ದ ಪಾಲಿಟಿಕ್

ಇದೊಂದು ಸಂಚೋ ಅಥವಾ ತಂತ್ರವೋ? : ಜಾಮದಾರ್

ದ ಪಾಲಿಟಿಕ್

ದ ಪಾಲಿಟಿಕ್

ಮುರುಘಾ ಮಠದ ಘಟನೆ ಗಂಟೆಗೊಂದು ದಿನಕ್ಕೊಂದೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೆಲವು ತಿರುವುಗಳು ಶರಲಕ್ ಹೋಮ್ಸ, ಪೆರಿಮೆಸನ್, ಜೇಮ್ಸಬಾಂಡ ತರಹದ ಪತ್ತೆದಾರಿ ಕತೆಗಳಷ್ಟು ರೋಚಕವಾಗಿವೆ!ಈ ಮಧ್ಯದಲ್ಲಿ, ಇಬ್ಬರು ಹಿಂದಿನ ಮುಖ್ಯಮಂತ್ರಿಗಳು ಇನ್ನಷ್ಟು ರೋಚಕ ತಿರುವುಗಳಿಗೆ ಕಾರಣರಾಗಿದ್ದಾರೆ. 

ಶ್ರೀಎಚ್.ಡಿ.ಕುಮಾರಸ್ವಾಮಿಯವರು ಮಾಧ್ಯಮಗಳೊಂದಿಗೆ ಮಾತನಾಡುತ್ತ ಈ ಘಟನೆ “ನನಗೆ ಸೋಜಿಗವೇನೂ ಅಲ್ಲ. ಅದರ ಬಗ್ಗೆ ಆರು ತಿಂಗಳ ಹಿಂದೆಯೇ ನನಗೆ ಗೊತ್ತಿದೆ”. ಎಂದಿದ್ದಾರೆ. “ಅದರ” ಬಗ್ಗೆ ಎಂದರೆ ಯಾವುದರ ಬಗ್ಗೆ? ಮಠದಲ್ಲಿ ನಡೆಯುತ್ತಿದ್ದ ಅಪರಾಧದ ಬಗ್ಗೆನೊ ಅಥವಾ ಆ ಬಗ್ಗೆ ನಡೆಯುತ್ತಿದ್ದ ಸಂಚು ಅಥವಾ ಕುತಂತ್ರದ ಬಗ್ಗೆನೊ? ಅವರೇ ಉತ್ತರಿಸಬೇಕು.

ಆ ಬಗ್ಗೆ ಪೋಲಿಸ ತನಿಖಾಧಿಕಾರಿಯೂ ಅವರನ್ನು ಪ್ರಶ್ನಿಸುವುದು ಒಳಿತು. ಈ ಅಕ್ಷಮ್ಯ ಅಪರಾಧಗಳು ನಡೆಯುತ್ತಿದ್ದ ಬಗ್ಗೆ ಗೊತ್ತಿದ್ದರೂ ಅದನ್ನು ಸಂಬಂಧ ಪಟ್ಟವರ ಗಮನಕ್ಕೆ ಏಕೆ ತರಲಿಲ್ಲ? ಎಂದು ಕೆಲವರು ಪ್ರಶ್ನಿಸಿದ್ದು ಸರಿಯಾಗಿಯೇ ಇದೆ. ಎರಡನೆಯದಾಗಿ, ಯಾರಿಂದ ಏನು ಗೊತ್ತಾಯಿತು? ಜನರಿಗೆ ಪೋಲಿಸರಿಗೆ ಗೊತ್ತಾಗಬೇಕು.

ಇದನ್ನೂ ಓದಿ : ರಾಜ್ಯದಲ್ಲಿರುವುದು ಸ್ವಾಮೀಜಿಗೊಂದು, ಸಾಮಾನ್ಯರಿಗೊಂದು ನ್ಯಾಯನಾ?

ಅಷ್ಟೇ ಅಲ್ಲದೆ ಎರಡನೆಯ ಆರೋಪಿಯು ಮಠದ ಆಡಳಿತಾಧಿಕಾರಿಯ ವಿರುದ್ಧ ಪ್ರತಿದಾವೆ ಹೂಡಿದ್ದಾಳೆ. ಅನೇಕರು ಈ ಆಡಳಿತಾಧಿಕಾರಿಯತ್ತಲೇ “ಸಂಚುಕೋರ”ನೆಂದು ಬೆರಳು ಮಾಡುತ್ತಿರುವುದು ಕಂಡುಬರುತ್ತದೆ. ಇನ್ನೂ ಒಂದು ಸಂಗತಿಯಂದರೆ ಸದರಿ ಆಡಳಿತಾಧಿಕಾರಿಯು ಈ ಹಿಂದೆ ಜೆಡಿಎಸ್ನ ಶಾಸಕರಾಗಿದ್ದರು. ಅವರೇನಾದರೂ ಕುಮಾರಸ್ವಾಮಿಯವರಿಗೆ ಈ ಬಗ್ಗೆ ತಿಳಿಸಿದ್ದರೆ? ಅದಕ್ಕೂ ಅವರೇ ಉತ್ತರಿಸಬೇಕು. ಹಾಗಿದ್ದರೆ ಈ ಪ್ರಕರಣವು ರಾಜಕೀಯ ತಿರುವು ಪಡೆಯುತ್ತದೆ. ಕುಮಾರಸ್ವಾಮಿಯ ರು ಅದರ ಒಂದು ಭಾಗವಾಗುತ್ತಾರೆ. 

ಇನ್ನೋವ೯ ಹಿಂದಿನ ಮುಖ್ಯ ಮಂತ್ರಿಗಳಾಗಿದ್ದ ಮಾನ್ಯ ಯಡಿಯೂರಪನವರ ಮಾಧ್ಯಮ ಹೇಳಿಕೆಯಲ್ಲಿ “ಸ್ವಾಮಿಜಿಯವರು ಅಂಥವರಲ್ಲ. ಅವರು ಸಂಚಿಗೆ ಬಲಿಯಾಗಿದ್ದಾರೆ. ಅವರು ದೋಷಮುಕ್ತವಾಗಿ ಹೊರಬರುತ್ತಾರೆ” ಎಂದು ಹೇಳಿದ್ದು ಈ ಸಂದರ್ಭದಲ್ಲಿ ಅನುಚಿತ. ಅದು ಸ್ವಾಮಿಜಿಯವರಿಗೆ ಕ್ಲೀನ್ ಚಿಟ್ ಕೊಟ್ಟಂತಾಗುತ್ತದೆ. ಅಲ್ಲದೆ ಪೋಲಿಸ ತನಿಖೆಯನ್ನು ದಾರಿತಪ್ಪಿಸುವಂಥದ್ದು. ಅದೊಂದು ಅನಗತ್ಯ ಹೇಳಿಕೆಯೋ ಅಥವಾ ಅದರ ಹಿಂದಿರುವ ರಾಜಕೀಯ ಸಂಚಿನ ಬಗ್ಗೆ ಯಡಿಯೂರಪ್ಪನವರು ತಿಳಿದಿದ್ದರೆ ಎನ್ನುವದು ನಿಗೂಢವಾಗಿ. ಹಾಗಾದರೆ ಯಾರ್ಯಾರು ಸಂಚು ಮಾಡಿದ್ದಾರೆ? ಯಾವ ಸಂಚು ಮತ್ತು ಏಕೆ ಆ ಸಂಚು ?ಎನ್ನುವುದರ ಬಗ್ಗೆಯೂ ಅವರು ಸಕಾಲದಲ್ಲಿ ಬಯಲುಪಡಿಸಬೇಕು.

ಇನ್ನು ಅದಿಕಾರಸ್ಥ ಮುಖ್ಯ ಮಂತ್ರಿಯವರು ಮಾಧ್ಯಮಗಳಿಗೆ ಉತ್ತರಿಸುವಾಗ “ಸ್ವಾಮೀಜಿಯವರ ವಿರುದ್ಧ ತನಿಖೆ ನಡೆಯುತ್ತಿದೆ. ಅವರ ವಿರುದ್ಧ ಕಿಡ್ನ್ಯಾಪ ಪ್ರಕರಣವೂ ದಾಖಲಾಗಿದೆ. ಪೋಲಿಸ್ ತನಿಖೆ ನಡೆಯುತ್ತಿರುವುದರಿಂದ ನಾನು ಯಾವುದೆ ಹೇಳಿಕೆ ನೀಡಲಾರೆ” ಎಂದಿದ್ದು ತುಂಬ ಸಮಯೋಚಿತ ಪ್ರತಿಕ್ರಿಯೆ ಎನ್ನಬಹುದು. ಈ “ಸಂಚು” ಸತ್ಯವೇ ಅಥವಾ ಸ್ವಾಮೀಜಿಯವರನ್ನು ಈ ಅಪರಾಧದಿಂದ ಮುಕ್ತಗೊಳಿಸಲು ಹೂಡಿರುವ ತಂತ್ರವೋ ಎನ್ನುವುದನ್ನೂ ಪೋಲಿಸರು ಭೇದಿಸಬೇಕಿದೆ. 

ಈ ಎಲ್ಲ “ಸಂಚು”ಗಳ ಬಗ್ಗೆ ಆಪಾದಿತ ಸ್ವಾಮೀಜಿಯವರ “ಈ ವರೆಗೆ ಮಠದ ಒಳಗೆ ನಡೆಯುತ್ತಿದ್ದ ಸಂಚು ಈಗ ಹೊರಗೆ ಬಂದಿದೆ ” ಎನ್ನುವುದು ತುಂಬ ರೋಚಕವಾಗಿದೆ. ಯಾವ ಸಂಚು? ಮಠದೊಳಗಿನ ಸಂಚುಕೋರರು ಯಾರು? ಅವರೇ ಹೇಳಬೇಕಲ್ಲವೆ? ಅದಲ್ಲದೆ, “ನಾವು ಸಂಧಾನಕ್ಕೆ ಸಿದ್ಧ, ಸಮಯಕ್ಕೂ ಬದ್ಧ” ಎಂದು ಸ್ವಾಮಿಜಿ ಹೇಳಿದ್ದು ಯಾವ ಸಂಧಾನ? ಯಾರೊಡನೆ ಸಂಧಾನ?

ಪೋಲಿಸರೊಂದಿಗೆ ಸಂಧಾನವೆ? ಬಲಿಪಶುವಾದವರೆಂಬ ಅಪ್ರಾಪ್ತ ವಯಸ್ಸಿನ ಬಾಲಕಿಯರೊಂದಿಗೆ ಅಥವಾ ಅವರ ಪಾಲಕರೊಂದಿಗೆ ಸಂಧಾನವೆ? ಅಥವಾ ನಿಮ್ಮ ವಿರುದ್ಧ ಸಂಚು ರೂಪಿಸಿರುವವರೊಂದಿಗೆ ಸಂಧಾನವೆ? ಒಂದು ವೇಳೆ ಯಾರೇ ಸಂಬಂಧಪಟ್ಟವರು ಸಂಧಾನಕ್ಕೆ ಒಪ್ಪಿದರೆ ಈ ಪ್ರಕರಣವನ್ನು ಮುಚ್ಚಿಹಾಕಬಹುದೇ? ಅದಕ್ಕೆ ಕಾನೂನು ಒಪ್ಪತ್ತದೆಯೇ? ಈ ಎಲ್ಲದರ ನಡುವೆ ಸ್ವಾಮೀಜಿಯವರು ಆ ಎರಡೂ ಅಪ್ರಾಪ್ತ ವಯಸ್ಸಿನ ಬಾಲಕಿಯರೊಂದಿಗೆ ಅನುಚಿತವಾಗಿ ವತಿ೯ಸಿದ್ದಾರೆಯೇ ಎನ್ನುವ ವಿಷಯವೇ ಮರೆತು ಹೋದಂತೆ ಭಾಸವಾಗುತ್ತದೆ.

ಇಷ್ಟೆಲ್ಲ ಪ್ರಶ್ನೆಗಳನ್ನು ಏಕೆ ಈ ಲೇಖನ ಎತ್ತುತ್ತದೆ ಎನ್ನುವುದಕ್ಕೆ ಮುಖ್ಯ ಕಾರಣವೆಂದರೆ ಈ ರೀತಿಯ ಗೊಂದಲಗಳನ್ನು ಸ್ರುಷ್ಟಿಸಿ ಅಪವಾದಿತ ವ್ಯಕ್ತಿಗಳನ್ನು ಅಪರಾಧದಿಂದ ಪಾರಾಗುವಂತೆ ಮಾಡುವ ಹುನ್ನಾರಗಳು ಸಾಮಾನ್ಯವಾಗಿವೆ. ಈ ದೇಶದಲ್ಲಿ ಅಪರಾಧದಿಂದ ಬಲಿಪಶುವಾದವರ ಬಗ್ಗೆ ಯಾವುದೇ ಧ್ವನಿ ಕೇಳಿಬರುವುದಿಲ್ಲ. ತದ್ವಿರುದ್ಧವಾಗಿ ಎಲ್ಲರೂ ಅಪರಾಧಿಗಳ ರಕ್ಷಣೆಗೆನೇ ತಮ್ಮ ಎಲ್ಲ ಶಕ್ತಿ ಸಾಮರ್ಥ್ಯ ಹಾಗೂ ಅಗಾಧ ಜಾಣ್ಮೆ ಪ್ರದರ್ಶಿಸುವುದು ಈ ದೇಶದ ನಿತ್ಯದ ಸಂಸ್ಕ್ರತಿಯ ಒಂದು ಭಾಗವಾದಂತೆ ಕಾಣುತ್ತದೆ.

ಈ ಹಿನ್ನೆಲೆಯಲ್ಲಿ ಪೋಲಿಸರ ಪಾತ್ರ ಬಹಳ ಮಹತ್ವದ್ದು. ಎಲ್ಲ ಪ್ರಭಾವಿಗಳ ಪ್ರಭಾವವನ್ನು ಮೀರಿ ಬಲಿಪಶುವಾದವರಿಗೆ ನ್ಯಾಯ ಒದಗಿಸುವ ಗುರುತರ ಹೊಣೆ ಅವರ ಮೇಲಿದೆ.

  • ಎಸ್‌ ಎಮ್‌ ಜಾಮದಾರ್

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!