ದ ಪಾಲಿಟಿಕ್

ಸುಮೋಟೋ ಕೇಸ್ ಬೇಡದವರ ಮೇಲೆ ಬಳಸಲು ಇರೋ ಅಸ್ತ್ರವೆ?!

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಈ ನೆಲದಲ್ಲಿ ಯಾರೂ ಸಹ ಕಾನೂನಿಗೆ ಅತೀತರಲ್ಲ. ನಟ ಮತ್ತು ಸಾಮಾಜಿಕ ಕಾರ್ಯಕರ್ತ ‘ಚೇತನ್’ ಕಾನೂನು ಉಲಂಘಿಸಿದರೆ ಕಾನೂನಿನ ಅಡಿಯಲ್ಲಿಯೇ ಅವರ ವಿರುದ್ಧ ವಿಚಾರಣೆ ನಡೆಯಲಿ.ಆದರೆ, ಅವರನ್ನು ಮನೆಯವರಿಗೂ ತಿಳಿಸದೆ ಅಪಹರಣದ ರೀತಿಯಲ್ಲಿ ಪೊಲೀಸರು ಕರೆದುಕೊಂಡು ಹೋಗಿದ್ದು,ಅವರು ಎಲ್ಲಿದ್ದಾರೆಂದು ಹೆಂಡತಿಗೂ ತಿಳಿಸದೆ ನಿಗೂಢವಾಗಿಡುವುದು ಪೊಲೀಸ ಇಲಾಖೆಯ ಅತೀರೆಕದ ಮತ್ತು ಕಾನೂನು ಬಾಹಿರವಾದ ಸರ್ವಾಧಿಕಾರಿ ನಡೆಯಾಗಿದೆ.

ನ್ಯಾಯದೀಶರ ಹೆಸರು ಉಲ್ಲೇಖಿಸಿ,ಟೀಕೆ-ಟಿಪ್ಪಣಿ ಮಾಡಬಾರದು ಎಂಬ ನಿಯಮಗಳಿದ್ದಾಗ್ಯೂ, ಅವರು ಟೀಕೆ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಹುದಾಗಿತ್ತು. ಈ ಬಂಧನ,ಸ್ವಯಂ ಪ್ರೇರಿತ ದೂರು ಇತ್ಯಾದಿ ಇತ್ಯಾದಿಗಳ ಅವಶ್ಯಕತೆಯೆ ಇರಲಿಲ್ಲ. ಅದರಲ್ಲೂ ಯಾವುದೇ ಸಮನ್ಸ್ ಅಥವಾ ನೋಟಿಸ್ ನೀಡದೆ, ಅರೆಸ್ಟ್ ವಾರೆಂಟ್ ಇಲ್ಲದೇ ಬಂದಿಸಿ, ಮಾಧ್ಯಮಗಳಿಗೆ ವಿಷಯ ಗೊತ್ತಾದ ಮೇಲೆ ವಿಚಾರಣೆ ನೇಪದಲ್ಲಿ ಬಂದಿಸಿದ್ದೇವೆ ಎಂದು ಸಮಜಾಯಿಷಿ ನೀಡುವುದು, ಆಮೇಲೆ ಐಪಿಸಿ ಸೆಕ್ಸೆನ್ 505 (2),504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದು ಇವೆಲ್ಲವೂ ಏನನ್ನು ಸೂಚಿಸುತ್ತವೆ?

ಇದನ್ನೂ ಓದಿ : ಹೆಣರಾಜಕಾರಣಕ್ಕೆ ಇಳಿದ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಟೀಂ ..!

ಸಾಮಾಜಿಕ ಜಾಲತಾಣಗಳ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆಂದಾಗಲಿ,ಸಮಾಜದಲ್ಲಿ ಕೋಮು ಪ್ರಚೋದನೆ ಹರಡಿಸುತ್ತಿದ್ದಾರೆಂದಾಗಲಿ  ಸಾರ್ವಜನಿಕರಾರು ಸಹ ನಟ ಚೇತನ್ ವಿರುದ್ಧ ದೂರು ಸಲ್ಲಿಸಿಲ್ಲ. ಅಥವಾ ನ್ಯಾಯಾಂಗ ನಿಂದನೆ ಆಗಿದೆ ಎಂದು ಸ್ವತಃ ನ್ಯಾಯಲಯವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿಲ್ಲ ಅಥವಾ ಅವರ ವಿರುದ್ಧ ಕೇಸ್ ದಾಖಲಿಸಿ ಎಂದು ಪೊಲೀಸ್ ಇಲಾಖೆಗೆ ಸೂಚಿಸಲ್ಲ. ಆದಾಗ್ಯೂ ಪೋಲಿಸರು ಇಷ್ಟೊಂದು ಮುತುವರ್ಜಿ ವಹಿಸಿ ಸಿನಿಮಾ ಶೈಲಿಯಲ್ಲಿ  ಅರೆಸ್ಟ್ ಮಾಡಿದ್ದರ  ಹಿಂದೆ  ರಾಜಕಾರಣ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪೊಲೀಸರು ಹಿಂದಿನಿಂದಲೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ವಕ್ತಾರರಾಗಿಯೇ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ,ಹೊಸದೇನಲ್ಲ. ಆದರೆ, ಸಾಮಾಜಿಕ ಕಾರ್ಯಕರ್ತರ, ಚಿಂತಕರ, ಹೋರಾಟಗಾರರ,ಪ್ರಗತಿಪರರ ದನಿಯನ್ನು ಹತ್ತಿಕ್ಕಲು ಆರೆಸ್ಸೆಸ್ ಅಣತಿಯಂತೆ ಕೆಲಸ ಮಾಡಿದ್ದು ತೀರಾ ವಿರಳ.ಇತ್ತೀಚೆಗೆ ಅವರಿಗೆ ಬೇಕಾಗಿರುವುದು ನೀವು ಬಿಜಿಪಿ ಪರವೋ ಅಲ್ಲವೋ ಎನ್ನುವುದು ಮಾತ್ರ ಎನ್ನುವಂತಿದೆ ಈ ಘಟನೆ.

ಶೇಷಾದ್ರಿಪುರಂ ಪೊಲೀಸರಿಗೆ ನಟ ಚೇತನ್ ಬರೆದದ್ದು ಮಾತ್ರ ಕಣ್ಣಿಗೆ ಬಿದ್ದಿದ್ದು ಆಕಸ್ಮಿಕವಾಗಿ ಏನಲ್ಲ. ಉದ್ದೇಶಪೂರ್ವವಾಗಿಯೇ ವಿಶೇಷ ಮುತುವರ್ಜಿವಹಿಸಿ ಅವರು ಬಳಸುವ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿ ತಮಗೆ ಉಪಯೋಗವಾಗುವ  ಪೋಸ್ಟ್ ಮಾತ್ರ ಹೆಕ್ಕಿ ತೇಗೆದು, ಅವರನ್ನು ಕಾನೂನು ಬಾಹಿರವಾಗಿ ಬಂಧಿಸುವಂತಹ  ತುರ್ತು ಪೊಲೀಸರಿಗೆ ಏನಿತ್ತು?ಇದು ಯಕ್ಷಪ್ರಶ್ನೆಯಾಗಿದೆ.

ಇದೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಕೊಚ್ತೀವಿ,ಕೊಲ್ತೀವಿ ಎಂದು ಹಿಂದೂ ಮತೀಯವಾದಿಗಳು ಅನುದಿನವೂ ಹಾಕುವ  ಬರೆಹಗಳು ಇವರ ಕಣ್ಣಿಗೇಕೆ ಬೀಳುತ್ತಿಲ್ಲ? ಭಾಜಪದ ಸಾಲು ಸಾಲು ನಾಯಕರು ಕೋಮು  ದ್ವೇಷ ಹಬ್ಬಿಸುವ,ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂತೆ ಆಡುವ  ಮಾತುಗಳನ್ನು  ಇವರಿಗೇಕೆ ಕೇಳಿಸುತ್ತಿಲ್ಲ?

ಬಿಜೆಪಿಯ ನಾಯಕರು/ ಹಿಂದೂ ಮತೀಯವಾದಿಗಳು ಹಾಡುಹಗಲೆ ಕಾನೂನಿನ ಮೇಲೆ ಸವಾರಿ ಮಾಡಿ,ಸಮಾಜದಲ್ಲಿ ಶಾಂತಿ ಕದಡಿಸುವಂತಹ ಮಾತನಾಡಿದಾಗಲೆಲ್ಲ ಅವರ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆಯೇ? ಎಷ್ಟು ಜನರ ವಿರುದ್ಧ ಇಲ್ಲಿಯವರೆಗೆ ಕೇಸ್  ದಾಖಲಿಸಿದ್ದಾರೆ? 

ಪೊಲೀಸರ ದೃಷ್ಟಿಯಲ್ಲಿ ಪೋಸ್ಟ್ ಕಾರ್ಡ್ ‘ಮಹೇಶ್ ವಿಕ್ರಂ ಹೆಗಡೆ’ ಮಾಡುತ್ತಿರುವುದೆಲ್ಲವೂ ಸತ್ಯ ಹರಿಶ್ಚoದ್ರನ್ ಕೆಲಸ!  ಈಶ್ವರಪ್ಪ, ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ತೇಜಸ್ವಿ ಸೂರ್ಯ ಮುಸ್ಲಿಂ ಸಮುದಾಯದ ವಿರುದ್ಧ ಯಾವಾಗಲೂ ವಿಷ ಕಾರುತ್ತಿರುವುದು ಕೋಮು ಪ್ರಚೋದನೆ ಅಲ್ಲವೇ ಅಲ್ಲ!  ಕಳೆದ ವರ್ಷ ಸಿ.ಟಿ.ರವಿ, “ನ್ಯಾಯದೀಶರು ಪ್ರಶ್ನಾತೀತರಲ್ಲ” ಎಂದು ಬಹಿರಂಗವಾಗಿಯೇ ಮಾಧ್ಯಮಗಳ ಎದುರು ಹೇಳಿರುವುದು ನ್ಯಾಯಾಂಗ ನಿಂದನೆ ಅಲ್ಲ! ಏಕೆಂದರೆ ಇದು ಮೋದಿ ಭಾರತ, ಭಾಜಪ ಭಾರತ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!