

ಇಂದು ರಾಜಕೀಯ ಪತ್ರಿಕೋದ್ಯಮ (ಪೊಲಿಟಿಕಲ್ ಜರ್ನಲಿಸಂ) ಎನ್ನುವುದು ಕರ್ನಾಟದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಬಳಲಿದೆ, ಬಡವಾಗಿದೆ. ದ ಪಾಲಿಟಿಕ್ ಹುಟ್ಟಿಕೊಂಡಿರುವುದು ಈ ಹಿನ್ನಲೆಯಲ್ಲಿ. ಇದರ ಉದ್ದೇಶ ದೇಶದಾದ್ಯಂತ ಕಾಣಿಸಿಕೊಂಡಿರುವ ವಸ್ತುನಿಷ್ಠ ರಾಜಕೀಯ ಪತ್ರಿಕೋದ್ಯಮದ ಕೊರತೆಯನ್ನು ಸ್ಥಳೀಯವಾದ ಸಣ್ಣದೊಂದು ಪ್ರಯತ್ನದ ಮೂಲಕ ಸಾಧ್ಯವಾದಷ್ಟು ತುಂಬುವುದಾಗಿದೆ.
ರಾಜಕೀಯದ ಕುರಿತಾದ ಸತ್ಯವನ್ನು ಜನರ ಮುಂದಿಡಬೇಕೆಂಬ ಉದ್ದೇಶ ಬಿಟ್ಟರೆ ಇನ್ಯಾವ ಕಾರ್ಯಸೂಚಿಯೂ ದ ಪಾಲಿಟಿಕ್‌ಗೆ ಇಲ್ಲ. ಇದ್ದಕ್ಕೆ ಸೈದ್ಧಾಂತಿಕ ಹಂಗಿಲ್ಲ. ಪತ್ರಿಕೋದ್ಯಮವೇ ಒಂದು ಸಿದ್ಧಾಂತ (Journalism itself is an Ism) ಎಂದು ದ ಪಾಲಿಟಿಕ್‌ನ ನಂಬಿಕೆಯಾಗಿದೆ. ʼಇಂದು ಈ ರೀತಿಯ ಜರ್ನಲಿಸಂ ಅವಶ್ಯಕʼ ಎಂದು ತಮಗೆ ಅನಿಸಿದರೆ ದ ಪಾಲಿಟಿಕ್ ಬೆಂಬಲಿಸಿ.
ಸಿದ್ದಪ್ಪ ಮೂಲಗೆ
ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
If unable to pay online, credit our bank account directly. Mail editorthepolitic@gmail.com with details.
These details are optional.