ದ ಪಾಲಿಟಿಕ್

ಹಾಸನ ಸೆಕ್ಷ್‌ ಸ್ಕ್ಯಾಂಡಲ್‌ : ಹೆಣ್ಣು ಮಕ್ಕಳ ಮಾನ – ಪ್ರಾಣದ ಮೇಲೆ ತೂಗುಗತ್ತಿ.

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಹಾಸನ ಜಿಲ್ಲೆಯ ಬಹುತೇಕರ ಫೋನ್‌ಗಳಲ್ಲಿ ಎರಡ್ಮೂರು ದಿನದಿಂದ ಫೋಟೊಗಳು ಹಾಗೂ ವಿಡಿಯೊಗಳು  ಹರಿದಾಡುತ್ತಿವೆ. ಈಗ ಅವು ಜಿಲ್ಲೆ ದಾಟಿ ರಾಜ್ಯದ ಜನತೆಗೆ ತಲುಪುತ್ತಿವೆ. ಅವುಗಳನ್ನು ನೋಡಿದ ಜನರಿಗೆ ಶಾಕ್‌ ಆಗುತ್ತಿದೆ. ಜೆಡಿಎಸ್‌ನ ಯುವ ನಾಯಕನೊಬ್ಬ ತನ್ನ ಅಧಿಕಾರ ಬಲ ಬಳಸಿಕೊಂಡು ಒಬ್ಬಿಬ್ಬರಲ್ಲ ನೂರಾರು ಮಹಿಳೆಯರನ್ನ ಪುಸಲಾಯಿಸಿಯೋ, ಮನವಲಿಸಿಯೋ, ಆಮೀಷ ಒಡ್ಡಿಯೋ, ಹೆದರಿಸಿಯೋ ಲೈಂಗಿಕವಾಗಿ ಬಳಸಿಕೊಂಡಿದಷ್ಟೇ ಅಲ್ಲದೆ ತನ್ನೆಲ್ಲಾ ಕಾಮ ಕೃತ್ಯಗಳನ್ನು ತನ್ನ ಮೋಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಇಟ್ಟಿದ್ದಾನೆ.

ಅದು ಹೇಗೋ  ಬೇರೆಯವರ ಕೈಗೆ ದೊರೆತು, ಈಗ ಅವು ರಾಜ್ಯದೆಲ್ಲೆಡೆ ಓಡಾಡುತ್ತಿವೆ. ಇದರಿಂದಾಗಿ ಈ ಚುನಾವಣೆಯಲ್ಲಿ ಆತ ಗೆದ್ದರೂ ಅಥವಾ ಸೋತರೂ ಆತನ ರಾಜಕೀಯ ಬದುಕು ಕತ್ತಲೆಗೆ ಜಾರುವುದನ್ನು ಯಾರೂ ತಪ್ಪಿಸಲಾಗದು. ಆತನ ಮನೆತನದ ಘಟಾನುಘಟಿ ನಾಯಕರ ರಾಜಕೀಯ ಬದುಕಿನ ಮೇಲೂ ಕರಿ ನೆರಳು ಆವರಿಸಿಕೊಳ್ಳುತ್ತದೆ. ಇದರಿಂದ ಅವನ ತಾತಾ ಕಟ್ಟಿದ ರಾಜಕೀಯ ಸಾಮ್ರಾಜ್ಯ ಅಲುಗಾಡುವ ಸಾಧ್ಯತೆಯಿದೆ. ಇತನೊಬ್ಬ ವಿಕೃತಕಾಮಿ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ಇವನ ಮುಂದೆ ಉಮೇಶ ರೆಡ್ಡಿ ಯಾವ ಲೆಕ್ಕಕ್ಕೂ ಇಲ್ಲ. 

ತಮ್ಮ ತಾತಾ, ಚಿಕ್ಕಪ್ಪ ಮತ್ತು ತಂದೆಯ ರಾಜಕೀಯ ನೆರಳಿನಲ್ಲಿ ಬೆಳೆದಿರುವ ಈತ ತನ್ನ ಅಧಿಕಾರದ ಹಾಗೂ ತಮ್ಮ ಕುಟುಂಬದ ಬಲವನ್ನು ಉಪಯೋಗಿಸಿಕೊಂಡು ಈ ಕೃತ್ಯ ಎಸೆಗಿದ್ದಾನೆ. ಇದು ಕಳೆದ ವಿಧಾನ ಸಭಾ ಚುನಾವಣೆಯಲ್ಲೇ ಸದ್ದು ಮಾಡಿತ್ತು. ಈ ವಿಷಯ ಆತನ ಕುಟುಂಬದ ಎಲ್ಲರಿಗೂ ಗೊತ್ತಿತ್ತು. ಅಷ್ಟೆ ಏಕೆ ಬಿಜೆಪಿಯ ವರಿಷ್ಠರ ಗಮನಕ್ಕೂ ಬಂದಿತ್ತು. ಆಗಲೇ ಆತನ ಕುಟುಂಬಸ್ಥರು ಪಶ್ಚಾತ್ತಾಪದಲ್ಲಿ ಬೆಂದು ಅವನಿಗೆ ಕಾನೂನಿಗೆ ಒಪ್ಪಿಸಬೇಕಿತ್ತು. ಅದನ್ನು ಮಾಡದೆ ಟಿಕೆಟ್‌ ಕೊಟ್ಟು  ಅವನಿಗೆ ಮತ್ತೊಮ್ಮೆ ಎಂಪಿ ಮಾಡಲು ಹೊರಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅವನ ಈ ಕುಕೃತ್ಯಕ್ಕೆ ಒಪ್ಪಿಗೆ ನೀಡಿದ್ದಾರೆ.  ಇವೆಲ್ಲ ಬಹಿರಂಗವಾದ ಮೇಲಾದರೂ ಚುನಾವಣೆ ಕಣದಿಂದ ಅವನನ್ನು ಹಿಂದಕ್ಕೆ ಸರಿಸಬೇಕಿತ್ತು. ಆದರೆ  ಅವನು ಹಾಗೂ ಅವನ ಕುಟುಂಬದವರು ನಾವು ಹಾಸನದಲ್ಲೂ ಗೆಲ್ಲುತ್ತೇವೆಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ.

ಈ ಪ್ರರಣದಿಂದಾಗಿ ಸಾವಿರಾರು ಮಹಿಳೆಯರ ಪ್ರಾಣ – ಮಾನ ಬೀದಿಗೆ ಬಿದ್ದಿದೆ. ಈಗಾಗಲೇ ಮೂರು ಜನ ಸಂತ್ರಸ್ತ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ಬಗ್ಗೆ ಆಮೂಲಾಗ್ರವಾಗಿ  ತನಿಖೆ ನಡೆಸಿ, ಈ ಕೃತ್ಯಕ್ಕೇ ಸರಿಸಮಾನಾದ ಶಿಕ್ಷೆ ಆತನಿಗೆ ಕೋಡಿಸಬೇಕಾದ ಸರ್ಕಾರ ಹಾಸನದಲ್ಲಿ ಏನು ನಡೆದೆ ಇಲ್ಲ ಎನ್ನುವಂತಿದೆ.  ಇದನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಬಾಯಿಮುಚ್ಚಿಕೊಂಡಿದ್ದಾವೆ.  ‌ಇನ್ನೂ ವಿರೋಧ ಪಕ್ಷ ಬಿಜೆಪಿ ತನ್ನ ಮೈತ್ರಿ ಧರ್ಮ ಪಾಲಿಸುತ್ತಿದೆ.

ಈ ಪೆನ್‌ ಡ್ರೈವ್‌ ಹೊರಗೆ ಬರುವುದರಿಂದ ಹಿಂದೆ ರಾಜಕೀಯ ಲೆಕ್ಕಚಾರ ಇರಬಹುದು,  ಇದರಿಂದಾಗಿ ಜೆಡಿಎಸ್‌ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ ಕಡೆಗೆ ಸಾಲಿಡ್‌ ಅಲ್ಲದಿದ್ದರು ಐದಾರು ಪ್ರತಿಶತಃ ವಾದರು ವಾಲಬಹುದು. ಅದೇನೇ ಇರಲಿ, ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ  ಬಳಸಿಕೊಳ್ಳಲು ಹಾಗೂ ಅದನ್ನು ರೆಕಾರ್ಡ್‌ ಮಾಡಿಟ್ಟುಕೊಳ್ಳಲು ಅವನಿಗೆ ಧೈರ್ಯ ಎಲ್ಲಿಂದ ಬಂತು? ಆ ಧೈರ್ಯಕ್ಕೆ ಕಾರಣವಾದ ಅಂಶಗಳನ್ನು ಚಿವುಟಿ ಹಾಕುವವರು ಯಾರೆಂಬುವುದು ಉತ್ತರ ಸೀಗದ ಪ್ರಶ್ನೆಯಾಗಿದೆ. ಇದು ದೇಶದ ಅತಿ ದೊಡ್ಡ ಸೆಕ್ಷ್‌ ಸ್ಕ್ಯಾಂಡಲ್.‌  ನ್ಯಾಯ ಸಮ್ಮತವಾಗಿ ತನಿಖೆ ನಡೆಸಿದರೆ ಇದರ ಆಳ – ಅಗಲ ಗೊತ್ತಾಗುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!