ದ ಪಾಲಿಟಿಕ್

ಹಿಂದೂ ಭಜರಂಗಿ ಹುಡುಗ ಲಿಂಗಾಯತನಾದ ಕಥೆ..! 

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ನಾನು ಆಗ ಪಿಯೂ ವಿದ್ಯಾರ್ಥಿ ಹೊಸತನ್ನು ಹುಡುಕುವ ಮತ್ತು ಟ್ರೆಂಡಿಂಗ್ ಹಿಂದೆ ಬೆನ್ನತ್ತುವ ವಯಸ್ಸು. ನಾನು ಓದುವ ಸಿಂದಗಿಯಲ್ಲಿ ಹಿಂದೂಪರ ಸಂಘಟನೆಗಳ ಆರ್ಭಟ ಜೋರಾಗಿತ್ತು. ಮೆರವಣಿಗೆ, ರೋಮಾಂಚನಕಾರಿ ಭಾಷಣಗಳು ನನ್ನನ್ನು ಆಕರ್ಷಿಸಿದವು; ಅವುಗಳ ಹಿಂದೆ ಬೆನ್ನತ್ತಿ ಹೋದೆ. ಪ್ರಮೋದ ಮುತಾಲಿಕ್ ಎಲ್ಲಿ ಬರ್ತಾರೆ ಅಲ್ಲಿ ನಾನು ಹಾಜರಾಗಿ  ಅವರ ಭಾಷಣಗಳನ್ನು ಕೇಳಿ ರೋಮಾಂಚನಗೊಳ್ತಿದ್ದೆ.

ಜೊತೆಗೂ ಆರ್ ಎಸ್ ಎಸ್ ಬೈಟಕ್ ಗೂ ಕೆಲವೊಂದು ಸಲ ಹೊಗಿದ್ದೆ.. ಇವರೆಲ್ಲ ಪ್ರಚೋದನಕಾರಿ ಭಾಷಣಗಳು ಕೇಳಿ  ಇನ್ನೊಬ್ಬರನ್ನು ಕೊಲೆ ಮಾಡುವಷ್ಟು ಪ್ರಚೋದನೆಗೆ ಒಳಗಾಗುತ್ತಿದ್ದೆ. ಇವರುಗಳ   ಜೊತೆಗೆ ಸೂಲಿಬೆಲೆ ಮಾಡುವ ಭಾಷಣಗಳು ಸಹ ಬಹಳಾನೆ ಪ್ರಭಾವ ಬೀರ್ತಾ ಹೊಯ್ತು. ಇವರೆಲ್ಲರೂ ಮಾಡಿದ ಭಾಷಣಗಳನ್ನ ರೆಕಾರ್ಡ್ ಮಾಡಿಕೊಂಡು ಊರಿಗೆಲ್ಲ ಹಂಚೋ ಪ್ರಯತ್ನವೂ ಸಹ ಮಾಡಿದೆ.

ನನ್ನ ಈ ನಡೆಯನ್ನು ದೂರದಿಂದ  ಕೆನಡಾದಲ್ಲಿರುವ ನಮ್ಮೂರಿನವರಾದ ಅಣ್ಣನಂತಿರುವ  ಬಸವ ಪಾಟೀಲ್ ಗಮನಿಸುತ್ತಿದ್ದರು.  ನನಗೆ ಎಷ್ಟೋ ಸಲ ಬುದ್ದಿ ಹೇಳಲು ಬಂದಾಗ ಕೇಳಿರಲಿಲ್ಲ, ಅವರ ಜೊತೆ ವಾದ ಮಾಡಿ ಜಗಳಮಾಡಿದ್ದು ಇದೆ. ಆದರೆ, ನನ್ನ ಮನಸ್ಥಿತಿ ನಾನು ಹೇಳೊದು ಮಾತ್ರ ಸತ್ಯ ಎಂಬ ಭ್ರಮಾಲೋಕದಲ್ಲಿತ್ತು.

ಇದನ್ನೂ ಓದಿ : ನಾನು Rssನಿಂದ ದೂರವಾದದ್ದೇಕೆ ಮತ್ತು ಇತರ ವ್ಯಥೆಗಳು : ಶಿವಕುಮಾರ್ ಉಪ್ಪಿನ

ಅಣ್ಣ  ಒಂದು ಮಾತು ಹೇಳಿದ ದೇವರು ಅಂದ್ರೆ ಯಾರು..? ಧರ್ಮ ಅಂದ್ರೆ ಯಾವದು..? ಧರ್ಮ ರಕ್ಷಣೆ ಅಂದ್ರೆ ಏನು..? ಯಾವದು ಮಾಡಿದ್ರೆ ಧರ್ಮಕಾರ್ಯ ಅಂತಾರೆ?  ಅಂತ ಕೆಲವೊಂದು ಪ್ರಶ್ನೆಗಳನ್ನಿಟ್ಟು ಇವುಗಳಿಗೆ ಉತ್ತರ ವಚನ ಸಾಹಿತ್ಯದಲ್ಲಿದೆ ಹುಡುಕು ಅಂದರು. ಜೊತೆಗೆ ನಮ್ಮೂರಿನ ಬಸವಣ್ಣ ವಿಶ್ವಗುರು ಯಾಕಾದ..? ಅವರ ಸಾಹಿತ್ಯ ನಿನಗ ತಿಳಿದಾದ..? ಇವೆಲ್ಲ ಪ್ರಶ್ನೆಗಳು ನನ್ನೊಳಗ ಹುಟ್ಟುಹಾಕಿದರು.

ನನಗೂ ಸ್ವಲ್ಪ ಸಾಹಿತ್ಯದ ಓದಿನ ರುಚಿ ಇರುವುದರಿಂದ ವಚನಗಳನ್ನ ಓದುತ್ತಾ ಹೋದೆ. ಅವುಗಳ ಅರ್ಥ ಆಗದೇ ಇದ್ದಾಗ ಫೇಸ್ಬುಕ್ಕನಲ್ಲಿ ಕೆಲವು ಜನರನ್ನ ಹುಡ್ಕತಾ ಹೋದೆ, ವಿಶ್ವರಾಧ್ಯ ಸತ್ಯಂಪೇಟೆ, ದೀಪ್ತಿ ಪಾಟೀಲ್, ಜಗದೀಶ್ ಪಾಟೀಲ್ ಸರ್, ಅಮರ್ ಪಾಟೀಲ್, ಸಿದ್ದಪ್ಪ ಮೂಲಗೆ ಸರ್, ಕುಮಾರಣ್ಣ ಪಾಟೀಲ್,  ವಿಶ್ವಾ ಪೂಜಾರ್, ಸರ್ಪಭೂಷಣ್ ಸರ್, ಮುಂತಾದವರ ಲೇಖನಗಳು ಓದುತ್ತಾ ಹೋದಾಗ ರಿಯಲೈಸ್ ಆಗ್ತಾ ಹೋಯ್ತು.

ಅದರ ಜೊತೆಗೆ ತೇಜಸ್ವಿ, ಕುವೆಂಪು, ಬಾಬಾಸಾಹೇಬರ ಕೆಲವೊಂದು ಪುಸ್ತಕಗಳು ಓದಿದಾಗ ನೈಜತೆ, ಅದರ ವಿಶಾಲತೆ ಅರಿವಾಗ್ತಾ ಹೋಯ್ತು.  ಜೊತೆಗೆ ಪೆರಿಯಾರ್ ರವರ ಬರಹಗಳು ಸಹ ಹುಚ್ಚು ಹಿಡಿಸಿದವು, ಅವರ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ಇದೆಲ್ಲ ಹುಸಿ ದೇಶಪ್ರೇಮ , ಹುಸಿ ಹಿಂದೂತ್ವ, ಅಂತ ಅರಿವು ಮೂಡಲು ಪ್ರಾರಂಭಿಸಿತು. 

ಶೂದ್ರರನ್ನು ಬಳಸಿಕೊಂಡು, ತನ್ನ ಹಿಂದೂತ್ವದ ಬೇಳೆ ಬೇಯಿಸಿಕೊಂಡ  ಕೆಲವೊಂದು ನಿದರ್ಶನಗಳು ಕಣ್ಮುಂದೆ ಬಂದ್ವು, ಸಿಂದಗಿಯಲ್ಲಿ ಹಿಂದೂ ಮುಸ್ಲಿಂ ಗಲಾಟೆ ಯಾವಾಗಲೂ ಇದ್ದದ್ದೆ , ತಹಸೀಲ್ದಾರರ ಆಫೀಸ್ ಮುಂದೆ ಪಾಕಿಸ್ತಾನ ದ್ವಜ ಹಾರಿಸಿದ್ದು ಇದೇ ಹಿಂದೂಪರ ಸಂಘಟನೆಯ ಹುಡುಗರೇ. ಈ ಘಟನೆಯಲ್ಲಿ ಭಾಗಿಯಾದವರೆಲ್ಲರೂ ಲಿಂಗಾಯತ ಶೂದ್ರ ಸಮುದಾಯದ ಹುಡಗರು. ಇದೊಂದು ನಿದರ್ಶನದಿಂದ ಈ ಸಂಘಟನೆಗಳಿಂದ ಹೊರಬಂದೆ.

ಈ ಸಂಘಟನೆಗಳು ಮೊದಲು ಪ್ರಶ್ನೆ ಮಾಡುವ ಮನಸ್ಥಿತಿಯನ್ನು ಬಲಿ ಕೊಡುತ್ತವೆ, ಗುಲಾಮರಾಗಿ ತಲೆ ಅಲ್ಲಾಡಿಸುವಂತೆ ಮಾಡ್ತವೆ. ಶಿಕ್ಷಣದ ಮಹತ್ವ ಯಾವತ್ತೂ ಹೇಳಲ್ಲ.. ಚೆನ್ನಾಗಿ ಓದ್ರಿ ನೌಕ್ರಿ ತಗೊಳ್ಳಿ, ಗೌರವಯುತವಾಗಿ ಬದುಕ್ರಿ, ಯಾವುದಾದರೂ ಉದ್ಯೋಗ ಬೇಕಿದ್ರೆ ನಾವು ಕೊಡಸ್ತೀವಿ ಅಂತ ಹೇಳಿಲ್ಲ. ಬ್ಯಾನರ್ ಕಟ್ಟೊದು, ಭಗ್ವಾ ಧ್ವಜ ಹಿಡಿದು ಘೋಷಣೆ ಕೂಗೋದು ಬಿಟ್ರೆ ಏನನ್ನೂ ಹೇಳಿಲ್ಲ. ಇದರಲ್ಲಿರುವ ಎಷ್ಟೋ ಯುವಕರು ದುಡಿಯದೆ ಮನೆಗೆ ಮಗನಾಗದೇ ಅವರು ಹೇಳಿದ ಹಾಗೇ ಗುಲಾಮರಂತೆ ವರ್ತಿಸುವ ಅನೇಕನ್ನು ನೋಡಿದ್ದೆನೆ..  ಕೆಲಸವಿಲ್ಲದೇ, ಸರಿಯಾದ ಶಿಕ್ಷಣ ಇಲ್ಲದೇ ಅನೇಕರು ಈ ಸಂಘಪರಿವಾರದ  ಸಂಚಿಗೆ ಸಿಲುಕಿದ್ದಾರೆ. ಮುಂದೆ  ಇದರ ಬಲೆಗೆ ನಾವ್ಯಾರೂ ಬೀಳಬಾರದೆಂದರೆ   ಒಂದೇ ದಾರಿ‌  ನಮ್ಮ ಮಕ್ಕಳನ್ನು, ಕುಟುಂಬವನ್ನು, ದೇಶವನ್ನು  ಪ್ರೀತಿಸುವುದು ಮತ್ತು ಎಲ್ಲಾ  ಧರ್ಮೀಯರ ಜತೆಗೆ ಪ್ರೀತಿಯಿಂದ ಇರುವುದು. ಇದೇ ನೀಜವಾದ ದೇಶಭಕ್ತಿ ಎಂದು ಅರಿಯುವುದು.

ಮಡಿವಾಳಪ್ಪ ಕರದಾಳಿ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!