ದ ಪಾಲಿಟಿಕ್

ಕುಟುಂಬ ರಾಜಕಾರಣ : ಮಣೆ ಹಾಕಲು ಬಿಜೆಪಿಯೂ ಹಿಂದೆ ಬಿದ್ದಿಲ್ಲ.

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧಿಸಿಯೇ ರಾಜಕೀಯವಾಗಿ ಮುನ್ನೆಲೆಗೆ ಬಂದಿರುವ ಭಾರತೀಯ ಜನತಾ ಪಕ್ಷ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಡಜನ್ ಗಟ್ಟಲೆ ರಾಜಕೀಯ ವಂಶದ ಕುಡಿಗಳಿಗೆ ಮಂಡಿಯೂರಿ ಮಣೆ ಹಾಕಿದೆ. 

ಒಂದು ತಿಂಗಳ ಹಿಂದೆಯೇ ಪಕ್ಕದ ತೆಲಂಗಾಣದಲ್ಲಿ ನರೇಂದ್ರ ಮೋದಿಯವರು ‘ವಂಶ ರಾಜಕಾರಣ ಇದ್ದ ಕಡೆ ಭ್ರಷ್ಠಾಚಾರ ಬೆಳಯತೊಡಗುತ್ತದೆ’ ಎಂದು ವೀರಾವೇಶದಿಂದ ಮಾತನಾಡಿ ವಿರೋಧ ಪಕ್ಷಗಳ ಮೇಲೆ ಮುಗಿಬಿದ್ದಿದ್ದರು. ಆದರಿವತ್ತು ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಅವರ ಪಕ್ಷವೂ ಮಣೆ ಹಾಕಿದೆ. ಜನರೆದುರು ಅವರಾಡಿದ ಮಾತುಗಳು ಅವರೇ ಉಳಿಸಿಕೊಳ್ಳಲು ಸೋತಿದ್ದಾರೆ. ಚುನಾವಣೆ ನಿಮಿತ್ತ ಮೋದಿಯವರು ಇಲ್ಲಿಗೆ ಬಂದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಂಶಾಡಳಿತದ ಬಗ್ಗೆ ಏರು ಧ್ವನಿಯಲ್ಲಿ ಮಾತನಾಡುವ ಅವಕಾಶವನ್ನು ತಾನಾಗಿಯೇ ಕಳೆದುಕೊಂಡಿದ್ದಾರೆ. ಹೀಗೆ ತನ್ನ ಕೈ ತಾನೇ ಕಟ್ಟಿಕೊಳ್ಳುವುದು ‘ಚಾಣುಕ್ಯ’ ಲಕ್ಷಣವಂತೂ ಅಲ್ಲ.   

ಬಿಜೆಪಿಯಿಂದ ಈ ಬಾರಿ ಟಿಕೆಟ್ ಪಡೆದ ‘ರಾಜಕೀಯ ವಂಶ’ಗಳ ಕುಡಿಗಳ ವಿವರ :

1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ವಂಶದಿಂದ ಬಂದವರು. ಅವರ ಅಪ್ಪ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.

2. ಬಿ.ಎಸ್.ಯಡಿಯೂರಪ್ಪ ಅವರ ಒಬ್ಬ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ. ಇನ್ನೊಬ್ಬ ಮಗ ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ಅಭ್ಯರ್ಥಿ.

3. ರವಿ ಸುಬ್ರಹ್ಮಣ್ಯ ಬಸವನಗುಡಿ ಅಭ್ಯರ್ಥಿ, ಅವರ ಅಳಿಯ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಸಂಸದ.

4. ಜಿ.ಎಸ್. ಬಸವರಾಜು ಈಗಾಗಲೇ ತುಮಕೂರು ಸಂಸತ್ ಸದಸ್ಯ, ಅವರ ಪುತ್ರ ಜ್ಯೋತಿ ಗಣೇಶ್ ಬಿಜೆಪಿ ಅಭ್ಯರ್ಥಿ.

5. ಅಣ್ಣತಮ್ಮಂದಿರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.

6. ಉಮೇಶ್ ಕತ್ತಿ ಸಹೋದರ ಮತ್ತು ಪುತ್ರ ಇಬ್ಬರೂ ಈ ಬಾರಿ ಬಿಜೆಪಿ ಅಭ್ಯರ್ಥಿಗಳು.

7. ಸೋದರರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.

8. ಸಂಸದ ಶ್ರೀನಿವಾಸ ಪ್ರಸಾದ ಅವರ ಅಳಿಯ ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿ.

9. ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರ ಪತ್ನಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ.

10. ಮಾಜಿ ಸಚಿವ ನಾಗಪ್ಪ ಅವರ ಪುತ್ರ ಪ್ರೀತಂ ನಾಗಪ್ಪ ಬಿಜೆಪಿ ಅಭ್ಯರ್ಥಿ

11. ಸಂಸದ ಉಮೇಶ್ ಜಾದವ್ ಅವರ ಪುತ್ರ ಅವಿನಾಶ್ ಜಾದವ್ ಬಿಜೆಪಿ ಅಭ್ಯರ್ಥಿ.

12. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಮಗ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ.

13. ಮಾಜಿ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ ಮಗ ದತ್ತಾತ್ರೇಯ ಪಾಟೀಲ್ ಬಿಜೆಪಿ ಅಭ್ಯರ್ಥಿ.

14. ಮಾವ-ಅಳಿಯ ಶ್ರೀರಾಮುಲು, ಸುರೇಶ್ ಬಾಬು ಬಿಜೆಪಿ ಅಭ್ಯರ್ಥಿಗಳು.

15. ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಮಗ ಅರವಿಂದ ಬೆಲ್ಲದ್ ಬಿಜೆಪಿ ಅಭ್ಯರ್ಥಿ.

16. ಚಂದ್ರಕಾಂತ್ ಪಾಟೀಲ್ ಬಿಜೆಪಿ ಅಭ್ಯರ್ಥಿ. ಅವರ ಅಪ್ಪ ಮಾಜಿ ಎಂಎಲ್ ಸಿ.

17. ಸಪ್ತಗಿರಿ ಗೌಡ ಬಿಜೆಪಿ ಅಭ್ಯರ್ಥಿ. ಅವರ ತಂದೆ ರಾಮಚಂದ್ರಗೌಡ ಮಾಜಿ ಸಚಿವರು.

18. ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಪುತ್ರ ಅಮೃತ್ ದೇಸಾಯಿ ಬಿಜೆಪಿ ಅಭ್ಯರ್ಥಿ.

19. ಮಾಜಿ ಸಚಿವ ಆನಂದ್ ಸಿಂಗ್ ಮಗ ಸಿದ್ಧಾರ್ಥ್ ಸಿಂಗ್ ಬಿಜೆಪಿ ಅಭ್ಯರ್ಥಿ.

20. ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ.

21. ಸಿ.ವಿ.ರಾಮನ್‌ ನಗರ ಕ್ಷೇತ್ರದ ಅಭ್ಯರ್ಥಿ ಎಸ್.ರಘು ಮಹದೇವಪುರ ಕ್ಷೇತ್ರದ ಶಾಸಕ, ಸಚಿವ ಅರವಿಂದ ಲಿಂಬಾವಳಿ ಇಬ್ಬರೂ ಬಾವ, ಬಾಮೈದುನರು.

22. ಕುಂದಾಪುರದ ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಅವರ ತಂದೆ ಎ.ಜಿ.ಕೊಡ್ಗಿ ಮಾಜಿ ಶಾಸಕರು.

23. ಸಿ.ವಿ.ರಾಮನ್‌ ನಗರ ಕ್ಷೇತ್ರದ ಅಭ್ಯರ್ಥಿ ಎಸ್.ರಘು ಮಹದೇವಪುರ ಕ್ಷೇತ್ರದ ಶಾಸಕ, ಸಚಿವ ಅರವಿಂದ ಲಿಂಬಾವಳಿ ಇಬ್ಬರೂ ಬಾವ, ಬಾಮೈದುನರು.

24. ಕುಂದಾಪುರದ ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಅವರ ತಂದೆ ಎ.ಜಿ.ಕೊಡ್ಗಿ ಮಾಜಿ ಶಾಸಕರು.

25. ಸಂಸದ ಕರಡಿ ಸಂಗಣ್ಣನ ಹಿರಿಯ ಸೊಸೆಗೆ ಕೊಪ್ಪಳದಿಂದ ಟಿಕೆಟ್

26. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಸ್ವಾಮಿ ಮಗ ಕಟ್ಟಾ ಜಗದೀಶ್ ಗೆ ಹೆಬ್ಬಾಳದಿಂದ ಟಿಕೆಟ್

27. ಮಾಜಿ ಸಚಿವ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾಗೆ ಮಹದೇವಪುರದಿಂದ ಟಿಕೆಟ್

********

ವಂಶ ರಾಜಕಾರಣ ಇದ್ದ ಕಡೆ ಭ್ರಷ್ಠಾಚಾರ ಬೆಳಯುತ್ತದೆ. ಹಾಗಾಗಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವ ಪಕ್ಷಕ್ಕೆ ಜನರು ವೋಟ್ ಹಾಕಬೇಡಿ.

– ನರೇಂದ್ರ ಮೋದಿ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!