ಹನ್ನೆರಡನೆಯ ಶತಮಾನದಲ್ಲಿ ದುಡಿಯುವ ವರ್ಗದ ಮಧ್ಯೆ ಹುಟ್ಟಿದ ಕಾಯಕ ಜೀವಿಗಳ ಚಳವಳಿ ಮನುಷ್ಯನಿಂದ ಮನುಷ್ಯನ ಶೋಷಣೆ ಇಲ್ಲದಂತಹ ಸಮಾಜ ಕಟ್ಟಲು ಕನಸು ಕಟ್ಟಿಕೊಂಡು ದನಿ ಎತ್ತಿತ್ತು. ಚಳವಳಿಯನ್ನು ಎಲ್ಲೆಡೆ ಪಸರಿಸಲು ಮತ್ತು ಅದನ್ನು ಬಲಿಷ್ಠ ಗೊಳಿಸಲು ಅನುಭವ ಮಂಟಪ ನಿರ್ಮಿಸಿದರು. ಅದೀಗ ಜಗತ್ತಿನ ಮೊದಲನೇ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ್ದು. ಕಾಯಕ, ದಾಸೋಹ ಮತ್ತು ಅನುಭಾವ ಅದರ ಮಂತ್ರವಾಗಿತ್ತು. ಸಮಾನತೆ ಹಾಗೂ ಸ್ವಾಂತಂತ್ರ್ಯ ಅದರ ಉಸಿರಾಗಿತ್ತು.
ಇಂದಿನ ಬಸವಕಲ್ಯಾಣ ನೆಲದಲ್ಲಿ ಜಗತ್ತಿನ ಚರಿತ್ರೆಯಲ್ಲಿ ಪ್ರಪ್ರಥಮವಾಗಿ ದುಡಿಯುವ ವರ್ಗದ ಜನರನ್ನು ಸಂಘಟಿಸಿ, ಚಳವಳಿ ರೂಪಿಸಿದರು. ಅದರ ನಾಯಕತ್ವ ವಹಿಸಿದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ‘ಸಾಂಸ್ಕೃತಿಕ ನಾಯಕ’ನೆಂದು ಘೋಷಣೆ ಮಾಡಿದೆ. ಆ ನಿಮಿತ್ತವಾಗಿ ಲಿಂಗಾಯತ ಸಮುದಾಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾರ್ಚ್ ಆರರಂದು ಬೆಳಗಾವಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ. ಅಂದು ಸಾಯಂಕಾಲ 4 ಗಂಟೆಗೆ ಸಮಾವೇಶ ಜರುಗಲಿದೆ. ಕಿತ್ತೂರು ಕರ್ನಾಟಕದ ಲಿಂಗಾಯತ ಸಮುದಾಯದ ಎಲ್ಲಾ ಸಂಘಟನೆಗಳು ಸೇರಿಕೊಂಡು ಈ ಸಮಾವೇಶ ಮಾಡುತ್ತಿದ್ದಾರೆ.
——————————–
ನಿನ್ನೇ ತಡರಾತ್ರಿ ಸಮಾವೇಶದ ದಿನಾಂಕ ಫಿಕ್ಸ್ ಆಗಿದೆ. ಮಾರ್ಚ್ ಆರರಂದು ಕಿತ್ತೂರು ಕರ್ನಾಟಕ ಭಾಗದ ಎಲ್ಲಾ ಲಿಂಗಾಯತ ಸಂಘಟನೆಗಳು ಸೇರಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದೆವೆ. ಈ ಸಮಾವೇಶದಲ್ಲಿ ಕನಿಷ್ಠ ಐವತ್ತು ಸಾವಿರ ಜನರನ್ನು ಪಾಲ್ಗೊಳ್ಳುತ್ತಾರೆ. ಬಹಳ ಉತ್ಸುಕತೆಯಿಂದ ಎಲ್ಲರೂ ಸೇರಿಕೊಂಡು ಈ ಸಮಾರಂಭ ಯಶಸ್ವಿಯಾಗಿ ಜತೆಗೆ ಅಷ್ಟೇ ಅರ್ಥಪೂರ್ಣವಾಗಿ ಮಾಡುತ್ತೇವೆ.
-ಶಿವಾನಂದ ಜಾಮದಾರ್, ಜೆಎಲ್ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.