ದ ಪಾಲಿಟಿಕ್

ಸಿಯುಕೆ ಕಲಬುರಗಿ: ಪ್ರಾಧ್ಯಾಪಕರ ಹೊಣೆಗೇಡಿತನವೂ ವಿಶ್ವವಿದ್ಯಾಲಯದ ಅವನತಿಯೂ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ  ಸಿಗಲೆಂಬ ಘನ ಉದ್ದೇಶದಿಂದ 2009 ರಲ್ಲಿ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ʼಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯʼ ಸ್ಥಾಪನೆಯಾಗಿದೆ. ಆರಂಭದಲ್ಲಿ ಎಲ್ಲವೂ ಚನ್ನಾಗಿತ್ತು. ಮುಂದೆ ಕುಲಪತಿ ಎಂ. ಮಹೇಶ್ವರಯ್ಯ ತಮ್ಮ ಅವಧಿಯಲ್ಲಿ  ಆರ್‌ಎಸ್‌ಎಸ್‌ ಸಸಿ ನೆಟ್ಟಿ ಹೋದರು. ಈಗಿನ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್‌ ಅದಕ್ಕೆ ನೀರು, ಗೊಬ್ಬರ ಹಾಕಿ ಹುಲುಸಾಗಿ ತಣ್ಣಗೆ ಬೆಳೆಸುತ್ತಿದ್ದಾರೆ.

ಒಂದು ವಿಶ್ವವಿದ್ಯಾಲಯಕ್ಕೆ ವಿವಿದ ಜಾತಿ, ಧರ್ಮ, ಸಂಪ್ರದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಓದಿ ಭವಿಷ್ಯ ರೂಪಿಸಿಕೊಳ್ಳಲು ಬರುತ್ತಾರೆ. ಅಲ್ಲಿನ ಕ್ಯಾಂಪಸ್‌ನಲ್ಲಿ ಜಾತ್ಯತೀತ ಗಾಳಿ ಬೀಸಬೇಕು. ಅಲ್ಲಿ ಓದುತ್ತಿರುವ ಪ್ರತಿಯೊಬ್ಬರಿಗೂ ಇದು ನನ್ನ ವಿಶ್ವವಿದ್ಯಾಲಯ ಎಂಬ ಭಾವನೆ ಮೂಡುವಂತ ವಾತಾವರಣ ಇರಬೇಕು. ಅದನ್ನು ಇಲ್ಲಿ ಮಾಡಬೇಕಾದ ಬಹುತೇಕ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರೇ ಬಟ್ಟುರವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.

ಇದನ್ನು ಪ್ರಶ್ನಿಸಿ ತಡೆಯಬೇಕಾದ ಗುರುತರ ಜವಾಬ್ದಾರಿಯಲ್ಲಿರುವ ವಿಶ್ವವಿದ್ಯಾಲಯದ ವಿವಿಧ ಡಿಪಾರ್ಟ್ಮೆಂಟ್‌ಗಳ ಮುಖ್ಯಸ್ಥರು ಬಾಯಿಮುಚ್ಚಿಕೊಂಡು ಇಲ್ಲೇನು ನಡೆಯುತ್ತಿಲ್ಲವೆಂಬಂತೆ  ತೆಪ್ಪಗೆ ಇದ್ದಾರೆ. ಇಲ್ಲದಿದ್ದರೆ ಕುಲಪತಿ ಈ ಬಗೆಯಲ್ಲಿ, ಇಷ್ಟು ಸಲಿಸಾಗಿ ಬಾಲ ಬಿಚ್ಚುತ್ತಿರಲಿಲ್ಲವೇನೋ?

ಇಲ್ಲೊಂದು ವಿಚಿತ್ರ ಸಂಗತಿ ಅಂದರೆ ಕಟ್ಟಾ ಆರ್‌ಎಸ್‌ಎಸ್‌ ಆಗಿರುವ ಇಲ್ಲಿನ ಪ್ರಾಧ್ಯಾಪಕರು ನೇರವಾಗಿ ಎಲ್ಲಿವೂ ಕಾಣಿಸುವುದಿಲ್ಲ. ಇಲ್ಲಿನ ಕುಲಪತಿ ಲಿಂಗಾಯತ, ಒಬಿಸಿ  ಸಮೂದಾಯದ ಪ್ರಾಧ್ಯಾಪಕರ ಭುಜದ ಮೇಲೆ ಬಂದೂಕು ಇಟ್ಟು ಪ್ರತಿರೋಧ ಒಡ್ಡುತ್ತಿರುವ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಕೇವಲ ಬಿಜೆಪಿ ಎಂಬ ಒಂದು ರಾಜಕೀಯ ಪಕ್ಷವಲ್ಲ, ಆರ್‌ಎಸ್‌ಎಸ್‌ ಎಂಬ ಅತ್ಯುಗ್ರ ಬಲಪಂಥೀಯ ಸಂಘಟನೆ. ಇದರ ಉದ್ದೇಶವೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು, ಅರ್ಥಾತ್‌ ಬ್ರಾಹ್ಮಣ್ಯದ ಅಧಿಪತ್ಯ ಪುನಃ ಸ್ಥಾಪಿಸುವುದು. ಅದರ ಮೋದಲ ಗುರಿ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ಕೈವಶಕ್ಕೆ ಪಡೆದು ಅಲ್ಲಿ ತಮಗೆ ಪೂರಕವಾದ ಶಿಕ್ಷಣ ರೂಪಿಸಿಕೊಳ್ಳುವುದು. ಈ ಮೂಲಕ ದೇಶದಲ್ಲಿ ಮತ್ತೇ ಚಾತುರ್ವರ್ಣ ವ್ಯವಸ್ಥೆ ತರುವುದು. ಇದನ್ನವರು ಅಧಿಕಾರದ ಚುಕ್ಕಾಣಿ ಹಿಡದ ಮೇಲೆ ಬಹಳ ಶಿಸ್ತುಬದ್ಧವಾಗಿ ದೇಶದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ  ಅದನ್ನು  ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಇಲ್ಲಿ ಕಟ್ಟಾ ಆರ್‌ಎಸ್‌ಎಸ್‌ ಆಗಿರುವ ಪ್ರೊ. ಬಟ್ಟು ಸತ್ಯನಾರಾಯಣ್‌ ಅವರನ್ನು ತಂದು ಕೂಡಿಸಿದ್ದು. ಆರ್‌ಎಸ್‌ಎಸ್‌ ಮನುಷ್ಯ ಆರ್‌ಎಸ್‌ಎಸ್‌ ಆಶಯಕ್ಕೆ ತಕ್ಕಂತೆ ಕೆಲಸ ಮಾಡದೆ, ಸಂವಿಧಾನಕ್ಕೆ ಅನೂಗುಣವಾಗಿ ಕೆಲಸ ಮಾಡುತ್ತಾರೆಯೇ?

ಇದನ್ನು ತಡೆಯಬೇಕಾದರೆ ಒಂದೋ ಕೇಂದ್ರದಲ್ಲಿ ಅಧಿಕಾರದಲ್ಲಿರುವರು ಬದಲಾಗಬೇಕು. ಇಲ್ಲವೇ ವಿಶ್ವವಿಧ್ಯಾಲಯದ ಒಳಗಿಂದಲೇ ಪ್ರಾಧ್ಯಾಪಕರಿಂದ ಇದ್ದಕ್ಕೆ ದೊಡ್ಡ ಪ್ರತಿರೋಧ ಬರಬೇಕು. ಆದರಿಲ್ಲಿ ಬಹುತೇಕರು ವೈಯಕ್ತಿಕ ಆಶೆ, ಆಮಿಷಕ್ಕೆ ಬಿದ್ದು ಒಂದೋ ಸಾಥ್‌ ನಿಡುತ್ತಿದ್ದಾರೆ, ಇಲ್ಲವೇ ಕ್ರೂರ್‌ ಮೌನಕ್ಕೆ ಜಾರಿದ್ದಾರೆ. ಇನ್ನೂ ಕೆಲವರು ಮೈಗೆ ಎಣ್ಣೆ ಹಚ್ಚಿಕೊಂಡು ಆ ಕಡೆಗೂ ಜೈ, ಈ ಕಡೆಗೂ ಜೈ ಎಂಬಂತ್ತಿದ್ದಾರೆ.

ಅಂಬೇಡ್ಕರ್‌ ಪ್ರಜ್ಞೆಯುಳ್ಳ ವಿಶ್ವವಿಧ್ಯಾಲಯದ ಕೆಲ ವಿದ್ಯಾರ್ಥಿಗಳು ʼಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆʼ ಕಟ್ಟಿಕೊಂಡು ಸಣ್ಣ ಪ್ರಮಾಣದ ಪ್ರತಿರೋಧ ಒಡ್ಡುತ್ತಿದ್ದಾರೆ. ಕಲಬುರಗಿಯ ಕೆಲ ಪ್ರಜ್ಞಾವಂತರು ಕೂಡಿಕೊಂಡು ʼಕೋಮುವಾದ ಅಳಸಿ ಕೇಂದ್ರಿಯ ವಿಶ್ವವಿಧ್ಯಾಲಯ ಉಳಿಸಿ ಆಂದೋಲನ ಸಮೀತಿʼ ಎಂಬ ವೇದಿಕೆ ಮೂಲಕ ಆಗಾಗ್ಗೆ ಹೋರಾಟಕ್ಕಿಳಿದು ಎಚ್ಚರಿಸುತ್ತಿದ್ದಾರೆ. ಇವರುಗಳ ಪ್ರಯತ್ನದ ಫಲದಿಂದ ಕ್ಯಾಂಪಸ್‌ನಲ್ಲಿ ಬೆಳ್ಳಂಬೆಳಿಗ್ಗೆ ಆರ್‌ಎಸ್‌ಎಸ್‌ ಕ್ಲಾಸ್‌ ನಡೆಯುತ್ತಿತ್ತು. ಅದೀಗ ನಿಂತಂತಿದೆ.

ಹೀಗಿದ್ದರೂ, ಒಂದುಕಡೆ ವಿಶ್ವವಿಧ್ಯಾಲಯದಲ್ಲಿ ನಿರಾಂತಕವಾಗಿ ರಾಮನವಮಿ, ಸರಸ್ವತಿ ಪೂಜೆ,  ಗಣಪತಿ ಉತ್ಸವ, ಗಾಯತ್ರಿ ಮಂತ್ರ ಪಠಣ…ಎಂಬಿತ್ಯಾದಿಗಳು ಜೋರಾಗಿಯೇ ನಡೆಯುತ್ತಿದೆ. ಇನ್ನೊಂದು ಕಡೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗೆ ಬಲ ತುಂಬುವ ಕೆಲಸ ನಡೆಯುತ್ತಿದೆ. ಮತ್ತೊಂದು ಕಡೆ ವಿದ್ಯಾರ್ಥಿಗಳು  ಕ್ಯಾಂಪಸ್‌ನಲ್ಲಿ ಒಂದು ಸಣ್ಣ ಅಂಬೇಡ್ಕರ್‌ ಮೂರ್ತಿ ಕೂಡಿಸಿದರೆ, ಕೂಡಿಸಿದ ವಿದ್ಯಾರ್ಥಿಗಳ ಮೇಲೆ ಪೋಲಿಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಬೆಳವಣಿಗೆಗಳೇ ಕುಲಪತಿಗಳ ಉದ್ದೇಶ ಏನೆಂಬುದು ಸ್ಪಷ್ಟಪಡಿಸುತ್ತಿವೆ.

ಇದು ಇಲ್ಲಿಗೆ ನಿಲ್ಲುವದಿಲ್ಲ. ಬಟ್ಟು ಅವರು ಬಂದ ಮೇಲೆ ಅರವತ್ತು ಜನ ಪ್ರಾದ್ಯಾಪಕರು, ಸಹಾಯಕ ಪ್ರಾದ್ಯಾಪಕರು, ಸಹ ಪ್ರಾದ್ಯಾಪಕರು ಹೊಸದಾಗಿ ನೇಮಕವಾಗಿದ್ದಾರೆ. ಇವರಲ್ಲಿ ಬಹುತೇಕರು ಅತ್ಯುಗ್ರ ಕೇಡರ್‌ ಬೇಸ್‌ ಬಲಪಂಥೀಯರೇ ಇದ್ದಾರೆಂಬುದು ಬೇರೆ ಹೇಳಬೇಕಾಗಿಲ್ಲ. ಇದು ಇಲ್ಲಿಗೆ ನಿಲ್ಲಿಸದಿದ್ದರೆ ವಿಶ್ವವಿಧ್ಯಾಲಯ ಇರುತ್ತದೆ ಆದರಿಲ್ಲಿ ಮುಂದೆ ಜಾತ್ಯತೀತ ಮನೋಭಾವದ ಒಬ್ಬನೇ ಒಬ್ಬ ಬಡ, ದಲಿತ, ಅಲ್ಪಸಂಖ್ಯಾತ,  ಅಸಹಾಯಕ ಸಮೂದಾಯದ ವಿದ್ಯಾರ್ಥಿಯಾಗಲಿ, ಪ್ರಾದ್ಯಾಪಕರಾಗಲಿ ದುರ್ಬೀನ ಹಾಕಿ ಕುಡುಕಿದರೂ ಸಿಗುವುದಿಲ್ಲವೇನೋ?

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!