ದ ಪಾಲಿಟಿಕ್

ಚಿತ್ತಾಪುರ ಮತಕ್ಷೇತ್ರ | ರೌಡಿ ಶೀಟರ್ ಪರ ಪ್ರಧಾನಿ ಮೋದಿ ಪ್ರಚಾರ.

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ವಿವಿಧ ಠಾಣೆಗಳಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮತ್ತು ಮೊನ್ನೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೂ ಗುರಿಯಾಗಿರುವ ರೌಡಿ ಶೀಟರ್ ಮಣಿಕಂಠ ರಾಠೋಡಗೆ ಬಿಜೆಪಿ ಚಿತ್ತಾಪುರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಜತೆಗೆ, ಅವರನ್ನು ಶತಾಯ ಗತಾಯ ಗೆಲ್ಲಿಸಲೇಬೇಕೆಂಬ ಹಠಕ್ಕೂ ಬಿದ್ದಂತಿದೆ. ಮೇ 6ಕ್ಕೆ ಸ್ವತಃ ದೇಶದ ಪ್ರಧಾನ ಮಂತ್ರಿ ಮೋದಿಯವರೇ ಮಣಿಕಂಠ ರಾಠೋಡ ಪರ ಮತಯಾಚನೆಗೆ ಚಿತ್ತಾಪುರ ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಇದು ಇಡೀ ದೇಶವೇ ತಲೆ ತಗ್ಗಿಸುವ ಸಂಗತಿಯಾಗಿದೆ.

ರಾಜ್ಯದ ಮತ್ತು ದೇಶದ ರಾಜಕೀಯ ಚರಿತ್ರೆಯಲ್ಲಿ ದೇಶದ ಪ್ರಧಾನಿಯೊಬ್ಬರು ರೌಡಿ ಶೀಟರ್ ಪರವಾಗಿ ಮತಯಾಚನೆಗೆ ಆಗಮಿಸುತ್ತಿರುವುದು ಇವರೇ ಮೊದಲಿಗರು. ಪ್ರಾಯಶಃ ಇವರೇ ಕೊನೆಯವರು ಆಗಬಹುದು. ಪ್ರಧಾನಿ ಸ್ಥಾನಕ್ಕೆ ತನ್ನದೇ ಆದ ಒಂದು ಘನತೆ, ಗೌರವವಿದೆ. ಹೀಗೆ ಪ್ರಧಾನಿಯೊಬ್ಬರು ರೌಡಿ ಶೀಟರ್ ಪರವಾಗಿ ಮತಯಾಚಿಸುವ ಮೂಲಕ ದೇಶಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆ? ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೆ ಮಣಿಕಂಠ ರಾಠೋಡಗೆ ಕಲಬುರ್ಗಿ ಜಿಲ್ಲೆಗೆ ಕಾಲಿಡದಂತೆ ಗಡಿಪಾರು ಮಾಡಿತ್ತು. ಈಗ ಬಿಜೆಪಿ ಪಕ್ಷವೇ ಟಿಕೆಟ್ ನೀಡಿದೆ. ಪಕ್ಷದ ಈ ನಡೆ ಪ್ರಶ್ನಾರ್ಹವಾಗಿದೆ. 

ಇದನ್ನೂ ಓದಿ : ರಾಹುಲ್‌ಗೆ ವರ ಆದೀತೇ ಮೋದಿ-ಶಾ ಸೇಡಿನ ಕ್ರಮ?

ಒಬ್ಬ ರೌಡಿ ಶೀಟರ್ ಪರವಾಗಿ ಕ್ಷೇತ್ರದಲ್ಲಿ ಹೇಗೆ ಮತಯಾಚಿಸಬೇಕೆಂಬ ಸಂದಿಗ್ಧ ಸ್ಥಿತಿಗೆ ಸಿಲುಕಿ, ಮುಜುಗರ ತಪ್ಪಿಸಿಕೊಳ್ಳಲು ಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರು ತಮ್ಮ ನೂರಾರು ಸಂಗಡಿಗರೊಂದಿಗೆ ಈಗಾಗಲೇ ಬಿಜೆಪಿಯಿಂದ ಕಾಲ್ಕಿತ್ತಿದ್ದಾರೆಂದು ಬಲ್ಲ ಮೂಲಗಳು ‘ದ ಪಾಲಿಟಿಕ್’ಗೆ ತಿಳಿಸಿವೆ. ಬಿಜೆಪಿ ಪಕ್ಷವೂ ಬೊಮ್ಮಾಯಿ ನೇತೃತ್ವದ ಸರ್ಕಾರಕದ ಕಟು ಟೀಕಾಕಾರರೆಂದೇ ಗುರುತಿಸಿಕೊಂಡಿರುವ ಶಾಸಕ ಪ್ರಿಯಾಂಕ್ ಖರ್ಗೆಗೆ ಸೋಲಿಸುವ ಉಮೇದಿನಲ್ಲಿದೆ. ಅದು ತಪ್ಪೇನು ಇಲ್ಲ. ರಾಜಕೀಯದಲ್ಲಿ ತನ್ನ ಪ್ರಬಲ ಎದುರಾಳಿಯನ್ನು ಸೋಲಿಸಲು ತಂತ್ರಗಾರಿಕೆ ಹೆಣೆಯುವುದು ಸಹಜ. ಆದರೆ, ಸೋಲಿಸುವ ಭರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಖರ್ಗೆ ಎದುರಿಗೆ ಕಣ್ಣಕ್ಕಿಳಿಸದೆ, ಒಬ್ಬ ರೌಡಿ ಶೀಟರ್ ಗೆ ಮಣೆ ಹಾಕಿದ್ದು ಪಕ್ಷದ ಜಾಣ ನಡೆಯಂತೂ ಖಂಡಿತ ಅಲ್ಲ. ಬಿಜೆಪಿಯಂತಹ ಬಲಾಢ್ಯ ಪಕ್ಷಕ್ಕೆ ಚಿತ್ತಾಪುರ ಕ್ಷೇತ್ರಕ್ಕೆ ಒಬ್ಬ ಸಮರ್ಥ ವ್ಯಕ್ತಿ ಸಿಗದಿದ್ದದು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ : ವರುಣಾದಲ್ಲಿ ಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಜೆಡಿಎಸ್, ಬಿಎಸ್‌ಪಿ ಸಾಥ್?

ಒಬ್ಬ ರೌಡಿ ಶೀಟರ್ ಗೆ ಟಿಕೆಟ್ ನೀಡುವುದೇ ಬಿಜೆಪಿಯ ದೇಶಭಕ್ತಿ, ರಾಷ್ಟ್ರೀಯತೆಯೇ ಎಂದು ಹೆಸರು ಹೇಳಲು ಇಚ್ಛಿಸದ ಕ್ಷೇತ್ರದ ಮತದಾರರೊಬ್ಬರು ‘ದ ಪಾಲಿಟಿಕ್’ಗೆ ಪ್ರಶ್ನಿಸಿದ್ದಾರೆ. ಒಬ್ಬ ರೌಡಿ ಶೀಟರ್ ಗೆದ್ದು ಶಾಸಕನಾದರೆ ಆ ಕ್ಷೇತ್ರದ ಕಾನೂನು ಮತ್ತು ಸುವ್ಯವಸ್ಥೆಯ ಗತಿಯೇನು? ಈ ಪ್ರಶ್ನೆಗೆ ಬಿಜೆಪಿ ಬಳಿಯಾದರು ಉತ್ತರವಿದೆಯೇ? ಆರೆಸ್ಸೆಸ್ಸಿನ ಗ್ರೀನ್ ಸಿಗ್ನಲ್ ಇಲ್ಲದೆ ಬಿಜೆಪಿ ಒಬ್ಬ ರೌಡಿ ಶೀಟರಿಗೆ ಟಿಕೆಟ್ ನೀಡಲು ಸಾಧ್ಯವೇ? ಇಲ್ಲ. ಆರೆಸ್ಸೆಸ್ ಒಬ್ಬ ರೌಡಿಗೆ ಮಣೆ ಹಾಕುವ ಮೂಲಕ ಏನೇನು ಸಾಧಿಸಲು ಹೊರಟಿದೆ? ಇದೇನಾ ಇವರು ಕಟ್ಟಲು ಹೊರಟಿರುವ ಹಿಂದೂ ರಾಷ್ಟ್ರ? 

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!