ರಾಜ್ಯದ ಶಿವಮೊಗ್ಗ ಜಿಲ್ಲೆ ಹಿಂದೆ ಸಮಾಜವಾದಿಗಳ ತವರೂರು, ರೈತ ಚಳವಳಿಯ ನೆಲೆ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿತ್ತು.ಪ್ರಶಕ್ತ ಕೋಮು ಗಲಭೆ, ಕೋಲೆಗಳಿಂದ ನರಳುತ್ತಿದೆ. ಇದೇ ತಿಂಗಳ 19 ರಂದು ಮುಸ್ಲಿಂ ಸಮುದಾಯದ ಸಲೀಮ್ ಅಹಮ್ಮದ್ (22), ಹಾಗು ಅಬ್ದುಲ್ ದಸ್ತಗಿರಿ (23) ಎಂಬ ಇಬ್ಬರು ಬಿಸಿರಕ್ತದ ಯುವಕರನ್ನು ಶಿವಮೊಗ್ಗ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯಮಾಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ( ಈ ಕೋಲೆಗಳು ದೊಡ್ಡ ಸದ್ದು ಮಾಡಲೇಯಿಲ್ಲ)
ನಿನ್ನೆ ಸರಿಸುಮಾರು ರಾತ್ರಿ 9:30ಕ್ಕೆ ಬಜರಂಗ ದಳದ ಕಾರ್ಯಕರ್ತರ ‘ಹರ್ಷ’ ಎನ್ನುವ ವ್ಯಕ್ತಿಯ ಹೆಣ ನೆಲಕ್ಕುರುಳಿದೆ. ಇತನ ವಯಸ್ಸಿನ್ನೂ 24, ಒಬ್ಬನೇ ಮಗ, ಅಪ್ಪ ಟೈಲರ್ ಮಾಡಿ ಸಂಸಾರವನ್ನು ಹೇಗೋ ಕಷ್ಟ ಪಟ್ಟು ಸರಿದೂಗಿಸಿಕೊಂಡು ಹೋಗುತ್ತಿದ್ದ. ‘ಹರ್ಷ’ 10ನೇ ತರಗತಿಯಲ್ಲಿ ಫೇಲ್ ಆದಮೇಲೆಯೇ ಬಜರಂಗ ದಳದ ಸನಿಹ ಬಂದಿದ್ದಲ್ಲದೆ ಸ್ವಲ್ಪ ದಿನದಲ್ಲೇ ಸಂಘಟನೆಯ ಮುಂಚೂಣಿಯ ನಾಯಕನ ಬಲಗೈ ಬಂಟನಾಗಿದ್ದ.ಆಮೇಲೆಯೇ ಇತನ ಮೇಲೆ ರೌಡಿ ಶೀಟರ್ ಒಳಗೊಂಡಂತೆ ನಾಲ್ಕು ಕೇಸ್ ಗಳು ಬಿದ್ದದ್ದು. ಎಂದಿನಂತೆಯೇ ಇಲ್ಲೂ ಕೊಲೆಯಾದವನು ಬಡವರ ಮನೆಯ ಹುಡುಗ; ಯಾವ ನಾಯಕನ ಅಥವಾ ಶ್ರೀಮಂತರ ಮಗನೂ ಅಲ್ಲ. ಪ್ರಾಯಶಃ ಕೊಂದವರಲ್ಲೂ ಯಾರು ಕೂಡಾ ನಾಯಕನ ಮಗನಿರಲಾರರು.
ಇದನ್ನೂ ಓದಿ : ವೈಯಕ್ತಿಕ ದ್ವೇಷಕ್ಕೆ ಬಜರಂಗ ದಳ ಕಾರ್ಯಕರ್ತನ ಅಮಾನುಷ ಹತ್ಯೆ!
ಈ ಕೋಲೆಯ ಹಿಂದೆ ರಾಜಕೀಯ ಬೆಳೆ ಬೇಯಿಸಿಕೊಳ್ಳಲೋ ಅಥವಾ ವೈಯಕ್ತಿಕ ಕಾರಣಕ್ಕೋ ಅಥವಾ ಮತೀಯ ದ್ವೇಷಕ್ಕೋ ಯಾವುದೇ ಕಾರಣವಿರಲಿ ಮತ್ತು ಅದು ಯಾರೇ ಮಾಡಿರಲಿ ಅಥವಾ ಮಾಡಿಸಿರಲಿ ಅವರನ್ನ ಕಠಿಣವಾಗಿ ಶಿಕ್ಷೆ ಆಗಬೇಕು. ಅದಕ್ಕೆ ನ್ಯಾಯಸಮ್ಮತವಾಗಿ ಮೊದಲು ತನಿಖೆ ಆಗಬೇಕು.ಆದರೆ, ಅದು ಈ ಸರ್ಕಾರದಿಂದ ಸಾಧ್ಯವೇ?
ಸರ್ಕಾರದ ಜವಾಬ್ದಾರಿ ಹುದ್ದೆಯಲ್ಲಿರುವ ಮಂತ್ರಿಗಳು, ಶಾಸಕರು, ಸಂಸದರು ಉದ್ದೇಶಪೂರ್ವಕವಾಗಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ತನಿಖಾ ಪೂರ್ವದಲ್ಲೆ ಬೆಂಕಿ ಉಗುಳಿ ಪ್ರಕರಣಕ್ಕೆ ತುಪ್ಪ ಸುರಿಯುತ್ತಿದ್ದಾರೆ. ಸಚಿವ ಕೆ.ಎಸ್. ಈಶ್ವರಪ್ಪ ” ಈ ಕೋಲೆ ಮುಸ್ಲಿಂ ಗೂಂಡಾಗಳು ಮಾಡಿದ್ದಾರೆ” ಎಂದು ಈಗಾಗಲೇ ಷರಾ ಬರೆದಿದ್ದಾರೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇನ್ನೊಂದು ಹೆಜ್ಜೆ ಮುಂದುವರೆದು “ಭಾರತವನ್ನು ಇಸ್ಲಾಮೀಕರಣ ಮಾಡಲು ಮುಸ್ಲಿಂ ಭಯೋತ್ಪಾದಕರೆ ಕೋಲೆ ಮಾಡಿದ್ದಾರೆ; ಇದರ ಹಿಂದೆ SDPI ಮತ್ತು PFI ಕೈವಾಡ ಇದೆ; ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು; ಇವರ ಹತ್ತಿರ ಯಾರ್ಯಾರ ಕೋಲೆ ಮಾಡಬೇಕೆಂಬ ದೊಡ್ಡ ಯಾದಿಯೇ ಇದೆ; ಇವರು ಗೃಹ ಸಚಿವರ ಜಿಲ್ಲೆಯಲ್ಲೇ ಹಿಂದೂ ಕಾರ್ಯಕರ್ತನ ಕೋಲೆ ಮಾಡಿ, ಗೃಹ ಸಚಿವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ; ಇವರನ್ನು ಹುಡುಕಿ ಹುಡುಕಿ ಹೊಸಕಿ ಹಾಕಬೇಕು” ಎನ್ನುವ ಮೂಲಕ ಕೋಮು ದಳ್ಳುರಿಗೆ ಬಹಿರಂಗವಾಗಿ ಪ್ರಚೋದನೆ ನೀಡಿದ್ದಾರೆ.
ಈ ಹೇಳಿಕೆಗಳು ಸರ್ಕಾರ ನಡೆಸುವವರ ಉದ್ದೇಶ ಏನಿದೆ ಎನ್ನುವುದು ಸಾರಿ ಸಾರಿ ಹೇಳುತ್ತಿವೆ. ಈಗಾಗಲೇ ಪೊಲೀಸ್ ಇಲಾಖೆ ಬೆಂಗಳೂರಿನ ಜೆ.ಜೆ.ನಗರ ಮೂಲದ ಮೂವರು ಶಂಕಿತರನ್ನು ಬಂದಿಸಿದ್ದಾರೆ ಎನ್ನುವ ಸುದ್ದಿ ಬರುತ್ತಿದೆ.ತನಿಖೆ ನಡೆಯುತ್ತಿರುವಾಗಲೇ ಒಂದು ಸಮುದಾಯವನ್ನು ಗುರಿ ಮಾಡಿ ಆರೋಪ ಹೋರಿಸುತ್ತಿರುವದರ ಹಿಂದೆ ಇವರ ಹುನ್ನಾರ ಏನಿರಬಹುದು?
ಇದನ್ನೂ ಓದಿ : ಸಿ.ಟಿ.ರವಿಯವರೇ, ಅಂದು ಆರೆಸ್ಸೆಸ್ ಕೇಂದ್ರ ಕಛೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಕೇಸ್ ಹಾಕಿದ್ಯಾರು?
ನಿನ್ನೆ ರಾತ್ರಿರಿಂದಲ್ಲೇ ಶಿವಮೊಗ್ಗದಲ್ಲಿ ಹಿಂಸೆ ಭುಗಿಲೆದ್ದಿದೆ. ಸ್ವತಃ ಸಚಿವ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಉದ್ರೇಕ ಜನಜಂಗುಳಿಯ ನೇತೃತ್ವ ವಹಿಸಿದ್ದಾರೆ.ಪರಿಣಾಮವಾಗಿ ನಿಷೇಧಾಜ್ಞೆ ನಡೆವೆಯೂ ಮೆಗ್ಗಾನ್ ಆಸ್ಪತೆಯಿಂದ – ಸೀಗೆಹಟ್ಟಿಯ ಮೃತಪಟ್ಟ ವ್ಯಕ್ತಿಯ ಮನೆಯವರೆಗೆ ಮೃತದೇಹದ ಮೆರವಣಿಗೆ ನಡೆದಿದೆ. ಪೊಲೀಸರು ಸಮ್ಮುಖದಲ್ಲೇ ಕಲ್ಲು ತೂರಾಟವೂ ನಡೆದಿದೆ. ಶಿವಮೊಗ್ಗದಲ್ಲಿನ ಮುಸ್ಲಿಂ ಮಾಲೀಕತ್ವದ ಅಂಗಡಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಾನೂನು ಕೈಗೆತ್ತಿಕೊಂಡಿರುವ ಕಿಡುಗೇಡಿಗಳ ವಿರುದ್ಧ ಇಲ್ಲಿಯವರೆಗೆ ಯಾರ ಮೇಲೂ ಕೇಸ್ ದಾಖಲಾಗಿಲ್ಲ.
ತಿಂಗಳ ಹಿಂದೆ ಬಜರಂಗದಳ ಕಾರ್ಯಕರ್ತರಿಂದ ನರಗುಂದದಲ್ಲಿ ‘ಸಮೀರ್’ ಹತ್ಯೆ ನಡೆದಾಗ ಯಾವ ಹಿಂಸಾಚಾರವೂ ನಡೆದಿರಲಿಲ್ಲ. ಸ್ಥಳೀಯ ಶಾಸಕ/ಸಚಿವ ಸಿ.ಸಿ.ಪಾಟೀಲ್ ಇಲ್ಲಿಯವರೆಗೂ ನೆಪಕ್ಕಾದರು ಸಂತ್ರಸ್ತ ಕುಟುಂಬವನ್ನು ಭೇಟಿ ಆಗಿಲ್ಲ. ಆದರೆ, ಈ ಪ್ರಕಣದಲ್ಲಿ?
ರಾಜ್ಯದಲ್ಲಿ ಪ್ರತಿ ವಿಧಾನಸಭೆ ಚುನಾವಣೆ ಸನಿಹ ಬಂದಾಗಲೆಲ್ಲ ಪರಮೇಶ್ ಮೆಸ್ತಾ,ಶರತ್ ಮಡಿವಾಳ,ಶೀವು ಉಪ್ಪಾರ ತರಹದ ಹಿಂದೂ ಸಮುದಾಯದ ಬಡ ಹುಡುಗರು ಕೋಲೆಯಾಗುತ್ತಿದ್ದಾರೆ. ಈಗ ‘ಹರ್ಷ’ ಕೋಲೆಯಾಗಿದ್ದಾನೆ. ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಈ ರಾಜ್ಯದಲ್ಲಿ ಹಿಂದೂ ಹುಡುಗರ ಕೋಲೆಗಳು ಯಾಕೆ ಆಗುತ್ತಿವೆ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಜತೆಗೆ, ಹಿಂದೂ ಹುಡುಗರ ಕೋಲೆ ಆದಾಗ ಬಿಜೆಪಿಯ ನಾಯಕರು ನೇರವಾಗಿ SDPI ಮತ್ತು PFI ಸಂಘಟನೆ ಮೇಲೆ ಯದ್ವಾತದ್ವಾ ದಾಳಿ ನಡೆಸಿ, ಎಲ್ಲಾ ಆರೋಪಗಳನ್ನು ಈ ಸಂಘಟನೆಗಳ ತಲೆಗೆ ಕಟ್ಟುತ್ತಾರೆ.ಜತೆಗೆ, ಇವುಗಳನ್ನು ಬ್ಯಾನ್ ಮಾಡಲು ಆಗ್ತಹಿಸುತ್ತಾರೆ. ಈಗ ಕೇಂದ್ರ-ರಾಜ್ಯದಲ್ಲಿ ಎರಡೂ ಕಡೆ ಭಾಜಪ ಪಕ್ಷವೇ ಅಧಿಕಾರದಲ್ಲಿದೆ. ಮತ್ತೇಕೆ ಬಿಜೆಪಿ ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಉಸಾಬರಿಗೆ ಹೋಗುತ್ತಿಲ್ಲ?