ಒಂದಿನಿತೂ ಭಯವಿಲ್ಲದೆ ಒಬ್ಬ ಯಕಶ್ಚಿತ್ ಮನುಷ್ಯ ಸಂಶೋಧಕರು, ಇತಿಹಾಸಕಾರರು ಇದು ಅಕ್ಕನಾಗಮ್ಮನವರ ಐಕ್ಯ ಸ್ಥಳ ಎಂದು ಗುರುತು ಮಾಡಿದ ಐತಿಹಾಸಿಕ ಅಕ್ಕ ನಾಗಮ್ಮನವರ ಗದ್ದುಗೆ ಮೇಲೆ ಜೆಸಿಬಿ ಹತ್ತಿಸುತ್ತಾನೆಂದರೆ ಏನರ್ಥ? ಆ ಧೈರ್ಯ ಅವನಿಗೆ ಎಲ್ಲಿಂದ ಬಂತು? ನಿನ್ನೇ ನಡೆದ ಈ ಅಹಿತಕರ ಘಟನೆಯಿಂದ ಹನ್ನೆರಡನೆಯ ಶತಮಾನದಲ್ಲಿ ದುಡಿಯುವ ವರ್ಗದ ಮಧ್ಯೆ ಹುಟ್ಟಿದ ಲಿಂಗಾಯತ ಧರ್ಮ ಅನಾಥ ಧರ್ಮವೆಂದು ಮತ್ತೊಮ್ಮೆ ಸಾಬೀತು ಆಗುತ್ತದೆ!
ಈ ಚಿತ್ರಗಳೇ ಮಾತನಾಡುತ್ತಿದೆ!
1.ನಾಲ್ಕು ವರ್ಷಗಳ ಹಿಂದೆ (ಗದ್ದುಗೆಯ ಪಕ್ಕದಲ್ಲಿ ಯಾವುದೇ ಸಮಾಧಿಗಳು ಇರಲಿಲ್ಲ)

2. ಒಂದು ತಿಂಗಳ ಹಿಂದೆ (ಗದ್ದುಗೆಗೆ ಜನರು ಭಕ್ತಿಯಿಂದ ಪೂಜಿಸುತ್ತಿರುವುದು)

3. ಒಂದು ದಿನದ ಹಿಂದೆ. (ಏಕಾಏಕಿ ಗದ್ದುಗೆ ಮೇಲೆ ಜೆಸಿಬಿ ಹತ್ತಿಸಿ ಅದು ನಿರ್ನಾಮ ಮಾಡಲು ಪ್ರಯತ್ನಿಸಿದ್ದು)

4. ಇದ್ದಕಿದ್ದಂತೆ ಜಮೀನಿನ ಮಾಲಿಕ 2022 ರಲ್ಲಿ 1934ರಿಂದ ನಿಧನ ಹೊಂದಿರುವವರ ಹತ್ತಾರು ಸಮಾಧಿ ನಿರ್ಮಾಣ ಮಾಡುತ್ತಾನೆ.

ಇದನ್ನೂ ಓದಿ : ಈಗಲಾದರೂ ತರೀಕೆರೆಯ ಅಕ್ಕನಾಗಮ್ಮನ ಸಮಾಧಿಯನ್ನಾದರೂ ಉಳಿಸಿಕೊಳ್ಳುವರೆ?

The Politic is now on WhatsApp. Follow our channel for sharp analysis and opinions on the latest developments.





















