ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಿಂದ ಬಿಜೆಪಿ ಆರಂಭಿಸಿದ ಪಾದಯಾತ್ರೆ ೫ ದಿನ ಪೂರ್ಣಗೊಳಿಸಿದೆ. ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಾಗುತ್ತಿರುವ ಈ ಬಳ್ಳಾರಿ ಚಲೋ ಪಾದಯಾತ್ರೆ ಹಲವು ಏಳು – ಬೀಳುಗಳ ನಡುವೆಯೂ ಕಡುಬಿಸಿಲಿನಲ್ಲಿ ಬಿರುಸಾಗಿಯೇ ಸಾಗುತ್ತಿದೆ. ಈ ಯಾತ್ರೆಯಿಂದ ಹಲವರು ಅಂತರ ಕಾಪಾಡಿಕೊಂಡಿದರೆ, ಕೆಲವರು ಚಾಲನೆ ನೀಡಲು ಆಗಮಿಸಿ ಮತ್ತೆ ಈ ಕಡೆ ತಲೆಯೇ ಹಾಕಿಲ್ಲ. ಒಡೆದ ಮನೆಯಾಗಿರುವ ಬಿಜೆಪಿಗೆ ಈ ಪಾದಯಾತ್ರೆ ಬಲ ತಂದುಕೊಡುತ್ತದೆಯೋ ಅಥವಾ ಒಡಕು ಇನ್ನಷ್ಟು ಹೆಚ್ಚಿಸುತ್ತದೆಯೋ?
ಪೆಂಗ್ವಿನ್ ಸರ್ಕಾರದ ಒತ್ತಡಕ್ಕೆ ಒಳಗಾಗಿತ್ತೇ?

ದೇಶದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಪೆಂಗ್ವಿನ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ʻಬಿಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಪ್ರಕಟಿಸಲು ಹಿಂದೆ ಸರಿಯುವ ಮೂಲಕ ಈಗ ಮತ್ತೇ ಸುದ್ದಿಯಲ್ಲಿದೆ. ಇದು ನಾನಾ ಚರ್ಚೆಗೆ ಒಳಗಾಗಿದೆ. ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷದ ಆಡಳಿತ ಬಗ್ಗೆ ವಿಮರ್ಶೆಯಿದೆ. ಮೋದಿಯವರು 2004ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ಅವರನ್ನು ʻಜರ್ಸಿ ಕೌʼ ಎಂದು ಕರೆದಿದ್ದರ ಬಗ್ಗೆ ಆಕ್ರೋಶವಿದೆ. ಭಾರತದ ಕೆಲ ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದ್ದರ ಬಗ್ಗೆ ಉಲ್ಲೇಖವಿದೆ. ಸಂಘ ಪರಿವಾರದ ಬಗ್ಗೆ ಪ್ರಶ್ನೆಗಳಿವೆ. ಹೀಗಾಗಿಯೇ ಪೆಂಗ್ವಿನ್ ಸರ್ಕಾರದ ಒತ್ತಡಕ್ಕೆ ಒಳಗಾಗಿ ಪುಸ್ತಕ ಪ್ರಕಟಿಸಲು ಹಿಂದೆ ಸರಿದಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಮುಂದೊಂದು ದಿನ ಪೆಂಗ್ವಿನ್ ಮಾತಾಡಬಹುದು.
ಬಸವರಾಜ ಕನ್ನಾಳೆ: ಅಸಲಿ ಕಥೆ

ಈಗ ರಾಜ್ಯದ ಮಾಧ್ಯಮಗಳ, ಸರ್ಕಾರಿ ನೌಕರಿಯ ಕನಸು ಕಟ್ಟಿಕೊಂಡಿರುವ ಯುವಜನತೆಯ ಮತ್ತು ಜನರ ಬಾಯಲ್ಲಿ ಒಂದೇ ಹೆಸರು ಅದು ಬಸವರಾಜ ಕನ್ನಾಳೆ. ಮೊದಲು ಈತನ ಧಿಡೀರ್ ಶ್ರೀಮಂತಿಕೆ ಕಂಡು–ಕೇಳಿ, ಇವನ ಪರಿಚಯಸ್ಥರೇ ಶಾಕ್ ಆಗಿದ್ದರು. ಈಗ ಇಡೀ ರಾಜ್ಯವೇ ಶಾಕ್ ಆಗಿದೆ.
2019 ರಲ್ಲಿ ಈಗಿನ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಬಳಿ ಕೇವಲ 12 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದವನು, ಈಗ ವಿಮಾನದಲ್ಲಿ ಫಾರೆನ್ ಟೂರ್‌ಗೆ ಹೋಗುತ್ತಿದ್ದಾನೆ. ತನಗೊಂದು-ತಂದೆಗೊಂದು ಐಷಾರಾಮಿ ಕಾರು, ಹತ್ತಾರು ಎಕರೆ ಜಮೀನು, ವಾಣಿಜ್ಯ ಮಳಿಗೆಗಳು, ಬೆಂಗಳೂರು ಮತ್ತು ಬೀದರ್‌ನಲ್ಲಿ ಭವ್ಯ ಮನೆ, ನಿವೇಶನಗಳು, ನಾಲ್ಕಾರು ಬಸ್‌ಗಳು, ಹೈಟೆಕ್ ಡೈರಿ ಫಾರ್ಮ್‌ಹೌಸ್ …..ಹೀಗೆ ಹನುಮಂತನ ಬಾಲದಂತೆ ಈತನ ಶ್ರೀಮಂತಿಕೆಯ ಪಟ್ಟಿ ಉದ್ದವಾಗಿ ಬೆಳೆಯುತ್ತಲೇ ಹೋಗುತ್ತದೆ ವಿನಾ ಅದು ಮುಗಿಯುವುದಿಲ್ಲ.
ಇವನ ಈ ಸಾಹಸವನ್ನು ಮೆಚ್ಚಿ, ಬಿಜೆಪಿಯ ನಾಯಕರು ರಾಜ್ಯಪಾಲರಿಗೆ ಈತನ ಹೆಸರನ್ನು ಶಿಫಾರಸು ಮಾಡಿ, ಇವನನ್ನು ಸಿಂಡಿಕೇಟ್ ಸದಸ್ಯನ್ನಾಗಿ ಮಾಡಿದ್ದಾರೆ. ವಿಶ್ವವಾಣಿಯ ವಿಶ್ವೇಶ್ವರ ಭಟ್‌ರು ಒಂದು ಹೆಜ್ಜೆ ಮುಂದೆ ಹೋಗಿ ಈತನಿಗೆ ದೂರದ ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 2, 2026 ರಂದು ʼವಿಶ್ವವಾಣಿ GLOBAL ACHIEVERS AWARDʼ ಅನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಸಾನ್ನಿಧ್ಯದಲ್ಲಿ ಪ್ರಧಾನ ಮಾಡಿದ್ದಾರೆ. ಅನೇಕ ಕಡೆ ಸನ್ಮಾನಗಳಿಗೆ ಪಾತ್ರನಾಗಿದ್ದಾನೆ; ಕೆಲ ಮಠಾಧೀಶರ ಹೊಗಳಿಕೆಗೂ ಪಾತ್ರನಾಗಿದ್ದಾನೆ.
ಈತ ಇದೆಲ್ಲಾ ಕಷ್ಟಪಟ್ಟು ದುಡಿದು ಸಂಪಾದಿಸಿದ್ದಲ್ಲ; ಕರ್ನಾಟಕ ಲೋಕಸೇವಾ ಆಯೋಗಕ್ಕೆ ನುಗ್ಗಿ, ಆಯೋಗದ ಪರೀಕ್ಷಾ ನಿಯಂತ್ರಕ, ಅಧ್ಯಕ್ಷರ ಜತೆಗೆ ಸ್ನೇಹ ಬೆಳೆಸಿ ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು, ಅವರ ಬದುಕನ್ನು ಕತ್ತಲೆಯ ಕೂಪಕ್ಕೆ ತಳ್ಳಿ ಸಂಪಾದಿಸಿದ್ದು. ಇವನ ಈ ಘನಂದಾರಿ ಕೆಲಸದ ಪರಿಣಾಮದಿಂದಾಗಿ ಯಾವುದಾದರೊಂದು ಸರ್ಕಾರಿ ನೌಕರಿ ಪಡೆಯಲು ಹತ್ತಾರು ವರ್ಷಗಳ ಕಾಲ ಮನೆಮಠ, ತಂದೆತಾಯಿ, ಒಡಹುಟ್ಟಿದವರನ್ನು ಬಿಟ್ಟು ಪಟ್ಟಣಕ್ಕೆ ಸೇರಿ, ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದ ಅದೆಷ್ಟೋ ವಿದ್ಯಾರ್ಥಿಗಳು ನೌಕರಿ ಸಿಗದಿದ್ದಕ್ಕಾಗಿ ಇಂದು ಡಿಪ್ರೆಶನ್‌ಗೆ ಒಳಗಾಗಿದ್ದಾರೆ. ಎಷ್ಟೋ ಜನರು ಮದುವೆಯ ವಯಸ್ಸು ದಾಟಿದರೂ, ಇನ್ನೂ ಮದುವೆಯಾಗಿಲ್ಲ. ತಮ್ಮ ಮಕ್ಕಳ ಈ ಸ್ಥಿತಿ ಕಂಡು, ಅನೇಕ ಪಾಲಕರು ದಿನಾಲೂ ಒಳಗೊಳಗೆ ರೋಧಿಸುತ್ತಿದ್ದಾರೆ. ಕಣ್ಣೀರಿಡುತ್ತಿದ್ದಾರೆ.
ಆದಾಗ್ಯೂ ಇದಾವುದೂ ರಾಜಕಾರಣಿಗಳ ಕಣ್ಣಿಗೆ ಕಾಣುತ್ತಿಲ್ಲ. ಹೃದಯಕ್ಕೆ ತಟ್ಟುತ್ತಿಲ್ಲ. ತಾವು ಮಾತ್ರ ಯಥಾಪ್ರಕಾರ ಕೆಸರೆರಚಾಟದಲ್ಲಿ ತೊಡಗಿ, ಆರೋಪ – ಪ್ರತ್ಯಾರೋಪದಲ್ಲಿ ಮಗ್ನರಾಗಿದ್ದಾರೆ. ಆಡಳಿತ ಪಕ್ಷದವರು ಇವನು ʼನಿಮ್ಮವನೆಂದುʼ, ವಿರೋಧ ಪಕ್ಷದವರು ʼಇವನು ನಮ್ಮವನಲ್ಲ – ನಮ್ಮವನಲ್ಲʼ ಎಂದು ಹೇಳಿ ಮುಗುಮ್ಮಾಗಿದ್ದಾರೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸೋಣ, ಈಗಲಾದರೂ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರೋಣವೆಂದು ಅವರೂ ಹೇಳುತ್ತಿಲ್ಲ, ಇವರೂ ಕೇಳುತ್ತಿಲ್ಲ. ಏಕೆಂದರೆ ಇವರು ರಾಜಕಾರಣಿಗಳು. ಇವರು ಹೀಗೇ.
ಈ ಮಧ್ಯೆ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್‌ರು ಮಾತ್ರ ನಾಪತ್ತೆಯಾದಂತಿದೆ. ಈವರೆಗೂ ಅವರೆಲ್ಲೂ ಈ ವಿಷಯದ ಕುರಿತು ತುಟಿ ಬಿಚ್ಚಿಲ್ಲ. ಅವರ ಪ್ರತಿಕ್ರಿಯೆಗಾಗಿ ಇಡೀ ನಾಡೇ ಅವರ ಕಡೆ ನೋಡುತ್ತಿದೆ. ಏಕೆಂದರೆ, ಕನ್ನಾಳೆ ಜೊತೆಗೆ ಅಶ್ವಥ್ ನಾರಾಯಣರು ತೀರಾ ತೀರಾ ಆಪ್ತರಾಗಿದ್ದರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರಿಬ್ಬರ ನೂರಾರು ಪಟಗಳೇ ಹೇಳುತ್ತಿವೆ. ಕನ್ನಾಳೆ ತನ್ನ ಮಗನ ಹೆಸರನ್ನು ʼಅಶ್ವಥ್ ನಾರಾಯಣ್ʼ ಎಂದು ನಾಮಕರಣ ಮಾಡಿದ್ದಾನೆ. ಇಂದು ʼಅಶ್ವಥ್ ನಾರಾಯಣ್ ಕನ್ನಾಳೆ ಟ್ರಾವೆಲ್ಸ್ʼ ಎಂಬ ಹೆಸರಿನ ಬಸ್‌ಗಳು ರಸ್ತೆಯ ಮೇಲೆ ಓಡಾಡುತ್ತಿವೆ. ಇವೆಲ್ಲವೂ ಏನು ಹೇಳುತ್ತಿವೆ?
ಈ ಕನ್ನಾಳೆ ಅಶ್ವಥ್ ನಾರಾಯಣ ಅವರಿಗೆ ಆಪ್ತರಾಗುವ ಮುಂಚೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಆರು ತಿಂಗಳು ತಂಗಿ, ಅಲ್ಲಿನ ಸ್ವಾಮೀಜಿಗಳನ್ನು ತಬ್ಬಿಕೊಳ್ಳುವಷ್ಟು ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ನಂತರ ವಿಜಯಪುರದ ಸಿದ್ದೇಶ್ವರ ಸ್ವಾಮಿಗಳ ಪ್ರೀತಿಗೆ ಪಾತ್ರರಾಗಿ, ಅವರ ಮೂಲಕ ಯಡಿಯೂರಪ್ಪ ಅಂಗಳಕ್ಕೆ ಕಾಲಿಟ್ಟಿದ್ದ. ಆದರೆ, ಯಡಿಯೂರಪ್ಪ ಇವನ ಚಾಲಾಕಿತನ ಕಂಡು, ಇವನನ್ನು ಸನಿಹಕ್ಕೆ ಬಿಟ್ಟುಕೊಳ್ಳಲಿಲ್ಲ. ಆಮೇಲೆ ಇನ್ನೂ ನಾಲ್ಕಾರು ಬಿಜೆಪಿಯ ರಾಜಕಾರಣಿಗಳ ಬಾಗಿಲು ತಟ್ಟಿದರೂ, ಅವರೂ ಇವನನ್ನು ಸನಿಹಕ್ಕೆ ಬರಲು ಬಿಡಲಿಲ್ಲ.
ಇವನ ಕುರಿತು ಕೆದಕಿದಷ್ಟೂ ಹೊಸ ಹೊಸ ರಾಡಿ ಹೊರಬರುತ್ತದೆ.
ಖರ್ಗೆಯವರಿಗಾದ ಅವಮಾನಕ್ಕೆ ಎಫ್‌ಐಆರ್ ಇಲ್ಲ!

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಆಗಸ್ಟ್ 8 ರಂದು ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರಾಖಂಡದ ರಾಮಲೀಲಾ ಮೈದಾನದ ವೇದಿಕೆ ಹತ್ತಿದರು. ಮರುದಿನ ಆಗಸ್ಟ್ 10 ರಂದು ಶ್ರೀರಾಮ ಸೇನೆ ಆ ವೇದಿಕೆಯನ್ನು ಗೋಮೂತ್ರ, ಹಾಲಿನಿಂದ ‘ಶುದ್ಧೀಕರಣʼ ಮಾಡಿದೆ.ಈ ಘಟನೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಖರ್ಗೆಯವರು ಈ ಕುರಿತು ರಾಜ್ಯಸಭೆಯ ಒಳಗೂ, ಹೊರಗೂ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ ಮತ್ತು ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ ಅವರಿಗೆ ಪತ್ರವೂ ಬರೆದಿದ್ದಾರೆ.
ಆದರೆ, ಈವರೆಗೂ ಯಾರ ವಿರುದ್ಧವೂ ಎಫ್‌ಐಆರ್ ದಾಖಲಾಗಿಲ್ಲ. ತದ್ವಿರುದ್ಧವಾಗಿ ಈ ಘಟನೆಯನ್ನು ಖಂಡಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅದು ಶುದ್ಧೀಕರಣದ ಮುಂಚೂಣಿಯಲ್ಲಿದ್ದ ವಾಲ್ಮೀಕಿ ಸಮುದಾಯದ ಅಮಿತ್ ಕುಮಾರ್ ಅವರು ನೀಡಿದ ದೂರನ್ನು ಆಧರಿಸಿ.
ಇದು ಉತ್ತರಾಖಂಡ ಪೊಲೀಸರು ಬಿಜೆಪಿ ಪಕ್ಷದ ಅಣತಿಯಂತೆ ಕೆಲಸ ಮಾಡುತ್ತಿರುವ ಸೂಚನೆ ಅಲ್ಲದೇ ಮತ್ತೇನು?
ಇಂದು ಎಂ ಎಂ ಕಲಬುರ್ಗಿ ಹತ್ಯೆಯಾದ ದಿನ

ಲೋಕಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್!?

ದೇಶದ ರಾಜಕೀಯ ಪಡಸಾಲೆಯಲ್ಲಿ ಭಾರೀ ಸಂಚಲನ ಮೂಡಿಸುವಂತಹ ವಿದ್ಯಮಾನವೊಂದು ನಡೆದಿದೆ. ಕಳೆದ 12 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭೆಯ ಸ್ಪೀಕರ್ ಅವರ ನಡೆಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್ ಮತ್ತು ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿರುವುದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾದ ಪ್ರಮುಖ ಭಿನ್ನಮತದ ನಂತರ, ಸುಮಾರು 20 ಬಂಡಾಯ ಸಂಸದರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದು ಪ್ರತ್ಯೇಕ ಗುಂಪು ರಚಿಸಿಕೊಂಡಿದ್ದರು. ಈ ಬಂಡಾಯ ಸಂಸದರು ಎನ್‌ಸಿಪಿಐ (NCPI) ಬೆಂಬಲಕ್ಕೆ ನಿಂತು ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಪಡೆದುಕೊಂಡಿದ್ದರು. ಪಕ್ಷಾಂತರ ವಿರೋಧಿ ಕಾಯ್ದೆಯಡಿ ಈ 20 ಸಂಸದರನ್ನು ತಕ್ಷಣವೇ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಲೋಕಸಭೆ ಸ್ಪೀಕರ್ ವಿಳಂಬ ಧೋರಣೆ:
ಸಂಸದರ ಅನರ್ಹತೆ ಕೋರಿ ಜೂನ್ ತಿಂಗಳಿನಲ್ಲೇ ಅರ್ಜಿ ಸಲ್ಲಿಸಲಾಗಿದ್ದರೂ ಮತ್ತು ಜುಲೈ ಹಾಗೂ ಆಗಸ್ಟ್‌ನಲ್ಲಿ ಸಾಲು ಸಾಲು ನೆನಪೋಲೆಗಳನ್ನು ನೀಡಿದ್ದರೂ ಸ್ಪೀಕರ್ ಕಚೇರಿಯಿಂದ ಯಾವುದೇ ನಿರ್ಣಾಯಕ ಕ್ರಮ ಕೈಗೊಂಡಿರಲಿಲ್ಲ. ಸ್ಪೀಕರ್ ಅವರು ಬಂಡಾಯ ಸಂಸದರಿಗೆ ಸದನದಲ್ಲಿ ಪ್ರತ್ಯೇಕ ಆಸನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಆದರೆ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಕಾಲಮಿತಿಯಲ್ಲಿ ನಡೆಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಟಿಎಂಸಿ ನಾಯಕರು ಗಂಭೀರ ಆರೋಪ ಮಾಡಿದ್ದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ:
ಸ್ಪೀಕರ್ ಅವರ ಈ ಸುದೀರ್ಘ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಮತ್ತು ನಿರ್ದಿಷ್ಟ ಕಾಲಮಿತಿಯೊಳಗೆ ಅನರ್ಹತೆ ಅರ್ಜಿಯನ್ನು ವಿಲೇವಾರಿ ಮಾಡಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಅಭಿಷೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳ ಪೀಠವು ಈ ವಿಚಾರದಲ್ಲಿ ಸ್ಪೀಕರ್ ಅವರ ನಿಲುವಿನ ಕುರಿತು ಕಟ್ಟುನಿಟ್ಟಿನ ಪ್ರಶ್ನೆಗಳನ್ನು ಎತ್ತಿತು.
ಕೋರ್ಟ್‌ನಲ್ಲಿ ನಡೆದ ರೋಚಕ ವಾದ-ಪ್ರತಿವಾದ:
ವಿಚಾರಣೆ ವೇಳೆ ಲೋಕಸಭೆ ಸ್ಪೀಕರ್ ಮತ್ತು ಕಾರ್ಯದರ್ಶಿ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಸ್ಪೀಕರ್ ಕಚೇರಿಯು ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದ್ದು, ಬಂಡಾಯ ಸಂಸದರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಆದ್ದರಿಂದ ಸಾಂವಿಧಾನಿಕ ಪೀಠವಾದ ಸ್ಪೀಕರ್ ಕಚೇರಿಗೆ ಪ್ರತ್ಯೇಕ ನೋಟಿಸ್ ನೀಡಬಾರದು” ಎಂದು ಮನವಿ ಮಾಡಿದರು.
ಆದರೆ ನ್ಯಾಯಪೀಠವು ಇದನ್ನು ಗಂಭೀರವಾಗಿ ಪರಿಗಣಿಸಿ, ಬರಿ ನೋಟಿಸ್ ಜಾರಿ ಮಾಡುವುದು ಮುಖ್ಯವಲ್ಲ, ನಿರ್ದಿಷ್ಟ ಕಾಲಮಿತಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್‌ನ ಈ ಕಠಿಣ ನಿಲುವಿನ ಬೆನ್ನಲ್ಲೇ ಸ್ಪೀಕರ್ ಕಚೇರಿಯು ಕೇವಲ 7 ದಿನಗಳ ಕಾಲಾವಕಾಶ ನೀಡಿ 20 ಬಂಡಾಯ ಸಂಸದರಿಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ವಿಪಕ್ಷಗಳ ವಾಗ್ದಾಳಿ ಮತ್ತು ರಾಜಕೀಯ ತಾಪಮಾನ:
ಈ ಬೆಳವಣಿಗೆಯಿಂದಾಗಿ ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸ್ಪೀಕರ್ ಓಂ ಬಿರ್ಲಾ ಅವರ ನಡೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದಿದ್ದರೆ ಸ್ಪೀಕರ್ ಕಚೇರಿ ಈ ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಮುಂದೇನಾಗಲಿದೆ?
ಕೇವಲ 7 ದಿನಗಳ ಅಂತರದಲ್ಲಿ ಬಂಡಾಯ ಸಂಸದರು ನೀಡುವ ಉತ್ತರವನ್ನು ಆಧರಿಸಿ ಲೋಕಸಭೆ ಸ್ಪೀಕರ್ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಈಗ ಇಡೀ ದೇಶದ ಗಮನ ಸೆಳೆದಿದೆ. ಒಂದು ವೇಳೆ ಸಂಸದತ್ವ ರದ್ದಾದರೆ ಬಂಗಾಳ ರಾಜಕೀಯದಲ್ಲಿ ಮತ್ತೆ ಮರುಚುನಾವಣೆಯ ಕಾವು ಏರಲಿದೆ. ಸಾಂವಿಧಾನಿಕ ಸಂಸ್ಥೆಗಳು ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಈ ಪ್ರಕರಣ ಒಂದು ದೊಡ್ಡ ಉದಾಹರಣೆಯಾಗಿ ಹೊರಹೊಮ್ಮಿದೆ.


