ದ ಪಾಲಿಟಿಕ್

ಎಫ್ಐಆರ್ ದಾಖಲಾದರು ಆರೋಪಿಗಳು ಇನ್ನೂ ಅರೆಸ್ಟ್ ಆಗಿಲ್ಲವೇಕೆ?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಗಂಗಾವತಿಯ ರುದ್ರಮ್ಮ ಅಮರೇಶ್ ಹಾಸಿನಾಳ ಮತ್ತು ಮನಗುಂಡಿಯ ಸತ್ಯಕ್ಕ ಎಂಬುವರು ಲೋಕಾಭಿರಾಮವಾಗಿ ಮಾತನಾಡುವಾಗ ದುರುದ್ದೇಶದಿಂದಲೋ ಅಥವಾ ಸದುದ್ದೇಶದಿಂದಲೋ ಕೆಲ ಲಿಂಗಾಯತ ಮಹಿಳಾ ಧರ್ಮ ಪ್ರಸಾರಕರ ಮತ್ತು ಮಠಾಧೀಶರ ಕುರಿತು ಹುಸಿ ಮಾತುಗಳನ್ನಾಡಿದಲ್ಲದೆ ಅದನ್ನು ರೀಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಪರಿಣಾಮ ಮೊನ್ನೆ ನಡೆನುಡಿ ಒಂದಾಗಿಸಿಕೊಂಡು ಆದರ್ಶದಿಂದ ಬಾಳಿಬದುಕುತ್ತಿದ್ದ ಸೂಕ್ಷ್ಮ ಮನಸ್ಸು ಹೊಂದಿದ್ದ ನೇಗಿನಹಾಳ ಶ್ರೀಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅವರ ಮಾತಿನಲ್ಲಿ ಉಲ್ಲೇಖಿತವಾಗಿರುವ ಬಹುತೇಕರು ನಡೆನುಡಿ ಒಂದಾಗಿಸಿಕೊಂಡು ಬದುಕುತ್ತಿದ್ದಾರೆ. ಅದರಲ್ಲೂ ಮಹಿಳಾ ಸಾಧಕಿಯರ ಬದುಕು ಲಿಂಗಾಯತ ಸಮಾಜಕ್ಕೊಂದು ಆದರ್ಶದ ಹೆಗ್ಗುರುತಾಗಿದೆ. ಇಂತವರ ವಿರುದ್ಧ ಹುಸಿ ಮಾತನಾಡಿದವರದ್ದು  ವಿಕೃತ, ಕ್ರಿಮಿನಲ್ ಮನಸ್ಥಿತಿ ಇದ್ದಿರಬಹುದು. ಇಲ್ಲದಿದ್ದರೆ ಹೀಗೇ ಬೇಜವಾಬ್ದಾರಿತನದಿಂದ ಅವರು ನಡೆದುಕೊಳ್ಳುತ್ತಿರುಲಿಲ್ಲ.  

ಸತ್ಯಕ್ಕ ಮತ್ತು ರುದ್ರಮ್ಮನ  ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಇಡೀ ನಾಡಿಗರು ಇವರೀರ್ವರಿಗೂ ಹಿಡಿ ಶಾಪ ಹಾಕುತ್ತಿದ್ದಾರೆ. ಸರ್ಕಾರ ಜನರ ಒತ್ತಡಕ್ಕೆ ಮಣಿದು ಈಗಾಗಲೇ ಎಫ್ಐಆರ್ ಸಹ ದಾಖಲಿಸಿಕೊಂಡಿದೆ. ಆದರೆ, ಇಲ್ಲಿಯವರೆಗೆ ಅವರು ಅರೆಸ್ಟ್ ಆಗದಿರುವುದು ಪೊಲೀಸ್ ಇಲಾಖೆಯ ಉದಾಸೀನತೆಯೆ ಕಾರಣವಾಗಿದೆ‌ ಎಂದು ಜನರು ಮಾತನಾಡುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಅರೆಸ್ಟ್ ಮಾಡಿ, ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸರ್ಕಾರ ಶ್ರೀಗಳ ಸಾವಿಗೆ ನ್ಯಾಯ ಒದಗಿಸಬಹುದು ಎಂದು ಸರ್ಕಾರದೆಡೆಗೆ ಶ್ರೀಗಳ ಭಕ್ತರು ಭರವಸೆಯಿಟ್ಟು ನೋಡುತ್ತಿದ್ದಾರೆ.

ಶ್ರೀಗಳು ಆತ್ಮಹತ್ಯೆ ಮಾಡಿಕೊಂಡ ಹಿಂದಿನ ದಿನವೇ ಗ್ರಾಮಸ್ಥರು ಪೋಲಿಸ್ ರಿಗೆ ಆಡಿಯೋ ಹರಿಬಿಟ್ಟವರ ವಿರುದ್ಧ ದೂರು ಸಲ್ಲಿಸಿದರು.  ಪೋಲಿಸರು ದೂರು ದಾಖಲಿಸಿಕೊಂಡು ಅವರಿಬ್ಬರನ್ನು ಅಂದೇ ಕಸ್ಟಡಿಗೆ ತೆಗೆದುಕೊಂಡಿದ್ದರೆ  ಪ್ರಾಯಶಃ ಶ್ರೀಗಳು ಸಾವಿಗೆ ಶರಣಾಗುತ್ತಿರಲಿಲ್ಲವೇನೋ!

ಒಂದು ಮನವಿ: ಆರೋಪ ಬಂದ ತಕ್ಷಣ ಯಾರೇ ಆಗಲಿ ಅದನ್ನು ಎದುರಿಸಬೇಕು ಇಲ್ಲವೇ ಉದಾಸೀನ ಮಾಡಬೇಕು. ವಿನಾ ಆತ್ಮಹತ್ಯೆದಂತಹ ಹೇಡಿ ಕೆಲಸಕ್ಕೆ ಯಾರು ಕೈಹಾಕಬಾರದು. ಆರೋಪ ಬಂದವರೆಲ್ಲರೂ ಸಾವಿಗೆ ಶರಣಾಗುವ ದಾರಿ ಹಿಡಿದರೆ, ಒಂದು ವಾರದಲ್ಲಿ ಇಡೀ ಜಗತ್ತೇ ಖಾಲಿ ಆಗುತ್ತದೆ. ಏಕೆಂದರೆ ಎಲ್ಲರ ಮೇಲೂ ಒಂದಲ್ಲಾ ಒಂದು ಆರೋಪ ಬಂದೇ ಬರುತ್ತದೆ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಇದ್ದರಿಗಂತೂ ಆರೋಪ ತಪ್ಪಿದಲ್ಲ. ಈ ರೀತಿ ಸಾವಿಗೆ ಶರಣಾದರೆ ನಮ್ಮ ಅಮೂಲ್ಯವಾದ ಬದುಕು ವ್ಯರ್ಥವಾಗುತ್ತದೆ ಹೊರತು ಇದರಿಂದ ಏನು ಸಾಧಿಸಿದಂತಾಗುವುದಿಲ್ಲ. ಜೊತೆಗೆ ಬಂದ ಆರೋಪಕ್ಕೆ ಪುಷ್ಟಿ ನೀಡಿದಂತಾಗುತ್ತದೆ. ಬಸವಣ್ಣನವರ ಮೇಲೇ ಕನಿಷ್ಠ ಒಂದು ಸಾವಿರ ಸಲ ಆರೋಪ ಬಂದಿರಬಹುದು, ಆದರೆ ಅವರು ನಕ್ಕು ಸುಮ್ಮನಾಗಿ ಮುನ್ನಡೆಯುತ್ತಿದ್ದರು. ಕೆಲವೊಮ್ಮೆ ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು ವಿನಾ ಅವರು ಆತ್ಮಹತ್ಯೆಗೆ ಎಂದು ಇಳಿಯಲಿಲ್ಲ. ಬಸವಣ್ಣನವರ ಬದುಕು ಮತ್ತು ಹೋರಾಟ ಎಲ್ಲರಿಗೂ ಮಾದರಿಯಾಗಲಿ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!