ದ ಪಾಲಿಟಿಕ್

ಆರೆಸ್ಸೆಸ್ ಕಛೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ  ಕೇಸ್ ಹಾಕಿದ್ಯಾರು?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಆತನಕ ಸಂಘಪರಿವಾರದ ಕಛೇರಿಯ ಮೇಲೆ ರಾಷ್ಟ್ರಧ್ಜಜ ಹಾರಿಸಿಯೇ ಇರಲಿಲ್ಲ. ಅದು ಜನವರಿ 26, 2001 ರಂದು ಬಿಸಿರಕ್ತದ ತರುಣರಾದ ಬಾಬಾ ಮೆಂದೆ, ರಮೇಶ್ ಕಲಾಂದೆ ಮತ್ತು  ದಿಲೀಪ್ ಚಟವಾನಿ ಮೂರು ಜನರು ಸೇರಿಕೊಂಡು, ಸ್ವಾತಂತ್ರ್ಯ ಬಂದು 56 ವರ್ಷಗಳೇ ಗತಿಸಿದರು ನಾಗಪುರದ ಆರೆಸ್ಸೆಸ್ ಕೇಂದ್ರ ಕಛೇರಿಯ ಮೇಲೆ ತ್ರಿವರ್ಣ ಧ್ವಜ ( ರಾಷ್ಟ್ರಧ್ವಜ) ಹಾರದಿರುವುದು ಕಂಡು,  ಯುವಕರು ಸಂಕಲ್ಪ ಜತೆಗೆ ಮೊಂಡು ಧೈರ್ಯ ಮಾಡಿ ತ್ರಿವರ್ಣ ಧ್ವಜದೊಂದಿಗೆ ಆರೆಸ್ಸೆಸ್ ಕಛೇರಿಯ ಸನಿಹ ಬರುತ್ತಾರೆ. ಇದನ್ನು ಅನತಿ ದೂರದಿಂದಲೇ ಗಮನಿಸಿದ ಸಂಘಪರಿವಾರದ ಮುಖಂಡ ‘ಸುಶೀಲ್ ಕುಮಾರ್’ ಕಛೇರಿಯ ಮೇಲೆ ಧ್ವಜ ಹಾರಿಸದಂತೆ ತಾಕೀತು ಮಾಡಿದರು.

ಆದಾಗ್ಯೂ ಇದಕ್ಕೆ ಕ್ಯಾರೇ ಎನ್ನದೇ ಯುವಕರು  ” ಒಳಗಡೆ ಹೋಗಿ ಆರೆಸ್ಸೆಸ್ ಮುಖ್ಯಸ್ಥ ಹೆಗಡೆವಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬರುತ್ತೆವೆಂದು” ಹೇಳಿ ಒಳನುಗಿದ್ದ ಯುವಕರು ನೋಡುನೋಡುತ್ತಲೇ ಕಛೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿಯೇ ಬಿಟ್ಟಿದ್ದರು.

ತಕ್ಷಣ ಯುವಕರ ಮೇಲೆ ಸಂಘಪರಿವಾರವು ಕೇಸ್ ದಾಖಲಿಸಿ, ಅವರನ್ನು ಜೈಲಿಗಟ್ಟಿತ್ತು.  ಕೆಲ ದಿನಗಳ ನಂತರ ಯುವಕರು ಜಾಮೀನು ಪಡೆದು ಹೊರಗೆ ಬಂದರು. ಆಮೇಲೆ ಈ ಬಗ್ಗೆ ನ್ಯಾಯಲಯದಲ್ಲಿ ಸುದೀರ್ಘ ವಿಚಾರಣೆ ನಡೆದು ‘ಯುವಕರು ತ್ರಿವರ್ಣ ಧ್ವಜ ಹಾರಿಸಿದ್ದು ತಪ್ಪಿಲ್ಲ’ ಎಂದು ತೀರ್ಪು ನೀಡಿ,ನ್ಯಾಯಲಯವೂ ಅವರನ್ನು ದೋಷಮುಕ್ತಗೊಳಿಸಿತು.(‘ಇದು ಸುಳ್ಳು, ಅದು-ಇದು, ಹಂಗೆ, ಹಿಂಗೆ’ ಎನ್ನುವರು  ಕೇಸ್ ನಂಬರ್ 176/2001 ನಾಗಪುರ ನ್ಯಾಯಾಲಯದ ದಾಖಲೆ ನೋಡ್ಕೊಬಹುದು!)

‘ಸ್ವಾತಂತ್ರ್ಯ ಹೋರಾಟದಲ್ಲಿ RSS ಪಾಲ್ಗೊಳ್ಳಲಿಲ್ಲ’ ಎಂಬುದು ಎಷ್ಟು ನಿಜವೊ, ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯನಂತರವೂ ತ್ರಿವರ್ಣ ಧ್ವಜವನ್ನು ಅವರು ಒಪ್ಪಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ತ್ರಿವರ್ಣ ಧ್ವಜದೊಳಗಿನ ಅಶೋಕ ಚಕ್ರ, ನೀಲಿ-ಹಸಿರು ಬಣ್ಣಗಳ ಸಮ್ಮಿಲನ ಅವರಿಗೆ ಇಲ್ಲಿಯವರೆಗೂ ಒಪ್ಪಿತವಾಗಿಲ್ಲ ಎನ್ನುವುದಕ್ಕೆ ಪ್ರಶಕ್ತ ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಯೇ ಸಾಕ್ಷಿ ಎಂಬಂತಿದೆ !

ಪ್ರಬಲ ಖಂಡನೆ, ಟೀಕೆಗಳ ಕಾರಣ ಮನಸಿಲ್ಲದ ಮನಸ್ಸಿನಿಂದಲೇ 2014 ಅಗಸ್ಟ್ 15 ರಂದು ಆರೆಸ್ಸೆಸ್ ಕೇಂದ್ರ ಕಚೇರಿಯ ಮೇಲೆ ಮೊದಲ ಬಾರಿ ರಾಷ್ಟ್ರಧ್ವಜ ಹಾರಿಸಿದ್ದಾರೆ! ಇನ್ನೂ ಅವರ ಎದೆಯೊಳಗೆ ?

 ಸದನದಲ್ಲಿ ‘ಕೈ’ ಪಕ್ಷದ ಸದಸ್ಯರು, ಸರ್ಕಾರವು ‘ಸಚಿವ ಈಶ್ವರಪ್ಪನನ್ನ ಮಂತ್ರಿ ಪದವಿಯಿಂದ ವಜಾ ಮಾಡಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು’ ಅಹೋರಾತ್ರಿ ಧರಣಿಯನ್ನು ಸದನದಲ್ಲಿಂದು ಸಹ ಮುಂದುವರೆಸಿದ್ದಾರೆ.

 ಈ ಮಧ್ಯೆ ‘ಸಿ.ಟಿ. ರವಿ’ ಸದನದ ಹೊರಗಡೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ’ಕೇಸರಿ ಧ್ವಜ ನಿಷೇಧಿತ ಧ್ವಜಗಳ ಸಾಲಿಗೆ ಏನಾದರೂ ಸೇರಿದೆಯೇ? ಇಲ್ವಲ್ಲ.. ಮುಂದೆ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿಸಬೇಕೆಂಬುವುದು ಅದು ನಮ್ಮ ಕನಸು, ನಮ್ಮ ಆಶಯ,ಅದನ್ನೇ ಈಶ್ವರಪ್ಪ ಹೇಳಿದ್ದಾರೆ ಅಷ್ಟೇ. ಈಗ ತ್ರಿವರ್ಣ ಧ್ವಜ ಅದು ನಮ್ಮ ರಾಷ್ಟ್ರಧ್ವಜ ಅದಕ್ಕೆ ಹಿಂದೆಯೂ ಗೌರವ ಕೊಟ್ಟಿದ್ದೇವೆ,ಈಗಲೂ ಕೊಡುತ್ತಿದ್ದೇವೆ, ಮುಂದೆಯೂ ಕೊಡುತ್ತೇವೆ’ ಎಂದು ವೀರಾವೇಶದಿಂದ ಮಾತಾಡಿದ್ದಾರೆ.

ಸಿ.ಟಿ.ರವಿಯವರೇ ನಿಮಗೆ ರಾಷ್ಟ್ರ ಧ್ಜಜದ ಮೇಲೆ  ನೀಜಕ್ಕೂ ಗೌರವ ಇದ್ದದ್ದು ನೀಜವೇ ಆಗಿದರೆ, ಅಂದು ಆರೆಸ್ಸೆಸ್ ಕಛೇರಿ ಮೇಲೆ ತ್ರಿವರ್ಣ ಧ್ಜಜ ಹಾರಿಸಿದಕ್ಕೆ, ಆ ಯುವಕರ ಮೇಲೆ ಕೇಸ್ ದಾಖಲಿಸಿದ್ದು ಏಕೆಂದು ಉತ್ತರಿಸುವಿರಾ?

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!