ದ ಪಾಲಿಟಿಕ್

ರಾಷ್ಟ್ರೀಯ ಅಧ್ಯಕ್ಷ ಘೋಷಣೆ ಮಾಡಿದ್ದೇ ಹಾಸ್ಯಾಸ್ಪದ: ಧನ್ನೂರ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಡಾ. ಗಂಗಾ ದೇವಿಯವರು ‘ಲಿಂಗದೇವ’ ವಾಪಸ್ಸು ಪಡೆದದ್ದು ಅತ್ಯಂತ ಸಮಂಜಸವೂ ಮತ್ತು ಕಾಲೋಚಿತವೂ ಆಗಿದೆ. ‘ದ ಪಾಲಿಟಿಕ್’ ಅವರ ನಿರ್ಧಾರವನ್ನು ಸ್ವಾಗತಿಸುತ್ತದೆ.ಜತೆಗೆ,ಈ ವಿಷಯದಲ್ಲಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತದೆ. ಆದರೆ,’ಲಿಂಗದೇವ’ದ ಗುಮ್ಮ ತೋರಿಸಿ ಇಡೀ ಸಂಸ್ಥೆಯನ್ನೇ ಹೈಜಾಕ್ ಮಾಡುವ ಒಂದು ಹಿಡನ್ ಅಜೆಂಡಾ ಇದರ ಹಿಂದೆ ಇದೆ; ಸಂಸ್ಥೆಯನ್ನು ವಾಣಿಜ್ಯಕರಣಗೊಳಿಸಲು ಬಸವರಾಜ ಧನ್ನೂರ ಒಂದು ಟೀಂ ರಚಿಸಿಕೊಂಡಿದ್ದಾರೆ; ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಗಳಿಗೆ ಧನ್ನೂರ ಅವರೇ ಮೂಲ ಕಾರಣಕರ್ತರಾಗಿದ್ದಾರೆ ಇತ್ಯಾದಿ ಇತ್ಯಾದಿ ಆರೋಪಗಳು ಜೋರಾಗಿಯೇ ಸಮಾಜದಲ್ಲಿ ಸದ್ದು ಮಾಡುತ್ತಿವೆ. ಇದು ಸಂಸ್ಥೆಯ ಮತ್ತು ಸಮಾಜದ ಹಿತದೃಷ್ಟಿಯಿಂದ ನೀಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಈ ಕುರಿತು ರಾಷ್ಟ್ರೀಯ ಬಸದ ದಳದ ರಾಷ್ಟ್ರೀಯ ಅಧ್ಯಕ್ಷ (?) ಬಸವರಾಜ ಧನ್ನೂರ ಅವರ
ಜತೆಗೆ ‘ದ ಪಾಲಿಟಿಕ್’ ಸಂಪಾದಕ ಸಿದ್ದಪ್ಪ ಮೂಲಗೆಯವರು ನಡೆಸಿರುವ ಸಂದರ್ಶನ.

ಸಿದ್ದಪ್ಪ ಮೂಲಗೆ : ಪ್ರಸ್ತುತ ಬಸವ ಧರ್ಮ ಪೀಠದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಬಸವರಾಜ ಧನ್ನೂರ ಮೂಲ ಕಾರಣಕರ್ತರಾಗಿದ್ದಾರೆ.

ಬಸವರಾಜ ಧನ್ನೂರ: ಬಸವ ಧರ್ಮ ಪೀಠದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ/ ನಡೆಯುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಿ ಗಂಗಾ ಮಾತಾಜಿಯವರು ಲಿಂಗದೇವ ವಾಪಸ್ಸು ಪಡೆದಿದ್ದಾರೆ. ಸ್ವತಃ ಲಿಂಗೈಕ ಪೂಜ್ಯ ಮಾತೆ ಮಹಾದೇವಿ ತಾಯಿಯವರೇ ಕಲಬುರ್ಗಿ ಸಮಾವೇಶದಲ್ಲಿ ಮತ್ತು ಬಸವಕಲ್ಯಾಣದ ಬಸವೇಶ್ವರ ದೇವಾಲಯದಲ್ಲಿ ನಾವು ಸುಪ್ರೀಂಕೋರ್ಟ್ ನ ತೀರ್ಪನ್ನು ಗೌರವಿಸುತ್ತೇವೆ, ಜತೆಗೆ ಅದಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ. ಹಾಗಾಗಿ ಗಂಗಾ ಮಾತಾಜಿಯವರು ಕಳೆದ 28ನೇ ಡಿಸೆಂಬರ್ ರಂದು ವಾಪಸ್ ಪಡೆದಿದ್ದಾರೆ. ಇದಕ್ಕೆ ಪಕ್ಷಾತೀತವಾಗಿ ನಾಡಿನ ಎಲ್ಲಾ ರಾಜಕೀಯ ಧುರೀಣರು, ನಾಡಿನ ಅನೇಕ ಪೂಜ್ಯರು, ಮಠಾಧೀಶರು, ವಿವಿಧ ಸಂಘಟನೆಗಳು, ಸಾಹಿತಿಗಳು, ಬರೆಹಗಾರರು ಸ್ವಾಗತಿಸಿದ್ದಾರೆ.

ಸಿದ್ದಪ್ಪ ಮೂಲಗೆ : ಅಹಿತಕರ ಘಟನೆ ನಡೆಯುತ್ತಿಲ್ಲವೇ? ನಿಮ್ಮ ವಿರುದ್ಧ ‘ರಾಬದ’ ಬಹುತೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ನಿಮ್ಮ ಬಸವ ಧರ್ಮ ಪೀಠದ ಕೆಲ ಸ್ವಾಮೀಜಿಗಳ ವಿರುದ್ಧ ಸಲಿಂಗ ಕಾಮ, ಕೋಲೆ, ಸ್ತ್ರೀಪೀಡನೆ, ಕಾಮುಕತೆ ಇತ್ಯಾದಿ ಇತ್ಯಾದಿ ಗಂಭೀರ ಆರೋಪಗಳು ಬಂದಿವೆ. ಇವೆಲ್ಲವೂ ಅಹಿತಕರ ಘಟನೆಗಳಲ್ಲವೇ?

ಬಸವರಾಜ ಧನ್ನೂರ: ನೋಡ್ರಿ ವಚನಾಂಕಿತ ವಾಪಸ್ಸು ಪಡೆದ ಮೇಲೆ ಹಿಂತಹ ಬರೆಹಗಳು ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿದ್ದೇವೆ.ಬರೆದದ್ದು ನಾವು ಕೇಳ್ತಾ ಇದೀವಿ. ಇದಕ್ಕಿಂತಲೂ ಮುಂಚೆ ಅವರೆಂದೂ ಬರೆದಿಲ್ಲ.ಬರೆದಿರುವ ಯಾವುದೇ ಉದಾಹರಣೆಗಳೂ ಇಲ್ಲ. ಲಿಂಗದೇವ ವಚನಾಂಕಿತದ ಪರವಾಗಿರುವ ಕೆಲವು ಜನರು ಸುಖಾಸುಮ್ಮನೆ ‘ಬಧಪಿ’ ದ ಜಂಗಮಮೂರ್ತಿಗಳ ಮೇಲಾಗಲಿ ಅಥವಾ ಮಹಾ ಜಗದ್ಗುರು ಗಂಗಾ ಮಾತಾಜಿಯವರ ಮೇಲಾಗಲಿ ಅಥವಾ ನನ್ನ ಮೇಲಾಗಲಿ ವಿನಾಕಾರಣ ಸುಳ್ಳು ಆರೋಪಗಳನ್ನು ಹೋರಿಸುವುದು,ಸೃಷ್ಟಿ ಮಾಡಿ ಕೆಲವು ಲೇಖನಗಳನ್ನು ಹರಿ ಬೀಡುವುದು, ತ್ಯಜೋವಧೆ ಮಾಡುವಂತಹದು ಮಾಡ್ತಾ ಇದಾರೆ. ಸಮಾಜಕ್ಕೆ ಇದರ ಹಿಂದೆ ವಚನಾಂಕಿತ ಹಿಂಪಡೆದಿರುವ ಕಾರಣವಿದೆಯೆಂದು ಗೊತ್ತಿದೆ.

ಸಿಮೂ: ಸರೀ. ಇವೆಲ್ಲವೂ ಅಹಿತಕರ ಘಟನೆಗಳಲ್ವೇ?

ಬಧ: ಇವೆಲ್ಲವೂ ಅಹಿತಕರ ಘಟನೆಯೆಂದು ಹೆಂಗ ಹೇಳ್ತಿರಿ ನೀವು? ಫೈವ್ ಪರ್ಸೆಂಟ್ ಜನರು ಈ ಒಂದು ದೊಡ್ಡ ಐತಿಹಾಸಿಕವಾದ ನಿರ್ಣಯವನ್ನು ವಿರೋಧ ಮಾಡ್ತಾ ಇದಾರೆ.ಅವರು ಅಸಹಾಯಕರಾಗಿದ್ದಾರೆ.

ಸಿಮೂ: ಅಲ್ಲಾರಿ ನನಗ ಆಶ್ಚರ್ಯ ಆಗಲತ್ತುದ,ಕೆಲ ಸ್ವಾಮಿಗಳ ವಿರುದ್ಧ ಬಹಿರಂಗವಾಗಿಯೇ ತರೇಹವಾರಿ ಗಂಭೀರ ಆರೋಪ ಮಾಡ್ಯಾರ ಅಂದರಬಿ ನಿಮಗ ಇವು ಅಹಿತಕರ ಘಟನೆ ಅನಿಸ್ತಾ ಇಲ್ಲ. ಮುಂದ ಅವರ ಭವಿಷ್ಯವೇನು? ಆರೋಪಗಳು ಹೊತ್ತೇ ಅವರು ಬದುಕಬೇಕಾ?

ಬಧ: ಅಲ್ಲ, ಇವು ಅಹಿತಕರ ಘಟನೆಗಳಲ್ಲ.ಆರೋಪ ಮಾಡಿದವರ,ಬರೆದವರ ಸಂಸ್ಕಾರ ಎತ್ತಿ ತೋರಿಸುತ್ತದೆ ಅಷ್ಟೇ.ಯಾವುದೇ ಬರಹ ಬಂದ ತಕ್ಷಣ ಅದು ಸತ್ಯ ಎಂದ ಹೆಂಗ ಹೇಳ್ತೀರಿ.

ಸಿಮೂ: ಯಾರೆ ಬರೆಯಿಲಿ, ಎಲ್ಲಿನವರೇ ಬರಿಯಿಲಿ,ನಿಮ್ಮ ಸಂಘಟನೆಯವರೆ ಬರೀಲತ್ತಾರ,’ರಾಬದ’ ಅಧ್ಯಕ್ಷನ್ನಾಗಿ ಇದಕ್ಕ ನೀವೇನು ಯಾಕ್ಷೇನ್ ತಕೋಂಡ್ರೀ.

ಬಧ: ಈಗ ನೋಡ್ರಿ ಇಂತಹವೂ ಬರೆಯುದಕಾ ಯಾರ ಏನ ಯಾಕ್ಷೇನ್ ತಕೋಬೇಕು.ಅವರನ್ನ ಸುಮಾರು ಜನರ ಮೂಲಕ ತಿಳಿಹೇಳಿದ್ದೇವೆ,ಬರೆಯಬಾರದೆಂದು ಮನವಿ ಮಾಡಿದೇವೆ,ಏಕೆಂದರೆ ಸಂಘಟನೆಯಲ್ಲಿ ಎಲ್ಲರೂ ಕೂಡು ನಮ್ಮವರೇ ಇದಾರೆ ಇದೊಂದು ಕಾರಣದಿಂದ ನಾವು ಸಂಯಮದಿಂದ ಹೋಗ್ತಾ ಇದೀವಿ, ಈ ರೀತಿ ಬರೆಯುತ್ತಿರುವುದು ಅತ್ಯಂತ ಮೂರ್ಖತನ, ಇದು ಅವಿವೇಕಿತನ ಪರಮಾವಧಿ ಎಂದು ಇಷ್ಟೇ ಹೇಳಲು ಬಯಸುತ್ತೇನೆ.

ಸಿಮೂ:ಎಲ್ಲರೂ ನಮ್ಮವರೇ ಹರಾ ಅಂತೀರಿ! ಮತ್ತೆ ಚನ್ನಬಸವಾನಂದ ಸ್ವಾಮೀಜಿಯನ್ನ, ಅತಿವಾಳ ಪಾಟೀಲರನ್ನ ಸಂಸ್ಥೆಯಿಂದ ಉಚ್ಚಾಟನೆ ಯಾಕ ಮಾಡಿಸಿದೀರಿ?

ಬಧ: ನಾನ್ಯಾಕ ಮಾಡಿಸಲಿ,ಗಂಗಾ ಮಾತಾಜಿಯವರು ಮಾಡ್ಯಾರ.ಸಂಸ್ಥೆಯ ಎಲ್ಲಾ ಸ್ವಾಮೀಜಿಯವರ ಮತ್ತು ಸಂಸ್ಥೆಯ ಮುಖಂಡರ ಜತೆಗೆ ಚರ್ಚೆ ಮಾಡಿಯೇ ಈ ನಿರ್ಣಯ ತಕೊಂಡಿದ್ದಾರೆ. ಈಗ ಆಗುತ್ತಿರುವ ಸಮಸ್ಯೆಗಳಿಗೆ ಚನ್ನಬಸವಾನಂದ ಸ್ವಾಮೀಜಿಯವರೇ ಮೂಲ ಕಾರಣ.ಅವರು ಚಿತ್ರದುರ್ಗದಲ್ಲಿ ಸಬೆ ಕರೆದು – ಈ ಸಭೆಯಲ್ಲಿ ಬೆಂಗಳೂರಿನವರು ಇಬ್ಬರೂ, ಕೊಪ್ಪಳದವರು ಇಬ್ಬರೂ, ಉಳಿದವರು ಬೀದರನವರೇ ಇದ್ರು – ಪ್ರೆಸ್ ಮೀಟ್ ಮಾಡಿ, ಲಿಂಗದೇವ ವಾಪಸ್ಸು ಪಡೆದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಬಹಿರಂಗವಾಗಿ ಪತ್ರಕೆಗಳ ಎದುರಿಗೆ ಹೇಳ್ಯಾರ.. ಅದು ಸುದ್ಧಿನು ಆಗ್ಯಾದ.. ಈಗ ಪೀಠದಿಂದ ಅವರನ್ನು ತೆಗೆದು ಹಾಕಿದ ಮೇಲೆ ಲಿಂಗದೇವ ನಮ್ಮ ಆದ್ಯತೆ ಇಲ್ಲ ಅಲ್ಲಾತ್ತರ.ಇದೆಲ್ಲಾ ಜನ ಗಮನಿಸುತ್ತಿದ್ದಾರೆ.

ಇವರು ಮತ್ತು ಶಿವರಾಜ್ ಪಾಟೀಲ್ ಅತಿವಾಳ ಇವರಿಬ್ಬರೇ ಮೂಲ ಕಾರಣಕರ್ತರಾಗಿದ್ದಾರೆ. ಈ ಶಿವರಾಜ್ ಪಾಟೀಲ್ ಅತಿವಾಳ ಅವರು ಬಳಸುವ ಭಾಷೆ ನೋಡಿದರೆ ಅವರು ಎಂತವರ ಹರಾ ಅಂತ ಗೊತ್ತಾಗುತ್ತದೆ.ಅದರಲ್ಲೂ ಈ ಅತಿವಾಳ ಪಟೇಲ್ ಅವರದ್ದೇ ಪಾಲು ಹೆಚ್ಚದ..ಅದಕ್ಕಾಗಿಯೇ ಇವರಿಬ್ಬರನ್ನು ಸಂಸ್ಥೆಯಿಂದ ತೆಗೆದು ಹಾಕಿದ್ದಾರೆ. ಇವರು ನನ್ನನ್ನು ಬೀಡಿ..ಗಂಗಾ ಮಾತಾಜಿಯವರ ವಿರುದ್ಧವೇ ಕೀಳುಮಟ್ಟದ ಪದಬಳಿಕೆ ಮಾಡಿ ಟೀಕೆ ಮಾಡ್ಯಾರ.

ಮತ್ತೆ ಚನ್ನಬಸವಾನಂದ ಸ್ವಾಮೀಜಿಯವರು ಮಾತಾಜಿ ಲಿಂಗೈಕ ಆದನಂತರ ನಾನು ‘ರಾಬದ’ ಕೇಂದ್ರ ಸಮಿತಿಯ ಅಧ್ಯಕ್ಷ ಅಂತ ಬರೆದುಕೊಳ್ಳುತ್ತಿದ್ದಾರೆ.. ಅದಕ್ಕೂ ಮೊದಲು ಮಾತಾಜಿಯವರು ಇದ್ದಾಗ ಒಂದೇ ಒಂದು ಸಲವೂ ಅವರು ಹಾಗೆ ಬರೆದುಕೊಳ್ಳುತ್ತಿದ್ದಿಲ್ಲ. ಒಂದೇ ಒಂದು ಉದಾಹರಣೆ ತೋರಿಸಿ.

ತನ್ನದೇ ಹುಕುಂ ನಡೆಸಬೇಕು.ಗಂಗಾ ಮಾತಾಜಿಯವರಿಗೆ ಓವರ್ ಟೇಕ್ ಮಾಡಿ, ಮಾಡಿರುವ ಅನೇಕ ಉದಾಹರಣೆಗಳು ಅವಾ. ನಾನು ಗಂಗಾ ಮಾತಾಜಿಗಿಂತಲ್ಲೂ ಬಹಳ ಬಲ್ಲವನು,ನಾನು ಬಹುಭಾಷಾ ಪಂಡಿತನು ಎಂದು ಸ್ವತಃ ಹೇಳಿಕೊಂಡು ಜನರೆದುರು ಮಾತಾಜಿವಯರು ದುರ್ಬಲರು ಎಂದು ಬಿಂಬಿಸುತ್ತಿದ್ದಾರೆ..ಇವೆಲ್ಲವೂ ನೋಡ್ತಾ ಇದ್ರೆ ಇವರಿಗೆ ಗಂಗಾ ಮಾತಾಜಿಯವರ ಪೀಠದ ಮೇಲೆ ಒಂದು ಕಣ್ಣಿದೆ ಏನೋ ಅಂತ ಅನಿಸಲತ್ತುದ.ಅವರ ನಡೆಯೇ ಅವರಲ್ಲಿರುವ ಆಶೆ ಎತ್ತಿತೋರಿಸುತ್ತಿದೆ.

ಸಿಮೂ: ಸರಿ ಒಪ್ಕೋತ್ತೇನೆ. ಗಂಗಾ ಮಾತಾಜಿಯವರು ಲಿಂಗದೇವ ವಾಪಸ್ಸು ಪಡೆದದ್ದು ನಾನೂ ಕೂಡಾ ಅತ್ಯಂತ ಆದಾರದಿಂದ ಸ್ವಾಗತಿಸುತ್ತೇನೆ, ಅವರ ನಿಲುವಿಗೆ ಬೆಂಬಲಿಸುತ್ತೇನೆ,ಎಲ್ಲರೂ ಸೇರಿಕೊಂಡು ಅವರ ಕೈ ಬಲಪಡಿಸೋಣ..ಆದರೆ,ಗಂಗಾಮಾತಾಜೀಯವರು ಲಿಂಗದೇವ ಪರವಾಗಿ ಇರುವಂತಹ ‘ಬಧಪಿ’ದ ಜಂಗಮಮೂರ್ತಿಗಳ, ಹಿರಿಯ-ಕಿರಿಯ ಶರಣರ ಭೇಟಿಗೆ ನಿರಾಕರಿಸಿದ್ದಾರಂತೆ, ಜತೆಗೆ ಫೋನ್ ನಲ್ಲೂ ಮಾತಾಡ್ತಾ ಇಲ್ವಂತೆ, ಆಡಬೇಕಾದರೂ ಧನ್ನೂರ ಅವರಿಗೆ ಕೇಳಿ ಮಾತಾಡ್ತೇನೆ ಅಂತಾರಂತ, ಇದು ಸರಿಯೇ? ಮತ್ತ ನಿವ್ಯಾಕ ಅವರ ಮೇಲೆ ಇಷ್ಟೊಂದು ಒತ್ತಡ ಹಾಕಲತ್ತೀರಿ? ಅವರಿಗೆ ಜೀವ ಬೆದರಿಕೆ ಹಾಕಿದ್ದೀರಂತಲ್ಲ?

ಬಧ: ಈಗಾಗಲೇ ಗಂಗಾ ಮಾತಾಜಿಯವರು ಮೊನ್ನೆಯ ಶರಣಮೇಳದಲ್ಲಿ ನನಗೆ ಯಾರೂ ಸಹ ಜೀವಬೇದರಿಕೆ ಹಾಕಿಲ್ಲೆಂದು ‘ಬಧಪಿ’ದ ಜಂಗಮಮೂರ್ತಿಗಳ, ಪಾಲ್ಗೊಂಡಿದ್ದ ಎಲ್ಲಾ ಶರಣ-ಶರಣೆಯರ ಎದುರಿಗೆ ಸ್ಪಷ್ಟವಾಗಿ ಹೇಳ್ಯಾರ,ಇದು(ಲಿಂಗದೇವ ವಾಪಸ್ಸು ಪಡೆದದ್ದು) ನನ್ನ ಸ್ವಂತ ನಿರ್ಧಾರ ಅದಾ, ಯಾರು ಒತ್ತಾಯನೂ ಮಾಡಿಲ್ಲ, ಜೀವ ಬೇದರಿಕೆಯೂ ಹಾಕಿಲ್ಲೆಂದ ಹೇಳ್ಯಾರ.

ಹಾಂ, ಇನ್ನೊಂದು ಮಾತಾಜಿಯವರು ಲಿಂಗದೇವ ವಾಪಸ್ಸು ಪಡೆಯುತ್ತಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ, ಬಸವಣ್ಣನವರ ವಚನಾಂಕಿತದಲ್ಲಿ ಮಾತ್ರ ಕೂಡಲಸಂಗಮದೇವ ಬಳಸುತ್ತೇವೆ, ಮಾತಾಜಿಯವರ ಸಂಶೋಧನೆಯಾದ ಲಿಂಗದೇವವನ್ನ ದೇವನಾಮವಾಗಿಯೇ ಮುಂದೆಯೂ ಬಳಸುತ್ತೇವಂತ ಹೇಳ್ಯಾರ.

ಚನ್ನಬಸವಾನಂದ ಸ್ವಾಮೀಜಿಯವರು, ಗಂಗಾ ಮಾತಾಜಿಯವರ ವಿಷಯದಲ್ಲಿ ತುಂಬಾ ಸುಳ್ಳು ಹೇಳ್ತಾ ಇದಾರೆ‌‌..ಲಿಂಗದೇವ ವಾಪಸ್ಸು ಪಡೆದ ಮೇಲೆ ಫೋನ್ ಸ್ವೀಚ್ ಆಫ್ ಇಟ್ಟಿದ್ದಾರೆ.. ನಮಗೆ ಭೇಟಿ ಆಗಲು ಅವಕಾಶ ಕೊಡುತ್ತಿಲ್ಲ.. ಇತ್ಯಾದಿ ಇತ್ಯಾದಿ ಸುಳ್ಳು ಆರೋಪ ಮಾಡ್ತಾ ಇದಾರೆ.. ಇವರು ಇಲ್ಲಿಯವರೆಗೆ ಗಂಗಾ ಮಾತಾಜಿಯವರಿಗೆ ಭೇಟಿ ಆಗಲು ಪ್ರಯತ್ನವೇ ಮಾಡಿಲ್ಲ..ಅವರ ಫೋನ್ ಯಾವಾಗಲೂ ಸಹ ಬಂದ ಇಟ್ಟಿಲ್ಲ.ಇವರು ಅವತ್ತು ಚಿತ್ರದುರ್ಗಕ್ಕೆ ಹೋಗುವ ಬದಲಿ ಮಾತಾಜಿಯವರ ಭೇಟಿಗೆ ನೇರವಾಗಿ ಕೂಡಲಸಂಗಮಕ್ಕೆ ಹೋಗಬೇಕಾಗಿತ್ತು.

ಅವರು ತಾವೇ ದೂರ ಉಳಿದು ಮಾತಾಜಿ ಸೀಗುತ್ತಿಲ್ಲ.. ಮಾತಾಡಲು ಅವಕಾಶ ನೀಡುತ್ತಿಲ್ಲ ಎಂಬ ಹುಸಿ ಆರೋಪ ಮಾಡುತ್ತಿರುವುದು ತಪ್ಪದ.

ಸಿಮೂ: ಎಲ್ಲರಿಗೂ ಜತೆಗೆ ತಕೊಂಡು ಹೋಗಲತ್ತಿದೆವ ಅಲ್ಲಾತ್ತೀರಿ, ಆದರೆ ನಿಮ್ಮ ಮೇಲ ಆರೋಪ ಅದಾ ‘ನಾನೇ ಎಲ್ಲಾ ನನ್ನಿಂದ ಎಲ್ಲಾ’ ಎಂಬ ಅಹಮಿಕೆ ನಿಮ್ಮಲ್ಲದಾ,ನಿಮಗ ಯಾರ ಗೌರವ ಕೋಡುತ್ತಾರೆ, ನಿಮ್ಮ ಮಾತ ಯಾರ ಕೇಳ್ತಾರ ಅವರಿಗ ಮಾತ್ರ ಜತೆಗೆ ತಕೊಂಡ ಹೋಗ್ತಿರಂತ ಇಲ್ಲದಿದ್ದರ ಅಂತವರಿಗೆ ಕಡೆಗಣನೆ ಮಾಡ್ತಿರಂತ.

ಬಧ: ನೋಡ್ರಿ,ನೋಡಿ ನಾನು ರಾಷ್ಟ್ರೀಯ ಅಧ್ಯಕ್ಷ ಇದ್ದೇನ ಅಂದ್ರಾ,ಇದೊಂದು ಧಾರ್ಮಿಕ ಸಂಘಟನೆ ಅದಾ,ಇದು ಯಾವುದೇ ರಾಜಕೀಯ ಪಕ್ಷದ ಹುದ್ದೆ ಅಲ್ಲ, ಅಥವಾ ಅಧಿಕಾರದ ಹುದ್ದೆ, ಶಾಸಕ,ಮಂತ್ರಿ ಹುದ್ದೆ ಅಲ್ಲ. ಇದೊಂದು ಧಾರ್ಮಿಕ ಸಂಘಟನೆಯ ಹುದ್ದೆ.ಇದು ನಾವು ಕೆಲಸ ಮಾಡ್ಲಕ್ಕ ಅಷ್ಟೇ ಅದಾ ಯಾರದೋ ಮೇಲೆ ಹುಕುಂ ಮಾಡ್ಲಾಕ ಅಥವಾ ಗುಂಪುಗಾರಿಕೆ ಮಾಡ್ಲಾಕ ಅಲ್ಲ. ಇವೆಲ್ಲಾ ಆರೋಪಗಳು ಬಾಲಿಶತನದಿಂದ ಕೂಡಿವೆ.

ಸಿಮೂ: ಧನ್ನೂರ ಅವರೇ ‘ಬಧಪಿ’ ಕೇವಲ ಧಾರ್ಮಿಕ ಪ್ರಚಾರಕ್ಕೆ ಮಿಸಲಾಗಿರುವ ಸಂಸ್ಥೆ. ಈ ಸಂಸ್ಥೆಯನ್ನು ವಾಣಿಜ್ಯಕರಣ ಮಾಡಲು ಪ್ಲಾನ್ ನೀವು, ಸಿದ್ರಾಮೇಶ್ವರ ಸ್ವಾಮೀಜಿ, ಮಹಾದೇಶ್ವರ ಸ್ವಾಮೀಜಿ, ಶಂಕ್ರೆಪ್ಪಾ ಪಾಟೀಲ್ ಮತ್ತು ಕುಶಾಲ ಪಾಟೀಲ್ ಸೇರಿಕೊಂಡು ಏನೋ ಪ್ಲಾನ್ ಮಾಡಿರ ಅಂತಲ್ಲ. ಒಂದು ಟ್ರಸ್ಟ್ ಮಾಡಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ತೆಗೆಯಬೇಕೆಂದ ಅಲ್ಲಾತ್ತೀರಂತಲ್ಲ.ಇದು ಮಾತಾಜಿವಯರ ಆಶಯಕ್ಕೆ ಬಗೆಯುತ್ತಿರುವ ದ್ರೋಹವಲ್ಲವೇ?

ಬಧ: ಇದು ಸಂಪುರ್ಣ ಸುಳ್ಳು; ಇದನ್ನು ಪೂರ್ಣಪ್ರಮಾಣದಲ್ಲಿ ತಳ್ಳಿ ಹಾಕ್ತೇನೆ.ಇಂತಹ ಯಾವುದೇ ವಿಚಾರಗಳು ಜಂಗಮ ಮೂರ್ತಿಗಳ ಬಳಿ ಬಂದಿಲ್ಲ,ನಮ್ಮಲ್ಲೂ ಬಂದಿಲ್ಲ. ಒಂದುವೇಳೆ ಶಿಕ್ಷಣ ಸಂಸ್ಥೆ ಮಾಡಬೇಕು ಅಂತ ನನಗೆ ಅನಿಸಿದರೆ ಪರಮಾತ್ಮ ಮತ್ತ ಬಸವಣ್ಣ ನನಗೆ ಶಕ್ತಿ ಕೊಟ್ಟಿದ್ದಾರೆ. ನನ್ನ ಸ್ವಂತ ಶಿಕ್ಷಣ ಸಂಸ್ಥೆ ತೆಗೆಯುತ್ತೇನೆ.ನಾನೊಬ್ಬ ಉದ್ಯಮಿ ನನ್ನಲ್ಲಿ ಎರಡೂ ಕಾರ್ಖಾನೆ ಅವಾ.ಮಾಡಬೇಕು ಅನಿಸಿದರೆ ನಾನೇ ಮಾಡ್ತೇನೆ.

ಲಿಂಗೈಕ ಮಾತಾಜಿಯವರು ಇದ್ದಾಗಲೇ ಶಿಕ್ಷಣ ಸಂಸ್ಥೆಯನ್ನು ಮಾದೇಶ್ವರ ಸ್ವಾಮೀಜಿ ಮಾಡ್ಯಾರ.ಅವರಲ್ಲೂ ಇಂತಹ ಯಾವ ಆಲೋಚನೆಗಳು ಇಲ್ಲ.ಅವರು ಈ ಶಿಕ್ಷಣ ಸಂಸ್ಥೆ ಬೆಳೆಸುವುದರ ಬಗ್ಗೆ ಏನ್ ಪ್ಲಾನ್ ಇಟ್ಕೊಂಡಿದ್ದಾರೋ ನನಗಂತೂ ಗೊತ್ತಿಲ್ಲ.. ನನ್ನ ಜತೆಗೆ ಅವರೆಂದೂ ಚರ್ಚೆ ಮಾಡಿಲ್ಲ.

ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ತೆಗೆಯಬೇಕ ಅಲ್ಲಾತರ ಅಂತ ಸೃಷ್ಟಿ ಮಾಡ್ಕೊಂಡು ನಮ್ಮ ತ್ಯಜೋವಧೆ ಮಾಡ್ಲಾಕ ಸುಳ್ಳು ಆರೋಪ ಮಾಡ್ಲತ್ತಾರ ಅಷ್ಟೇ.

ಇದನ್ನೂ ಓದಿ : ‘ಬಧಪಿ’ದಲ್ಲಿನ ಅಹಿತಕರ ಬೆಳವಣಿಗೆಗೆ ‘ಲಿಂಗದೇವ’ ಅಲ್ಲ; ಧನ್ನೂರ ಮೂಲ ಕಾರಣ : ಶಿವರಾಜ ಪಾಟೀಲ್ ಅತಿವಾಳ

ಸಿಮೂ: ಸಂಸ್ಥೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ನೀವೇ ಕಾರಣರಿದ್ದೀರಿ..ನಿವ್ಯಾಕ ನೈತಿಕ ಹೊಣೆ ಹೊತ್ತು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು.

ಬಧ: ಅಲ್ಲಾರಿ ಯಾವುದೇ ಅಹಿತಕರ ಘಟನೆ ನಡೆಯುತ್ತಿಲ್ಲ..ನಾನ್ಯಾಕ ರಾಜೀನಾಮೆ ಕೋಡ್ಲಿ. ಬೆರಳೆಣಿಕೆಯಷ್ಟು ಜನ ಮಾತ್ರ ವಿರೋಧ ಮಾಡ್ಲತ್ತಾರ.

ಸಿಮೂ: ನೀವು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅನ್ ಫಿಟ್ ಇದ್ದೀರಿ.ಯಾಕಂದ್ರ, ಇಷ್ಟೊಂದು ವಿರೋಧ ಬಹಿರಂಗವಾಗಿ ಬರದಂತೆ ತಡೆಯುವ, ಸ್ವಾಮೀಜಿಗಳ ವಿರುದ್ಧ ಬರಹಗಳು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ-ಕರ್ತವ್ಯ ನಿಮ್ಮದಿತ್ತು. ನೀವು ವಿಫಲವಾಗಿದ್ದಿರಿ. ಅದಕ್ಕೆ ನೀವು ಅನ್ ಫಿಟ್ ಇದ್ದೀರಿ,ಯಾಕ ನೀವು ರಾಜಿನಾಮೆ ಕೋಡಬಾರದು.

ಬಧ: ಯಾಕಾ…. ನಾಯಾಕ ರಾಜೀನಾಮೆ ಕೋಡ್ಲಿ.

ಸಿಮೂ: ಹಾಗಾದರೆ ಇವೆಲ್ಲಾ ನಡೆಯುತ್ತಿರುವ ಘಟನೆಗಳಿಗೆ ಯಾರ ಜವಾಬ್ದಾರಿ ಹೊರಬೇಕು? ಇವೆಲ್ಲವೂ ಯಾರ ತಡೆಯಬೇಕು? ಇದು ನಿಮ್ಮ ಜವಾಬ್ದಾರಿ ಅಲ್ಲವೇ?

ಬಧ: ನೋಡ್ರಿ ಅವರ‍್ಯಾರೂ ಸಹ ಇಲ್ಲಿಯವರೆಗೆ ಲಿಖಿತವಾಗಿ ಸಂಸ್ಥೆಯ ಎದುರಿಗೆ ತಮ್ಮ ಸಮಸ್ಯೆ, ಪ್ರಸ್ತಾಪ ಇಟ್ಟಿಲ್ಲ.ಕೇವಲ ಯಾವುದೋ ಒಂದೆರಡು ವಾಟ್ಸಾಪ್ ಗ್ರೂಪ್ ನಲ್ಲಿ ಬರೆದರೆ ನಮಗೆ ಹೆಂಗ ಗೊತ್ತಾಗಬೇಕು. ನಮಗಾಗಲಿ, ಪೂಜ್ಯ ಮಾತಾಜಿಯರಿಗಾಗಲಿ ತಮ್ಮ ಪ್ರತಿರೋಧ, ತಮ್ಮ ನೋವು,ತಮ್ಮ ಸಮಸ್ಯೆ ಏನಂತ ಯಾರಾದರೂ ಲಿಖಿತ ರೂಪದಲ್ಲಿ ಕೊಟ್ಪಾರಾ?

ಸಿಮೂ: ನಿಮಗ್ಯಾಕ ಕೋಡಬೇಕು…ನಿವಂತೂ ಈಗ ರಾಷ್ಟ್ರೀಯ ಬಸದ ದಳದ ಅಧ್ಯಕ್ಷರೆ ಅಲ್ಲ.ನಿಮಗವರು ಈಗಾಗಲೇ ತೆಗೆದು ಹಾಕಿದ್ದಾರೆ. ಅವಿನಾಶ್ ಬೊಸನಿಕರ್ ಗೆ ರಾಷ್ಟ್ರೀಯ ಅಧ್ಯಕ್ಷ ಘೋಷಣೆ ಮಾಡಿದ್ದಾರಲ್ಲ!

ಬಧ: ಯಾರ ತೆಗದಹಾಕಿದ್ದಾರೆ?

ಸಿಮೂ: ‘ರಾಬದ’ ಕೇಂದ್ರ ಸಮೀತಿ ರೀ!

ಬಧ: ಯಾವ ಕೇಂದ್ರ ಸಮಿತಿರೀ.. ಪೂಜ್ಯ ಲಿಂಗೈಕ ಮಾತಾಜಿಯವರು ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ.ಇವರ‍್ಯಾರು ಮಾಡಿಲ್ಲ. ಹತ್ತು ಸಾವಿರ ಜನರೇದುರೇ ದೆಹಲಿಯಲ್ಲಿ ನನಗೆ ಅಧಿಕೃತವಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.ಅದರ ವಿಡಿಯೋ ಅದಾ..ಮತ್ತ ಈಗಾಗಲೇ ಮೂರು ವರ್ಷದಿಂದ ‘ರಾಬದ’ದ ರಾಷ್ಟ್ರೀಯ ಅಧ್ಯಕ್ಷನ್ನಾಗಿ ಸೇವೆ ಸಲ್ಲಿಸಿದ್ದೇನೆ. ಅವಿನಾಶ್ ಬೊಸನಿಕರ್ ಗೆ ರಾಷ್ಟ್ರೀಯ ಅಧ್ಯಕ್ಷ ಘೋಷಣೆ ಮಾಡಿದ್ದೇ ಹಾಸ್ಯಾಸ್ಪದವಾಗಿದೆ. ಅವಿನಾಶ್ ಬೊಸನಿಕರ್ ಗೆ ಧಾರವಾಡದಲ್ಲಿ ಘೋಷಣೆ ಮಾಡಿ, ಬೀದರನಲ್ಲಿ ಸನ್ಮಾನ ಮಾಡಿದ ತಕ್ಷಣ ಅವ್ರು ಅಧ್ಯಕ್ಷ ಆಗ್ತಾರಾ? ಅವನಿಗೆ ಹರಕೆ ಕುರಿ ಮಾಡ್ಯಾರ ಅಷ್ಟೇ.

ಸಿಮೂ: ಮೂರು ವರ್ಷದಲ್ಲಿ ‘ರಾಬದ’ಕ್ಕೆ ಮತ್ತು ‘ಬಧಪಿ’ ಕ್ಕೆ ನಿಮ್ಮ ಕೊಡುಗೆ ಏನದಾ?

ಬಧ: ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾನೆ.. ಎಲ್ಲರೂ ‘ರಾಬದ’ದ ವೇದಿಕೆಗೆ ಬರ‍್ತಾ ಇದಾರೆ. ಕಾರ್ಯಕ್ರಮಗಳು ಮತ್ತು ಸಂಸ್ಥೆಯ ವಿಕಾಸ ಬಹಳ ಶಿಸ್ತು ಬದ್ಧವಾಗಿ ಆಗ್ತಾ ಇವೆ. ಒಂದು, ಕೋವಿಡ್, ಇನ್ನೊಂದು ಲಿಂಗದೇವ ದಿಂದಾಗಿ ಅಷ್ಟೊಂದು ಹೆಚ್ಚಿನ ಪರಿಣಾಮಕಾರಿಯಾಗಿ ಕೆಲಸ ಮಾಡಲು ನಮ್ಮಿಂದ ಆಗಿಲ್ಲ.

ಸಿಮೂ: ಕೋವಿಡ್ ಸಮಯದಲ್ಲೇ ಜಾಗತಿಕ ಲಿಂಗಾಯತ ಮಹಾಸಭೆಗೆ ಎರಡ್ಮೂರು ಸಾವಿರ ಮೆಂಬರ್ ಮಾಡೀರಿ ಸರ್! ಇಲ್ಲಿಯವರಿಗೆ ‘ರಾಬದ’ ಕ್ಕೆ ಮೂರು ಜನರಿಗಾದರೂ ತಂದಿರೇನು?

ಬಧ: ಈಗ ಮಾಡ್ತೇವೆ. ಒಂದು ವರ್ಷ ಕಾಯಿರಿ ಅಷ್ಟೇ.

ನೀವು ಶಿವರಾಜ್ ಪಾಟೀಲ್ ಅತಿವಾಳ ಅವರ ಸಂದರ್ಶನ ಮಾಡಿದ್ದೇ ತಪ್ಪದ. ಏಕೆಂದರೆ ಅವರಿಗೆ ಉಚ್ಚಾಟನೆ ಮಾಡಿದ್ದೇವೆ.. ಅವರಿಗೆ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ.

ಸಿಮೂ: ಹಾಗಾದರೆ ನಿಮಗೂ ಉಚ್ಚಾಟನೆ ಮಾಡಿದ್ದಾರೆ, ಈಗ ನಾನು ನಿಮ್ಮ ಸಂದರ್ಶನ ಮಾಡುತ್ತಿರುವುದು ತಪ್ಪದ ಮತ್ತ!

ಬಧ: ನನಗೆ ನೇಮಕ ಮಾಡಿದ್ದು ಮಹಾಜಗದ್ಗುರು ಮಾತೆ ಮಹಾದೇವಿ ತಾಯಿಯವರು, ಇವರು ನನಗೆ ನೇಮಕ ಮಾಡಿಲ್ಲ ನನಗೆ ತೇಗೆಯುವ ಯಾವುದೇ ಹಕ್ಕು ಇವರಿಗಿಲ್ಲ.

ಮೇಲಾಗಿ ಇವರು ಮಾಡಿರುವ ಉಚ್ಚಾಟನೆ ಅಮಾನ್ಯವಾಗಿದೆ ಎಂದು ಗಂಗಾ ಮಾತಾಜಿಯವರೇ ಹೇಳಿದ್ದಾರೆ. ಹಾಂ, ಗಂಗಾ ಮಾತಾಜಿಯವರು ನೀವು ರಾಜಿನಾಮೆ ನೀಡ್ರೀ ಅಂದರೆ ಒಂದ ಕ್ಷಣದಲ್ಲಿ ರಾಜೀನಾಮೆ ಕೊಟ್ಟು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲೇ ದುಡಿಯುತ್ತೇನೆ.

ಸಿಮೂ: ನೀವು ಏಕಕಾಲಕ್ಕೆ ‘ರಾಬದ’ ಅಧ್ಯಕ್ಷರು ಆಯ್ತೀರಿ,ಈಕಡೆ ಜಾಗತೀಕ ಲಿಂಗಾಯತ ಮಹಸಭಾದ ಜಿಲ್ಲಾಧ್ಯಕ್ಷರು ಆಯ್ತೀರಿ, ಇದು ತಪ್ಪಲ್ಲವೇ? ಒಂದು ಸಂಘಟನೆಯ ರಾಷ್ಟ್ರಿಯ ಅಧ್ಯಕ್ಷ, ಜಿಲ್ಲಾ ಅಧ್ಯಕ್ಷ ಆದ್ರೆ ರಾಬ ದಳದಂತಹ ದೊಡ್ಡ ಸಂಘಟನೆಯ ಘನತೆಗೆ ಚ್ಯುತಿ ಬರುವುದಿಲ್ಲವೆ?

ಬಧ: ನೋಡಿ, ನಾನು ಇವೆಲ್ಲವೂ ಹುದ್ದೆಯೆಂದು ಎಂದು ಭಾವಿಸಿಲ್ಲ.ನನಗೆ ಹುದ್ದೆ ಮುಖ್ಯವಲ್ಲ. ಸೇವೆ ಮಾಡುವುದು ಮುಖ್ಯ .ನನಗೆ ಬಸವಣ್ಣ ಮುಖ್ಯ.. ಬಸವಣ್ಣನವರ ಸೇವೆ ಸಲ್ಲಿಸಲು ನನಗೆ ಎಲ್ಲೆ ಅವಕಾಶ ಸಿಕ್ರೇ ಖಂಡಿತ ಅದನ್ನು ನಾನು ಸ್ವೀಕರಿಸುತ್ತೇನೆ.. ಏಕೆಂದರೆ ಸೇವೆ ನನಗೆ ಮುಖ್ಯ.

ನನಗೆ ಯಾವುದೇ ಹುದ್ದೆ ದೊಡ್ಡದು, ಸಣ್ಣದು ಅಲ್ಲ ಬಸವಣ್ಣನವರ ಕಾರ್ಯ ಆಗಬೇಕು,ನಾನು ಯಾವಾಗಲೂ ಒಬ್ಬ ಸಾಮಾನ್ಯ ಕಾರ್ಯಕರ್ತ ಅಂತಾನೆ ಭಾವಿಸುತ್ತೇನೆ. ಇಲ್ಲಿಯವರೆಗೆ ನಾನು ರಾಷ್ಟ್ರೀಯ ಬದವ ದಳದ ಅಧ್ಯಕ್ಷ ಅಂತ ಒಂದು ಸಣ್ಣ ವಿಜಿಟಿಂಗ್ ಕಾರ್ಡ್ ಸಹ ಹಾಕೊಂಡಿಲ್ಲ. ಜಾಗತಿಕ ಲಿಂಗಾಯತ ಮಹಾಸಭೆಯ ಉದ್ದೇಶ, ‘ರಾಬದ’ದ ಉದ್ದೇಶ ಒಂದೇ ಅವಾ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸೀಗಬೇಕು,ಎಲ್ಲೆಡೆ ಬಸವ ತತ್ವ ಪಸರಿಸಬೇಕು ಎನ್ನುವ ಉದ್ದೇಶ ಅವಾ ಎರಡರದ್ದೂ.

ಸಿಮೂ: ‘ರಾಬದ’ ಪಕ್ಕಾ ಮೂಲಭೂತವಾದಿ ಸಂಘಟನೆ ಅದಾ, ಇದು ಇಡೀ ಲಿಂಗಾಯತ ತತ್ವದ ಪ್ರಖರ ವೈಚಾರಿಕತೆಗೆ ಒಂದು ಕಾಲ್ಬೇಡಿ ಆಗ್ಯಾದ..ಇದು ಮತ್ತೆ ಗತವೈಭವಕ್ಕೆ ಮರಳಲು ಸಾಧ್ಯವೇ?

ಬಧ: ಖಂಡಿತಾ ಸಾಧ್ಯಯಿದೆ. ಈಗ ರಾಷ್ಟ್ರವ್ಯಾಪಿಯಾಗಿ ಬೆಳೆಯಲು ಎಲ್ಲಾ ಅವಕಾಶಗಳು ಇದಕ್ಕೆ ಅವಾ..ಎಲ್ಲಾ ಅಡೆತಡೆಗಳು ಈಗ ನಿವಾರಣೆ ಆಗ್ಯಾವ..ಇದನ್ನು ಮತ್ತೆ ನಂಬರ್ ಒನ್ ಸಂಘಟನೆಯಾಗಿ ಬೆಳಸೆ ಬೆಳೆಸುತ್ತೇವೆ.. ಮತ್ತೆ ಇದನ್ನು ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗ್ತೇವೆ.ಇನ್ನೂ ಕೆಲವೇ ದಿನಗಳಲ್ಲಿ ಇದೊಂದು ಬೃಹತ್ ಶಕ್ತಿಯಾಗಿ ಬೆಳೆಯುತ್ತದೆ.

ಸಿಮೂ: ಏನಾದರೂ ಅಂತಹ ಯೋಜನೆ ಹಾಕೊಂಡಿದ್ದಿರಾ?

ಬಧ: ಹಾ,ಮೊಟ್ಟಮೊದಲ ನಮಗೆ ಸಂಘಟನೆ ಮಾಡುವುದು ಅದಾ,ಪ್ರತಿ ಹಳ್ಳಿ ಹಳ್ಳಿಗ ಹೋಗಿ ರಾಷ್ಟ್ರೀಯ ಬಸವ ದಳದ ಧ್ವಜ ಹಾರಿಸುತ್ತೇವೆ.ನಾಲ್ಕೈದು ರಾಜ್ಯಗಳಲ್ಲಿ ಇದನ್ನು ಬರಪಡಿಸುತ್ತೇವೆ.ಇದರ ಮೂಲಕ ಲಿಂಗಾಯತ ಹೋರಾಟಕ್ಕೆ ನಾವು ಶಕ್ತಿ ತುಂಬುವ ಕೆಲಸ ಮಾಡ್ತೇವೆ.ಈಗ ನಮ್ಮ ಆದ್ಯತೆ ‘ರಾಬದ’ದ ಸಂಘಟನೆ ಮತ್ತು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಅದಾ ಅಷ್ಟೇ!

ಸಿಮೂ: ಇಲ್ಲಿನ ನೂರಾರು ಕೋಟಿ ಆಸ್ತಿಯ ಮೇಲೆ ನಿಮ್ಮ ಕಣ್ಣಿದೆ ಅಂತ ನಿಮ್ಮ ಮೇಲೆ ಆರೋಪ ಇದೆಯಲ್ಲ.

ಬಧ: ಇದೊಂದು ಸುಳ್ಳು ಅವಿವೇಕತನದಿಂದ ಕೂಡಿದ ಆರೋಪ. ಇಲ್ಲಿನ ಒಂದು ವಿಭೂತಿಯೂ ಸಹ ಯಾರಿಗೂ ತೆಗೆದುಕೊಂಡು ಹೋಗಲು ಆಗುವುದಿಲ್ಲ.

ಸಿಮೂ: ಈ ಸಂಘಟನೆ ಬಳಸಿಕೊಂಡು ರಾಜಕೀಯವಾಗಿ ಬೆಳೆಯಬೇಕು ಅಂತ ಏನಾದರು ಪ್ಲಾನ್ ಇದೆಯೇ?

ಶಿಮೂ: ಅಂತಹ ಯಾವುದೇ ಪ್ಲಾನ್ ಇಲ್ಲ. ಒಂದುವೇಳೆ ನನಗೆ ರಾಜಕೀಯದಲ್ಲಿ ಬೆಳೆಯಬೇಕು ಅಂತ ಆಶೆ ಇದ್ದಿದ್ದರೆ ಯಾವತ್ತೋ ಒಂದು ರಾಜಕೀಯ ಪಕ್ಷದಲ್ಲಿ ಸೇರ್ಪಡೆ ಆಗುತ್ತಿದ್ದೆ. ನನ್ನ ಪ್ರತಿಭೆ,ಶ್ರಮಕ್ಕೆ ಇಲ್ಲಿಯವರೆಗೆ ಒಂದು ಸ್ಥಾನದಲ್ಲಿ ಇರ‍್ತಾ ಇದ್ದೆ. ನನಗೆ ರಾಜಕೀಯಕ್ಕಿತಲೂ ಬಸವತತ್ವ ಮುಖ್ಯ, ಇದೆ ನನ್ನ ಫಸ್ಟ್-ಲಾಸ್ಟ್ ಆದ್ಯತೆ ಅದಾ.ಒಂದು ವೇಳೆ ನನಗೆ ರಾಜಕೀಯದಲ್ಲಿ ಹೋಗಬೇಕು ಅಂತ ಆಶೆ ಆದ್ರೆ ಇವೆಲ್ಲಾ ಹುದ್ದೆಗಳಿಗೆ ರಾಜಿನಾಮೆ ಕೊಟ್ಟು ರಾಜಕೀಯದಲ್ಲಿ ಪ್ರವೇಶ ಮಾಡ್ತೇನೆ ವಿನಾ ಈ ಸಂಸ್ಥೆಯ ಹೆಸರನ್ನ ನಾನು ಯಾವತ್ತೂ ಸಹ ಬಳಸಿಕೊಳ್ಳುವುದಿಲ್ಲ.

ಈ ಹುದ್ದೆಗಳನ್ನು ನನ್ನ ವೈಯಕ್ತಿಕ ಕೆಲಸಕ್ಕಾಗಿ ಎಂದು ಸಹ ಬಳಸಿಕೊಂಡಿಲ್ಲ..ಯಾರಾದರೂ ಒಂದು ಉದಾಹರಣೆಗೆ ತೋರಿಸಿದರೆ ಅವರ ಗುಲಾಮನಾಗುತ್ತೇನೆ..ರಾಷ್ಟ್ರೀಯ ಅಧ್ಯಕ್ಷ ಅಂತ ಒಂದು ಸಣ್ಣ ವಿಜಿಟಿಂಗ್ ಕಾರ್ಡ್ ಸಹ ನಾನು ಮಾಡ್ಕೊಂಡಿಲ್ಲರೀ.

ಸಿಮೂ: ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅಥವಾ ನಿಮ್ಮ ಮೇಲೆ ಆಗುತ್ತಿರುವ ದಾಳಿಯಿಂದಾಗಿ ಮನಸ್ಸಿಗೆ ನೋವಾಗಿ, ‘ರಾಬದ’ದ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಯಾವಾಗಲಾದರೂ ಅನಿಸಿದೆಯೇ?

ಬಧ: ಲಿಂಗದೇವ ವಾಪಸ್ಸು ಪಡೆಯದಕ್ಕಿಂತ ಮುಂಚೆ ಅನಿಸಿತ್ತು. ಆದರೆ, ಈಗ ಅಂತ ಯಾವುದೇ ಆಲೋಚನೆ ಬಂದಿಲ್ಲ. ಏಕೆಂದರೆ ಗಂಗಾಮಾತಾಜೀಯವರು ನನ್ನನ್ನು ಮತ್ತೆ ಇವರೆ ನಮ್ಮ ‘ರಾಬದ’ದ ರಾಷ್ಟ್ರೀಯ ಅಧ್ಯಕ್ಷ ಎಂದು ನಂಬಿ ಘೋಷಣೆ ಮಾಡಿದ್ದಾರೆ.. ಅವರ ನಂಬಿಕೆ ಉಳಿಸಿಕೊಂಡು ಹೋಗ್ತೇನೆ.

ಸಿಮೂ: ಇಲ್ಲಿಯವರೆಗೆ ನಮ್ಮ ಜತೆಗೆ ಮಾತಾಡಿದ್ದಕ್ಕಾಗಿ ತಮಗೆ ಧನ್ಯವಾದಗಳು.

ಬಧ: ತಮಗೂ ಧನ್ಯವಾದಗಳು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!