ದ ಪಾಲಿಟಿಕ್

ಯಡಿಯೂರಪ್ಪ ಬಂದರೂ ಖುರ್ಚಿಗಳು ಖಾಲಿ ಖಾಲಿ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕರ್ನಾಟಕದ ಮೊದಲ ಹಂತದ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಒತ್ತಡದಲ್ಲಿದ್ದಾರೆ. ಅಲ್ಲಿ ಚುನಾವಣೆ ಮುಗಿದ ಮೇಲೆ ಉತ್ತರ ಕರ್ನಾಟಕದ ಯಾವೆಲ್ಲಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಇದೇಯೋ ಅಲ್ಲೆಲ್ಲ ನಮ್ಮ ನಾಯಕರು ಬಂದು ಸರಿಪಡಿಸುತ್ತಾರೆಂದು ಬಿಜೆಪಿಯ ಕಾರ್ಯಕರ್ತರು ನಂಬಿದ್ದರು.  ದಕ್ಷಣ ಕರ್ನಾಟದಲ್ಲಿ ಚುನಾವಣೆ ಮುಗದಿವೆ. ಕಳೆದೆರಡು ದಿನದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನ ಸ್ಟಾರ ಪ್ರಚಾರಕರು ಉತ್ತರ ಕರ್ನಾಟಕದ ಕಡೆ ಲಗ್ಗೆ ಇಟ್ಟಿದ್ದಾರೆ.  ಮೇ ಐದರವರೆಗೆ ಇಲ್ಲೆ ಮೊಕ್ಕಾಂ ಇರುತ್ತದೆ. ಎರಡು ಪಕ್ಷದ ನಾಯಕರ ಮೊದಲ ಆದ್ಯತೆ ಎಲ್ಲೆಲ್ಲಿ ಬಂಡಾಯ ಇದೇಯೋ ಅದನ್ನು ಸರಿಪಡಿಸುವುದೇ ಆಗಿದೆ. ಅದರ ಭಾಗವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊನ್ನೆ [ಗುರುವಾರ] ಬೀದರಗೆ ಆಗಮಿಸಿ, ಬಂಡಾಯ ಶಮನ ಮಾಡುವ ಉಮೇದಿನಲ್ಲಿದ್ದರು ಆದರೆ ಸಭೆಗೆ ಚವ್ಹಾಣ್‌ ಬಾರದಿದ್ದರಿಂದ ಅವರ ಲೆಕ್ಕಚಾರ ತಲೆಕೆಳಗಾಗಿದಲ್ಲದೆ ಜನರಿಲ್ಲದೆ ಹಾಕಿದ ಖುರ್ಚಿಗಳು ಖಾಲಿ ಇದ್ದವು.

ಸಂಸದ ಭಗವಂತ ಖೂಬಾ ತವರು ಕ್ಷೇತ್ರದಲ್ಲೇ ಬಂಡಾಯದ ಬಿಸಿ ಎದುರಿಸುತ್ತಿದ್ದಾರೆ. ಇದು ಚುನಾವಣೆಯ ಮೇಲೆ ಭಾರಿ ಪರಿಣಾಮ ಬಿರುತ್ತದೆ ಎಂದು ಮನಗಂಡು ಯಡಿಯೂರಪ್ಪನವರ ಸಮಾವೇಶವನ್ನು ಔರಾದನಲ್ಲಿ ಆಯೋಜನೆ ಮಾಡಿದರು. ಈ ಸಮಾವೇಶದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರನ್ನು ಕರೆಯಿಸಿ ಭಿನ್ನಮತ ಶಮನ ಮಾಡಬೇಕು, ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಇದರ ಹಿಂದೆ  ಆಲೋಚನೆ ಇತ್ತು. ಆದರೆ ಶಾಸಕ ಸಮಾವೇಶದ ಕಡೆ ಸುಳಿಯದೆ ದೂರವೇ ಉಳಿಯುವ ಮೂಲಕ ಸೆಡ್ಡು ಹೊಡೆದಿದ್ದಲ್ಲದೇ ತಮ್ಮ ಹಿಂಬಾಲಕರು ದೂರ ಉಳಿಯುವಂತೆ ಮಾಡಿದ್ದಾರೆ. ಹೆಚ್ಚಿನ ಜನರು ಬಾರದ  ಫಲವಾಗಿ ಸಭೆಯ ಕಳೆ ಗುಂದಿತ್ತು.  ಆದಾಗ್ಯೂ ಕಡು ಕೋಪಿಷ್ಠ ಮತ್ತು ಮುಂಗೋಪಿಯಾದ ಯಡಿಯೂರಪ್ಪ ತಮ್ಮದೆ ಸ್ವಪಕ್ಷೀಯ ಶಾಸಕನ ನಡೆಯ ಬಗ್ಗೆ ತುಟಿ ಪಿಟುಕ ಎನ್ನದೆ ಮೌನಕ್ಕೆ ಚಾರಿದ್ದು ಕುತೂಹಲ ಮೂಡಿಸಿದೆ.

ಈ ಬೆಳವಣಿಗೆಯಿಂದಾಗಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಗೊಂದಲ್ಲಕ್ಕೆ ಬಿದ್ದಿದ್ದಾರೆ. ಕಾರ್ತಕರ್ತರ ಸ್ಥಿತಿ ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ. ಯಡಿಯೂರಪ್ಪ ಬಂದು ಎಲ್ಲವೂ ಸರಿಪಡಿಸುತ್ತಾರೆಂದು ನಂಬಿದ ಬಿಜೆಪಿ ಕಾರ್ಯಕರ್ತರಿಗೆ ನಿರಾಶೆ ಆಗಿದೆ. ಪ್ರಭು ಚವ್ಹಾಣ್‌ ಕೊನೆಯವರೆಗೂ ದೂರವೇ ಉಳಿದರೆ ಏನು ಮಾಡಬೇಕೆಂದು ದೋಚದಂತಾಗಿದೆ. ಶಾಸಕರ ಹಿಂದೆ ನಿಷ್ಠಾವಂತ ಕಾರ್ಯಕರ್ತರ ದಂಡೇ ಇದೆ. ಮೇಲಾಗಿ ಅವರ ಸ್ವಜಾತಿಯ ಜನರು ಕ್ಷೇತ್ರದ ಔರಾದ, ಚಿಂಚೋಳಿ, ಬಸವಲ್ಯಾಣದಲ್ಲಿ ಹರಡಿಕೊಂಡಿದ್ದಾರೆ. 1.25 ಲಕ್ಷ ಮತದಾರರಿರುವ ಲಂಬಾಣಿ ಸಮುದಾಯಕ್ಕೆ ಚವ್ಹಾಣ್‌ ಬಂಡಾಯ ಮತ್ತು  ಈ ಹಿಂದೆ ಖೂಬಾ ಕಾರಣಕ್ಕಾಗಿ ಹಾಕಿದ ಕಣ್ಣೀರಿನ ಹನಿಗಳು ಥಾಂಡಾಗಳಿಗೆ ತಲುಪಿ, ಅವು ಮತವಾಗಿ ಪರಿವರ್ತನೆಯಾದರೆ ಲಂಬಾಣಿ ಸಮುದಾಯದ ವೋಟ್‌ಗಳು ಕಾಂಗ್ರೆಸ್‌ ಕಡೆಗೆ ವಾಲುವ ಸಾದ್ಯತೆ ಇವೆ.

ಕಳೆದ ಚುನಾವಣೆಯಲ್ಲಿ ಖೂಬಾ ಅವರಿಗೆ ಔರಾದ ಮತಕ್ಷೇತ್ರದಲ್ಲಿ 35 ಸಾವಿರ ಲೀಡ್‌ ಸಿಕ್ಕಿತ್ತು. ಈ ಲೀಡ್‌ ಏನಾದರೂ ಕಡಿಮೆ ಆದರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.  ಖೂಬಾ ಒಂದಸಲವೂ ಚವ್ಹಾಣ್‌ ಭೇಟಿಗೆ ಹೊಗದಿರುವುದು, ಅವರ ಸಂಗಡ ಮಾತಾಡದೆ ಇರುವುದು ಅವರ ಬೆಂಬಲಿಗರಿಗೆ ಮತ್ತಷ್ಟು ಕೆರಳಿಸಿದೆ. ಈ ಬಿಗುಮಾನದಿಂದ ಹಾನಿಯಾಗುವುದು ತನಗೆ ಎಂದು ಗೊತ್ತಿಲ್ಲದಷ್ಟು ಅವರು ದಡ್ಡರೆನಲ್ಲ. ಗುರುಪಾದಪ್ಪ ಕುಟುಂಬದವರು ಬಿಜೆಪಿಗೆ ಬೆಂಬಲಿಸಿದ್ದಾರೆ, ಇವರ ಬೆಂಬಲದಿಂದ ಚವ್ಹಾಣ್‌ ಬಂಡಾಯ ಸರಿದೂಗಿಸಬಹುದೆಂಬ ಲೆಕ್ಕಚಾರ ಹಾಕಿಯೇ ಅವರ ಜತೆಗೆ ಮಾತುಕತೆಗೆ ಮುಂದಾಗುತ್ತಿಲ್ಲವೆಂದು  ಖೂಬಾ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರದಿಂದ ದೂರವೇ ಉಳಿದಿದ್ದಾರೆ. ರಾಜ್ಯಮಟ್ಟದ ನಾಯಕರು ಬಂದಾಗ ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಮೇಲೆ ನಾಪತ್ತೇ ಆಗುತ್ತಿದ್ದಾರೆ. ತಮ್ಮ ಎದುರಾಳಿಯ ಹಿಂದೆ ಅವರ ಪಕ್ಷದ ದಂಡೇ ನಿಂತಿದೆ. ಇದು ಖೂಬಾ ‍ಏದೆಸಿರು ಬಿಡುವಂತಾಗಿದೆ. ಚವ್ಹಾಣ್‌ ಮುನಿಸು ಹೀಗೆ ಮುಂದುವರೆದರೆ ಬಿಜೆಪಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!