಿಗಳು ಏಕೆ ವಿರೋಧ ಮಾಡುತ್ತಾ ಇದ್ದಾರೆ?

ಕಲ್ಯಾಣ ಕರ್ನಾಟಕ ಭಾಗ ನೂರಾರು ವರ್ಷದಿಂದ ಹಿಂದುಳಿದ ಪ್ರದೇಶ, ಈ ಪ್ರದೇಶದ ಅಭಿವೃದ್ಧಿಗೆ ತೊಡಕಾಗಿದ್ದವರು ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಜನ. ಅದಕ್ಕೆ ಮತ್ತೆ ದಕ್ಷಿಣ, ಮಧ್ಯ ಕರ್ನಾಟಕ ಮಠಾಧಿಪತಿಗಳು , ಸಂಘಟನೆಗಳು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿರೋಧ ಮಾಡುತ್ತಾ ಇದ್ದಾರೆ. ಅದಕ್ಕೆ ಈ ಭಾಗದ ಕೆಲವರು ಕೈ ಜೋಡಿಸಿದ್ದಾರೆ. ನಿಮಗೆಲ್ಲ ಮಕ್ಕಳ ಜೀವ ಮುಖ್ಯವೋ? ಮೊಟ್ಟೆ ಮುಖ್ಯವೋ ? ನಿಮಗೆ ಧರ್ಮ ಪ್ರತಿಷ್ಠೆ ಮುಖ್ಯವೋ? ಬಡ ಮಕ್ಕಳ ಜೀವದ ಜೊತೆ ಚೆಲ್ಲಾಟ ಮಾಡಲು ಯಾವ ಧರ್ಮ ಹೇಳುತ್ತದೆ? ಒಂದು ವೇಳೆ ಜೀವಕ್ಕಿಂತ ನೀತಿ ತತ್ವ ದೊಡ್ಡದು ಅಂದರೆ,ಆ ಧರ್ಮ ಯಾವ ಕೆಲಸಕ್ಕೆ? ಜೀವನಶೈಲಿ ಉತ್ತಮಗೊಳಿಸಿ ಸುಖ ಶಾಂತಿ ನೆಮ್ಮದಿ ಆನಂದ ನೆಲೆಸುವಂತೆ ಮಾಡುವುದೇ ಧರ್ಮದ ಧೈಯ ಆಗಬೇಕು.

ಆದರೆ, ಇಂದು ಕೆಲ ಮೂಲಭೂತವಾದಿಗಳಿಂದ ಸಮಾಜದಲ್ಲಿ, ಲಿಂಗಾಯತ ಧರ್ಮದ ತತ್ವ ನೀತಿ ಅಪಹಾಸ್ಯ ಆಗುತ್ತಾ ಇದೆ. ಲಿಂಗಾಯತರು ಸಮಾಜದಲ್ಲಿ ಕ್ಷೋಬೆ ಗೊಂದಲ ನಿರ್ಮಾಣ ಮಾಡಬಾರದು. ಈ ಹೋರಾಟ ಲಿಂಗಾಯತರ ಹೇಗಲ ಮೇಲೆ ಇಟ್ಟು ಹೊಡೆಯುತ್ತಾ ಇರುವ ವೈದಿಕರ ಕುತಂತ್ರ. ಲಿಂಗಾಯತರನ್ನು ಸಮಾಜದಲ್ಲಿ ಕೆಟ್ಟ ಹೆಸರು ತರಲು ಒಂದು ಹುನ್ನಾರ, ನಮ್ಮ ಜೊತೆ ಇರುವ ದಿನ ದಲಿತ ಹಿಂದುಳಿದವರ ಜೊತೆ ವೈರತ್ವ ಬೆಳೆಸುವ ಸಾಧ್ಯತೆಗಳಿವೆ. ಲಿಂಗಾಯತ ಧರ್ಮದ ಮುಖಂಡರು, ಮಠಾಧಿಪತಿಗಳು ಸಂಘಟನೆಗಳು ಧರ್ಮ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು.ಇದನು ಅರಿತು ಎಲ್ಲರೂ ತಮ್ಮ ತಮ್ಮ ಕರ್ತವೇ ಚಾಚೂ ತಪ್ಪದೆ ಮಾಡಿದರೆ ಸಮಾಜ ಸುಧಾರಣೆ ಆಗುತ್ತದೆ.

ಇವಾಗ ಲಿಂಗಾಯತ ಧರ್ಮದ ಯುವಕರು, 99 ಉಪಪಂಗಡಗಳದವರು, ಬಸವ ತತ್ವ ಉಳಿಸಲು & ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಬೇಕು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!