ದ ಪಾಲಿಟಿಕ್

ಜೋಷಿ ಮತ್ತು ದಿಂಗಾಲೇಶ್ವರ ಸ್ವಾಮಿ ಮಧ್ಯೆ ನಡೆಯುತ್ತಿರುವುದು ʼಶುದ್ಧ ರಾಜಕೀಯʼ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಧಾರವಾಡ ಮತ ಕ್ಷೇತ್ರದಿಂದ ಲಿಂಗಾಯತ ಅಭ್ಯರ್ಥಿಗಳ ವಿರುದ್ಧವೆ ಸತತವಾಗಿ ನಾಲ್ಕು ಬಾರಿ ಅನಾಯಾಸವಾಗಿ ಗೆದ್ದಿದ್ದಾರೆ. 1992ರ ಹುಬ್ಬಳಿಯ ಈದ್ಗಾ ಮೈದಾನದ ಪ್ರಕರಣದ ನಂತರ ಹುಬ್ಬಳಿ-ಧಾರವಾಡದಲ್ಲಿ ಬಿಜೆಪಿ ತುಂಬಾ ಪ್ರಬಲವಾಗಿ ಬೆಳದಿದೆ. ಜಗದೀಶ್‌ ಶಟ್ಟರ್‌ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣ ಪಕ್ಷದ ವಿರುದ್ಧ ಬಂಡೆದ್ದು, ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ʼಕೈʼ ಪಕ್ಷದಿಂದಲೆ ಹುಬ್ಬಳಿ‍ – ಧಾರವಾಡ  ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೀನಾಯವಾಗಿ ಸೋತು ಮುಖ ಭಂಗ ಅನುಭವಿಸಿದರು.

ಮೋದಿ ಮುಖ್ಯ ಪ್ರವರ್ಧಮಾನಕ್ಕೆ ಬಂದಮೇಲೆ  ಬಿಜೆಪಿ ವ್ಯಕ್ತಿ ಕೇದ್ರಿತ ಚುನಾವಣೆ ನಡೆಸುತ್ತಿದೆ. ಆದರೆ ಹುಬ್ಬಳಿ – ಧಾರವಾದ ಜಿಲ್ಲೆಯಲ್ಲಿ ಅದರಲ್ಲೂ ನಗರದಲ್ಲಿ ವ್ಯಕ್ತಿಗಿಂತ ಪಕ್ಷ ಆಧಾರಿತವಾಗಿ ಜನರು ಮತ ಚಲಾಯಿಸುತ್ತಾರೆಂದು ಜಗದೀಶ್‌ ಶಟ್ಟರ್‌ ಸೋಲೆ ಹೇಳುತ್ತಿದೆ. ಕಳೆದ 44 ವರ್ಷದಿಂದ ವಿಜಯ್ ಸಂಕೇಶ್ವರ್‌ ಹೋರತು ಪಡಿಸಿ ಬೇರಾರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಅಭ್ಯರ್ಥಿಗಳು ಗೆದ್ದಿರುವ ಉದಾಹರಣೆಯಿಲ್ಲ. ಅವರಾದರೂ ಗೆದ್ದದ್ದು ಬಿಜೆಪಿಯಿಂದಲೆ. ಹಾಗಾಗಿಯೆ ವಿರೋಧವನ್ನು ಲೆಕ್ಕಿಸದೆ ಮತ್ತೇ ಧಾರವಾಡ ಕ್ಷೇತ್ರದಿಂದಲೆ ಜೋಷಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ : ಆರೆಸ್ಸೆಸ್‌ ನೆರಳಿನಲ್ಲಿ ಈಶ್ವರಪ್ಪ ಬಂಡಾಯ

ಆದರವರಿಗೆ ಈ ಸಲ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿಯ ಬಂಡಾಯ ಸೋಲಿನ ಭೀತಿಗೆ ದೂಡಿದಂತೆ ಕಾಣುತ್ತಿದೆ. ʼಚುನಾವಣೆ ನಡೆಯುವುದು ಜಾತಿ ಆಧಾರದ ಮೇಲಲ್ಲ; ಅಭಿವೃದ್ಧಿಯ ಮೇಲೆʼ ಎನ್ನುತ್ತಿದ್ದಾರೆ.  ʼನನ್ನಿಂದ ಅರಿಯದೆ ಏನಾದರೂ ತಪ್ಪಾಗಿದ್ದರೆ, ಅದರಿಂದ ಸ್ವಾಮೀಜಿಯವರ ಮನಸ್ಸಿಗೆ ಏನಾದರೂ ನೋವಾಗಿದ್ದರೆ ಅವರಿಗೆ ಕ್ಷಮೆ ಕೇಳಲು ಸಿದ್ದನಿದ್ದೆನೆʼ ಎಂದು ಬಡಬಡಿಸುತ್ತಿದ್ದಾರೆ. ಏನೇ ಮಾತಾಡಿದರೂ ಸ್ವಾಮೀಜಿ ಬಂಡಾಯದ ಧ್ವಜ ಕೆಳಗಿಳಿಸುವ ಲಕ್ಷಣ ಕಾಣದಿದ್ದಾಗ ಇದ್ಯಾಕೋ ಬೇರೆಯೇ ಲೆಕ್ಕಚಾರ ಕಾಣುತ್ತದೆ ಎಂದು ಮನಗಂಡು ಈಗ ಉಗ್ರ ಹಿಂದೂತ್ವದ ಮಾತಗಳನ್ನಾಡುತ್ತಿದ್ದಾರೆ. ರಾತೋರಾತ್ರಿ ಯಡಿಯೂರಪ್ಪ ಧಾರವಾಡಕ್ಕೆ ಬಂದು ಏನೇನೋ ಸರ್ಕಸ್‌ ಮಾಡಿದರೂ  ಏನೇನು ವರ್ಕೌಟ್‌ ಆಗದಿದ್ದಾಗ ಪೇಚಿಗೆ ಸಿಲುಕಿದ್ದಾರೆ.

ದಿಂಗಾಲೇಶ್ವರರು ಲಿಂಗಾಯತ ಟ್ರಂಪ್‌ ಕಾರ್ಡ್‌ ಉಪಯೋಗಿಸುತ್ತಿದ್ದಾರೆ. ಜತೆಗೆ ಒಂದೊಂದಾಗಿ ತಮ್ಮ ಬತ್ತಳಿಕೆಯಿಂದ ಬಾಣಗಳನ್ನು ಎಸೆಯುತ್ತಿದ್ದಾರೆ. ಸ್ವಾಮಿಜಿ ಎಸೆಯುತ್ತಿರುವ ಬಾಣಗಳು ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತರಿಗೆ ನಾಟಿ ಅವು ಮತವಾಗಿ ಪರಿವರ್ತನೆಯಾದರೆ  ಜೋಷಿಯವರಿಗೆ ಅಪಾಯ ತಪ್ಪಿದ್ದಲ್ಲ. ಇದನ್ನು ಅರಿತೆ ಅವರು ಸ್ವಾಮಿಜಿಯವರ ಜತೆಗೆ ಸಂಧಾನಕ್ಕೆ ಇನ್ನಿಲ್ಲದಂತೆ ಬೇರೆ ಬೇರೆ ಮೂಲಗಳಿಂದ ಯತ್ನಿಸುತ್ತಿದ್ದಾರೆ.

ಪ್ರಾಯಶಃ ಸಂಧಾನವೂ ಅವರಿಗೆ ಕೈಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ  ಇಲ್ಲಿ ನಡೆಯುತ್ತಿರುವುದು ʼಶುದ್ಧ ರಾಜಕೀಯʼ. ಯಡಿಯೂರಪ್ಪ, ವಿನಯ್‌ ಕುಲಕರ್ಣಿ, ಜಗದೀಶ್‌ ಶೆಟ್ಟರ್‌ ಮತ್ತಿತ್ತರ ಲಿಂಗಾಯತ ರಾಜಕಾರಣಿಗಳ ಜತೆಗೂ ಜೋಷಿಯವರು  ʼಶುದ್ಧ ರಾಜಕೀಯʼ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಈ ಆಟ ಆರಂಭಿಸಿದ್ದು ಜೋಷಿಯವರೇ. ಈಗ ಅದೇ ಆಟ ಅವರಿಗೆ ತಿರುಗಬಾಣವಾಗಿದೆ ಅಷ್ಟೆ. ಆಟ ಆರಂಭಿಸಿದವರು ಮೋದಲು ಆಟ ನಿಲ್ಲಿಸಿದರೆ, ಇಲ್ಲಿಯೂ ಈ ಆಟವೂ ನಿಲ್ಲುತ್ತದೆ. ಇಲ್ಲದಿದ್ದರೆ ಈ ಆಟ ಹೀಗೆ ಮುಂದುವರೆಯುತ್ತದೆ.  ಈ ಆಟದಲ್ಲಿ ಜೋಷಿ ಎದುರಾಳಿ ಗ್ರೂಪ್‌ನಲ್ಲಿ ದಿನದಿಂದದಿನಕ್ಕೆ ಹೆಚ್ಚೆಚ್ಚು ಕೈಗಳು ಪಕ್ಷಾತೀತವಾಗಿ ಸೇರಿಕೊಳ್ಳುತ್ತಿವೆ. ಇದರಲ್ಲಿ ಯಾರೇ ಗೆದ್ದರು ಹಾನಿಯಾಗುವುದು ಮೊದಲನೆಯದಾಗಿ ಬಿಜೆಪಿಗೆ, ಎರಡನೆಯದಾಗಿ ಜೋಷಿಗೆ.

ಇದೆಲ್ಲಾ ನೋಡಿಕೊಂಡು ಮುಖ್ಯಮಂತ್ರಿ ಖುರ್ಚಿಯ ಮೇಲೆ ಟವಲ್‌ ಹಾಕಿ, ಕಲರ್‌ ಕಲರ್‌ ಸೂಟು ಹೊಲಿಸಿಕೊಂಡು ಕೂತಿರುವ ಜೋಷಿ ಸುಮ್ಮನೇ ಕೂಡುವ ಆಸಾಮಿಯಲ್ಲ. ಇದು ಶುದ್ಧ ರಾಜಕೀಯ. ಶುದ್ಧ ರಾಜಕೀಯದಲ್ಲಿ ಏನೂ ಆಗಬಹುದು. ಆದರೆ ಎದುರಿನವರು ಬಹಳ ಜಾಣತನದಿಂದ ಆಟ ಆಡುತ್ತಿದ್ದಾರೆ. ಜತೆಗೆ ʼಜಾತಿ ಈ ನೆಲದ ವಾಸ್ತವʼ. ಇದು ಜೋಷಿಯವರ ನಿದ್ರೆ ಕೆಡಸಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!