ದ ಪಾಲಿಟಿಕ್

ನೇಹಾ ಹಿರೇಮಠ ಕೊಲೆಗೆ ಕೋಮು ಬಣ್ಣ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಮೊನ್ನೆ (ಬುಧುವಾರ) ಸಾಯಂಕಾಲ ಹುಬ್ಬಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ  ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಕೊಲೆ ಆಗಿದೆ. ಈಗಾಗಲೇ ಪೊಲೀಸ್‌ ಇಲಾಖೆ  ಫಯಾಜ್ ಎಂಬ ಕೊಲೆ ಪಾತಕನನ್ನು ಬಂಧಿಸಿ, ತನಿಖೆಗೆ ಒಳಪಡಿಸಿದೆ. ʼಮತ್ತೆಂದೂ ಇಂತಹ ಘಟನೆಗಳು ನಡೆಯದಂತೆ ಕಠಿಣ ಕಾನೂನು ಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಮೃತಳ ತಂದೆ ತಾಯಿಗೆ ಆಶ್ವಾಸನೆ ನೀಡಿದ್ದಾರೆ. ʼಇಂತಹ ಪ್ರಕರಣಗಳಿಗೆ ಎನಕೌಂಟರ್‌ ಕಾನೂನು ಜಾರಿಯಾಗಬೇಕು. ಆಗಲೇ ಆರೋಪಿಗಳನ್ನು ಹೊಡೆದುರುಳಿಸಬಹುದುʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ʼಕೊಲೆಯನ್ನು ಖಂಡಿಸಿದಲ್ಲದೆ, ಯುವತಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆʼ ಎಂದು ತಿಳಿಸಿದ್ದಾರೆ.

ಧಾರವಾಡದ ʼಅಂಜುಮನ್‌ಎ ಇಸ್ಲಾಂʼ ಸಂಸ್ಥೆಯ ಮುಖಂಡರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಡಿಸಿಪಿಗೆ ಭೀಟಿಯಾಗಿ ಮನವಿ ಸಲ್ಲಿಸಿದ್ದಾರೆ. ಆರೋಪಿಯ ತಂದೆ – ತಾಯಿ ಅವನನ್ನು ಕಠಿಣಾತಿಕಠಿಣ ಶಿಕ್ಷೆ ವಿಧಿಸಲೆಂದು ಮನವಿ ಮಾಡಿದ್ದಲ್ಲದೆ, ಗದ್ಗದಿತರಾಗಿ ಅಳುತ್ತಾ ಕೈಮುಗಿದು ಕ್ಷಮೆ ಯಾಚಿಸಿದ್ದಾರೆ. 

ಆದಾಗ್ಯೂ ಬಿಜೆಪಿ ಇಲ್ಲಿ ಈ ಕೊಲೆಗೆ ಕೋಮು ಬಣ್ಣ ಬಳೆಯಲು ಪ್ರಯತ್ನಿಸುತ್ತಿದೆ. ಆರೋಪಿ ಫೈಯಾಜ್‌ ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ., ನೇಹಾಳ ಶವದ ಮೇಲೆ ಮತ ಫಸಲು ತೆಗೆಯಲು ಹವಣಿಸುತ್ತಿದೆ. ಈ ನಡೆ  ಅಪಾಯಕಾರಿಯಾದದ್ದು.  ನೇಹಾಳ ಕೊಲೆಗೆ ಇಡೀ  ನಾಡೆ ದುಃಖಿಸುತ್ತಿದೆ. ಈ ನೋವಿನ ಕ್ಷಣದಲ್ಲೂ ಹಿಂದೂ, ಮುಸ್ಲಿಂ ಮಾಡುವುದು ಎಷ್ಟು ಸರಿ? ಒಬ್ಬ ಕೊಲೆಗಡುಕ ಮಾಡಿದ ಅಪರಾಧಕ್ಕೆ ಆತನ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ನ್ಯಾಯವೇ? ದಿನಕ್ಕೆ 78 ಕೊಲೆಗಳು, ಮಹಿಳೆಯರ ಮೇಲೆ ದಿನಕ್ಕೆ 1224 ಅಪರಾಧಗಳು ಜರಗುವ ಈ ನಾಡಿನಲ್ಲಿ ಯಾವಾವ ಸಮುದಾಯಕ್ಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು?

ಇಂತಹ ಕೊಲೆಗಳನ್ನು ರಾಜಕೀಯ ಮತ್ತು ಧರ್ಮದ ಕನ್ನಡಕ ಧರಿಸಿಕೊಂಡು ನೋಡಲು ಆರಂಭಿಸಿದರೆ ಮುಂದೆ ಈ ದೇಶದ ಗತಿಯೇನು? ಈ ಘಟನೆಯಲ್ಲಿ  ಹಿಂದೂ, ಮುಸ್ಲಿಂ ಅನ್ನುವುದುಕ್ಕಿಂತ ಗಂಡಸಿನ ಅಹಂ ಇದೆ. ತಾನು ಅಂದುಕೊಂಡತೆ ಆಗಬೇಕು ಎನ್ನುವ ವಿಕೃತ ಮನಸ್ಥಿತಿ ಇದೆ. ನಾನೇನೇ ಮಾಡಿದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಂಡ ಧೈರ್ಯವಿದೆ. ಮೊದಲು ಇದನ್ನು ಸರಿಪಡಿಸಬೇಕಿದೆ. ಇಂತಹ ದುರಳರಿಗೆ ಗರಿಷ್ಠ ಶಿಕ್ಷೆಯಾಗುವಂತಹ ವ್ಯವಸ್ಥೆ ರೂಪಿಸಬೇಕಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!