ದ ಪಾಲಿಟಿಕ್

ಲೋಕಸಭೆ ವಿಪಕ್ಷ ನಾಯಕ | ರಾಹುಲ್‌ ಗಾಂಧಿಗೆ ಮಾನ್ಯತೆ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ನಿನ್ನೆ 48  ವರ್ಷದ ನಂತರ ಲೋಕಸಭಾ ʼಸಭಾಪತಿʼ ಸ್ಥಾನಕ್ಕಾಗಿ ಚುನಾವಣೆ ಜರುಗಿತು. ಧ್ವನಿ ಮತದ ಮೂಲಕ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಓಂ ಬಿರ್ಲಾ ಅವರು ಚುನಾಯಿತರಾಗಿದ್ದಾರೆ.  ಹೆಚ್ಚು ಸದಸ್ಯರಿರುವ, ಚುನಾವಣೆಯಾದರೆ ಅವರೇ ಗೆಲ್ಲುವುದರಿಂದ ಸ್ಪೀಕರ್‌ ಸ್ಥಾನವನ್ನು ಆಡಳಿತ ಪಕ್ಷಕ್ಕೆ ಬಿಟ್ಟು ಕೊಡುವುದು, ಪ್ರತಿ ಪಕ್ಷಕ್ಕೆ ಡೆಪ್ಯೂಟಿ ಸ್ಪೀಕರ್‌ ಸ್ಥಾನ ಬಿಟ್ಟು ಕೊಡುವುದು ಈವರೆಗೂ ನಡೆದುಕೊಂಡ ಬಂದ ಪರಂಪರೆಯಾಗಿತ್ತು. ಈ ಬಾರಿ ಆಡಳಿತ ಪಕ್ಷ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಕ್ಕೆ ಬಿಟ್ಟು ಕೊಡಲು ಒಪ್ಪದ ಕಾರಣ ಚುನಾವಣೆ ನಡೆದಿದೆ. ಕಳೆದ ಲೋಕಸಭೆಯ ಅವಧಿಯಲ್ಲಿ ಉಪ ಸ್ಪೀಪರ್‌ ಹುದ್ದೆ ತೆರವಾಗಿಯೇ ಇರಿಸಿದರು. ಈ ಸಲವೂ ಅದೇ ರೀತಿ ತೆರವಾಗಿಯೇ ಇರಿಸಬಹುದು ಇಲ್ಲವೇ ತಮ್ಮ ಮಿತ್ರ ಪಕ್ಷಕ್ಕೆ ನೀಡಬಹುದು ಎಂಬ ಮಾತು ಇದೆ.

ಚುನಾವಣೆಯಲ್ಲಿ ನೈತಿಕವಾಗಿ ಮತ್ತು ರಾಜಕೀಯವಾಗಿ ಸೋತಿರುವ ಮೋದಿಯವರು ತಮ್ಮ ಆಡಳಿತ ಶೈಲಿ ಬದಲಾಯಿಸಿಕೊಳ್ಳಬಹುದೆಂದು ಭಾವಿಸಲಾಗಿತ್ತು. ಆದರೆ ಅವರು ಈ ಹಿಂದಿನ ತಮ್ಮ ಏಕಚಕ್ರಾಧಿಪತ್ಯದ ಶೈಲಿಯ ಆಡಳಿತವೇ ಮುಂದುವರೆಸಿದ್ದಾರೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ, ಪ್ರಧಾನ ಮಂತ್ರಿ ವಿರುದ್ಧ ಟೀಕೆ, ಟಿಪ್ಪಣಿ ಮಾಡುವುದು ಸಹಜ. ಆದರೆ ಮೋದಿಯವರು ಸರ್ಕಾರದ\ತನ್ನ ಮೇಲಿನ ಟೀಕೆಯನ್ನು ದೇಶದ ವಿರುದ್ಧದ ಟೀಕೆ ಎಂಬಂತೆ ಬಿಂಬಿಸಿ, ಅದರಿಂದ ರಾಜಕೀಯ ಲಾಭ ಪಡೆಯಲು ತಂತ್ರಗಾರಿಕೆ ರೂಪಿಸುತ್ತಾರೆ. ಅವರ ಈ ನಡೆ ʼಪ್ರಜಾಪ್ರಭುತ್ವ ತತ್ವʼಕ್ಕೆ ದೊಡ್ಡ ಮಾರಕ. ಅದೇ ಮನಸ್ಥಿತಿ ತಮ್ಮ ಮೂರನೇ ಅವಧಿಯಲ್ಲಿಯೂ ಮುಂದುವೆರೆಸುವ ಲಕ್ಷಣಗಳು ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲಿಷ್ಠ ವಿರೋಧ ಪಕ್ಷದ ಮಹತ್ವದ ಬಗ್ಗೆ ಮೊನ್ನೆಯಷ್ಟೇ ಮಾತಾಡಿದರು. ಈಗ ಅವರ ನಡೆ ಎಲ್ಲವೂ ತದ್ವಿರುದ್ಧವಾಗಿದೆ.  ಮಾತಿನಂತೆ ನಡೆಯಿಲ್ಲ. ಪ್ರತಿಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಪ್ರಗತಿಪಥದ ಕಡೆ ಮುನ್ನಡೆಸಿಕೊಂಡು ಹೋಗುವುದು ಒಬ್ಬ ಮುತ್ಸದ್ಧಿ ಪ್ರಧಾನಮಂತ್ರಿಯ ಪ್ರಾಥಮಿಕ ಲಕ್ಷಣ. ಆದರೆ ಮೋದಿಯವರಲ್ಲಿ ಆ ಲಕ್ಷಣ ಕಾಣುತ್ತಿಲ್ಲ.

ಈ ಮಧ್ಯೆ ದೇಶದ ರಾಜಕಾರಣದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆಯಾಗಿದೆ. ರಾಹುಲ್‌ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರೆಂದು ಕಾಂಗ್ರೆಸ್‌ ಪಕ್ಷ ಘೋಷಿಸಿತ್ತು. ಇಂಡಿಯಾ ಮೈತ್ರಿ ಕೂಟದ ನಾಯಕರು ಮೊನ್ನೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿ ಒಮ್ಮತದಿಂದ ರಾಹುಲ್‌ ಗಾಂಧಿ ಅವರನ್ನು ವಿರೋದ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದರು. ಈ ಸಂಬಂಧ ಲೋಕಸಭೆಯ ಆಡಳಿತಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, ʼರಾಹುಲ್‌ ಗಾಂಧಿ ಅವರು ಜೂನ್‌ 9ರಿಂದ ಜಾರಿಗೆ ಬರುವಂತೆ ವಿರೋಧ ಪಕ್ಷದ ನಾಯಕರಾಗಿದ್ದಾರೆʼ ಎಂದು ತಿಳಿಸಿದ್ದಾರೆ. ಸ್ಪೀಕರ್‌ ಓಂ ಬಿರ್ಲಾ ಅವರು ರಾಹುಲ್‌ಗೆ ವಿರೋಧ ಪಕ್ಷದ ನಾಯಕರಾಗಿ ಅಧಿಕೃತ ಮಾನ್ಯತೆ ನೀಡಿದ್ದಾರೆ.

ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ.   ಯಾವುದೇ ಒಂದು ಪಕ್ಷ ಅಧಿಕೃತವಾಗಿ ವಿರೋಧ ಪಕ್ಷವಾಗಲು 54 ಸ್ಥಾನಗಳು ಅದು ಗೆದ್ದಿರಬೇಕು. ಕಾಂಗ್ರೆಸ್‌ ಪಕ್ಷ 2014, 2019ರ ಲೋಕಸಭಾ ಚುನಾವಣೆಯಲ್ಲಿ ಕ್ರಮವಾಗಿ 44, 52  ಸ್ಥಾನಗಳಷ್ಟೇ ಪಡೆದಿತ್ತು. ಆದರೆ ಈ ಬಾರಿ ಅದು 99 ಸ್ಥಾನಕ್ಕೆ ಜೀಗದಿದೆ. ಇದು ನೆಲಕಚ್ಚಿದ ಪಕ್ಷದ ಪಾಲಿಗೆ ದೊಡ್ಡ ಗೆಲುವು ಎಂದು ವಿ‍ಶ್ಲೇಷಿಸಲಾಗುತ್ತಿದೆ.

ರಾಹುಲ್‌ ಗಾಂಧಿ ಅವರು ದೇಶದುದ್ದಕ್ಕೂ ಭಾರತ ಜೋಡೋ ಯಾತ್ರೆ ಮತ್ತು ಭಾರತ ನ್ಯಾಯ ಯಾತ್ರೆ ಮಾಡುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮತ್ತು ನಾಯಕರಲ್ಲಿ ಒಂದು ಹುಮ್ಮಸು ಮೂಡಿಸಿದರು. ಜನತೆಯಲ್ಲೂ ಭರವಸೆ ಬಿತ್ತಿದರು. ಅದರ ಫಲವಾಗಿಯೇ ಈ ಬಾರಿ ಕಾಂಗ್ರೆಸ್‌ ಪಕ್ಷ ಜೀಗಿತ ಕಂಡಿದಲ್ಲದೇ ತಮ್ಮ ಮಿತ್ರ ಪಕ್ಷಗಳು ಚುನಾವಣೆಯಲ್ಲಿ ನಗೆ ಬೀರಿವೆ. ಜತಗೆ ಕಳೆದ ಹದಿನೈದು ವರ್ಷಗಳಿಂದ ಬಿಜಿಪಿ ಪಕ್ಷ ಮತ್ತು ಮಾಧ್ಯಮ ಸೇರಿಕೊಂದು ರಾಹುಲ್‌ ಅವರನ್ನು ʼಪಪ್ಪುʼ ಎಂದು ಬಿಂಬಿಸಿ, ಅದರಲ್ಲಿ ಭಾಗಶಃ ಯಶಸ್ಸು ಕಂಡಿದವು. ಜತೆಗೆ ʼರಾಹುಲ್‌ ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ, ಅವರು ಅದನ್ನು ಪಾರ್ಟ್‌ ಟೈಂ ಆಗಿ ಮಾಡುತ್ತಿದ್ದಾರೆಂದುʼ ಗೇಲಿ ಮಾಡುತ್ತಿದ್ದರು. ಆದರೆ ಭಾರತ ಜೋಡೋ ಯಾತ್ರೆ, ಭಾರತ ನ್ಯಾಯ ಯಾತ್ರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅವರು ನಡೆಸಿದ ಹೋರಾಟದಿಂದ ಅವರೀಗ ರಾಜಕೀಯದಲ್ಲಿ ಮುನ್ನಲೆಗೆ ಬಂದಿದ್ದಾರೆ. ಅವರನ್ನು ಈಗ ಪಪ್ಪು ಎಂದು ಯಾರಾದರೂ ಕರೆದರೆ ಕರೆದವರನ್ನೇ ಜನರು ಪಪ್ಪು ಎಂದು ಗೇಲಿ ಮಾಡುವಂತಹ ಪರಿಸ್ಥಿತಿಯಿದೆ.

ಈ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌  ಕೇರಳದ ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಸ್ಪರ್ಧಿಸಿದ ಎರಡೂ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಗೆದ್ದಿದ್ದರು. ಅನಿವಾರ್ಯವಾಗಿ ಅವರು ರಾಯಬರೇಲಿ ಉಳಿಸಿಕೊಂಡು, ಕೇರಳದ ವಯನಾಡ್‌ ಕ್ಷೇತ್ಷಕ್ಕೆ ರಾಜೀನಾಮೆ ನೀಡಲು ನಿರ್ಧಿರಿದ್ದಾರೆ. ಈ ಕ್ಷೇತ್ರದಿಂದ ಪ್ರೀಯಾಂಕ್‌ ಗಾಂಧಿ ಸ್ಪರ್ಧಿಸುತ್ತಾರೆಂದು ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ. ಪ್ರೀಯಾಂಕ್‌ ಮೋದಲಿನಿಂದಲೂ ಸಕ್ರೀಯ ರಾಜಕೀಯದಲ್ಲಿದ್ದಾರೆ. ಆದರೆ ಇದೇ ಮೊದಲಬಾರಿಗೆ ಚುನಾವಣೆಯ ಮೈದಾನಕ್ಕೆ ಇಳಿಯಲಿದ್ದಾರೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!