
ಎಂ ಎಂ ಕಲಬುರ್ಗಿಯವರನ್ನು ಹತ್ಯೆ ಮಾಡಿದ್ದು ಅವರು ಕಲ್ಪಿತ ದೇವರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಕಾರಣಕ್ಕಾಗಲ್ಲ. ‘ಲಿಂಗಾಯತ ಧರ್ಮ ಅವೈದಿಕ ಧರ್ಮ’, ‘ಲಿಂಗಾಯತ ಸಮುದಾಯ ಅಲ್ಪಸಂಖ್ಯಾತ ಸಮುದಾಯ’ ಎಂದು ಅವರು ತಮ್ಮ ಸಂಶೋಧನೆಯ ಮೂಲಕ ಸಿದ್ಧ ಮಾಡಿ ತೋರಿಸಿದ್ದಕ್ಕೆ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅವರನ್ನು ಕೊಂದವರಾರು? ಯಾಕೆ ಕೊಂದರು? ಎಂಬ ಪ್ರಶ್ನೆಯ ಉತ್ತರದಲ್ಲೇ ಸಮುದಾಯದ ಮತ್ತು ಈ ನಾಡಿನ ಭವಿಷ್ಯ ಅಡಗಿದೆ. ಅವರು ದೈಹಿಕವಾಗಿ ಎಂ ಎಂ ಕಲಬುರ್ಗಿಯವರನ್ನು ಕೊಂದಿದ್ದಾರೆ ಅಷ್ಟೇ. ಆದರೆ, ಅವರ ಎದೆಯಿಂದ […]









