ದ ಪಾಲಿಟಿಕ್

ಬಸವರಾಜ ಪಾಟೀಲ್ ಸೇಡಂ ಅವರಿಗೊಂದು  ಬಹಿರಂಗ ಪತ್ರ

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಮಾನ್ಯರೇ, 

ಈ ಪತ್ರದ ಮೂಲಕ ತಮ್ಮ ಹಾಗು ನಾಡಿಗರ ಗಮನಕ್ಕೆ ತರ ಬಯಸುತ್ತಿರುವ ಸಂಗತಿಗಳು ‘ಅದರಕ್ಕೆ ಕಹಿ, ಉದರಕ್ಕೆ ಸಿಹಿ’ ಆಗಬಹುದು. ಆದಾಗ್ಯೂ ತುಸು ಕಹಿ ಎನಿಸಿದರೂ ನಿಮ್ಮ, ನಮ್ಮ ಹಾಗೂ ನಾಡಿಗರ ಸಾಂಸ್ಕೃತಿಕ ಆರೋಗ್ಯದ ಹಿತದೃಷ್ಟಿಯಿಂದ ಹಿತಕಾರಿ ಆಗುವುವೆಂಬ ವಿಶ್ವಾಸದಿಂದಲೇ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.

ತಾವು ಕಳೆದ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದಿಂದ ತಮ್ಮ ದೇಹಶಕ್ತಿ-ಬುದ್ಧಿಶಕ್ತಿ ಎರಡನ್ನೂ ಆರೆಸ್ಸೆಸ್ ಹಿತಕ್ಕಾಗಿ ತೊಡಗಿಸುತ್ತಾ ಬರುತ್ತಿರುವುದು ಗುಟ್ಟೇನಲ್ಲ. ನಿಮ್ಮಂತಹವರನ್ನ ವೈದಿಕ ಅರ್ಥಾತ್ ಬ್ರಾಹ್ಮಣ ಸಂಸ್ಕೃತಿಯ ಪ್ರತಿಪಾದನೆ ಮತ್ತು ಪ್ರಸಾರಕ್ಕೆ ಬಳಸುತ್ತಲೇ ಬರಲಾಗುತ್ತಿರುವುದು ಹೊಸದೇನಲ್ಲ.

ತಮ್ಮಂತಹವರು  ಕಮ್ಯುನಲ್  ಶಕ್ತಿಗಳ ಬಲೆಯಲ್ಲಿ ಬಿದ್ದಿರುವುದು ನಾಡಿನ ದುರಂತವಾಗಿದೆ. ತಾವೂ ಬಹುತೇಕ ಯುವಕರಂತೆ ತಮ್ಮ ಹದಿವಯಸ್ಸಿನ ಭರದಲ್ಲಿ ಆರೆಸ್ಸೆಸ್ ನ ಜೀವವಿರೋಧಿ  ತತ್ವಕ್ಕೆ ಬಲಿ ಬಿದ್ದುದ್ದರಲ್ಲಿ ಆಶ್ಚರ್ಯವೆನಿಲ್ಲ. ಆದರೆ, ಈ ಇಳಿವಯಸ್ಸಿನಲ್ಲೂ  ಕೂಡಾ ಅದರ ನೈಜ್ ಉದ್ದೇಶಗಳನ್ನು ಅರಿಯದೇ ನಾಡಿಗರನ್ನು ಅದರಲ್ಲೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಜನತೆಯನ್ನು ವೈದಿಕ ಮಾರ್ಗಕ್ಕೆ ಎಳೆಯಲು  ನಿರತರಾಗಿರುವುದು  ಕಳವಳಕಾರಿ ಸಂಗತಿಯಾಗಿದೆ!

ತಾವು ಸಜ್ಜನರು ಮತ್ತು ಪ್ರಾಮಾಣಿಕರು ಎನ್ನುವುದಕ್ಕೆ ಎರಡು ಮಾತಿಲ್ಲ. ಆದರೆ ಆರ್ಥಿಕ ಭ್ರಷ್ಟಾಚಾರಕ್ಕಿಂತಲ್ಲೂ ಸೈದ್ಧಾಂತಿಕ ಭ್ರಷ್ಟತೆ ಅತ್ಯಂತ  ಅಪಾಯಕಾರಿಯಾದದ್ದು ಪಾಟೀಲಜೀ!

This image has an empty alt attribute; its file name is Politic-Bath-finel.jpg

ಜಗತ್ತಿನ ಮೊಟ್ಟ ಮೊದಲನೆಯ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಸವಾದಿಗಳ ಕಲ್ಯಾಣದ ‘ಅನುಭವ ಮಂಟಪ’ವನ್ನು ಭವ್ಯವಾಗಿ ನಿರ್ಮಿಸುವುದು ಯಾವುದೇ ಚುನಾಯಿತ ಸರ್ಕಾರದ ಆದ್ಯ ಕರ್ತವ್ಯವಾಗಿದೆ.ಈ ದಿಶೆಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿರುವುದು ಸಮಂಜಸವಾಗಿದೆ.

ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ರೇಖದೇಖಿ ನೋಡಿಕೊಳ್ಳುವ ನೆವದಲ್ಲಿ ಅನುಭವ ಮಂಟಪಕ್ಕೆ ಮತ್ತು ಇಡೀ ಬಸವಕಲ್ಯಾಣಕ್ಕೆ  ವೈದಿಕ ಸ್ಪರ್ಶ ನೀಡುವ ಮೂಲಕ  ಇಡೀ ಲಿಂಗಾಯತ ತತ್ವವನ್ನು ಹೂತು ಹಾಕುವ ದುಸ್ಸಾಹಸಕ್ಕೆ ತಾವು ಕೈಹಾಕಿದ್ದು ಬಸವ ಚರಿತ್ರೆಗೆ ಬಗೆಯುತ್ತಿರುವ ದ್ರೋಹವಲ್ಲವೇ?

ಇತ್ತಿಚೆಗೆ ತಾವು ನೂತನ ಅನುಭವ ಮಂಟಪಕ್ಕೆ ಸಂಬಂದಿಸಿದ ಕರಡ್ಯಾಳ ಗುರುಕುಲದ ಒಂದು ಸಭೆಯಲ್ಲಿ ಮಾತನಾಡುತ್ತಾ “ವೈಚಾರಿಕ ಲೋಕ ನನ್ನನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದೆ, ನನ್ನನ್ನು ನಂಬಿ ನಾನು ಲಿಂಗಾಯತ ತತ್ವಕ್ಕೆ ಚ್ಯುತಿ ಬರದ ರೀತಿಯಲ್ಲಿ ಆದಷ್ಟೂ ಬೇಗನೇ ಕಟ್ಟಡವನ್ನು ನಿರ್ಮಿಸುತ್ತೇನೆ” ಎಂದದ್ದಿರಿ, ಜತೆಗೆ ಮೊನ್ನೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ಜೊತೆಗೆ ಫೋನ್ ಮೂಲಕ ಮಾತನಾಡುವಾಗಲೂ ಸಹ ಇದೇ ರೀತಿಯ ಮಾತುಗಳನ್ನು ಪುನರುಚ್ಚರಿಸಿದ್ದಿರಿ. ಆದರೆ, ನಿಮ್ಮ ಮಾತಿಗೂ ಮತ್ತು ಕೃತಿಗೂ  ಒಂದಕ್ಕೊಂದು ತಾಳಮೇಳವೇ ಇಲ್ಲ.

ಇದನ್ನೂ ಓದಿ : ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಾಂಗವನ್ನು ವಿಮರ್ಶೆಗೆ ಒಳಪಡಿಸುವ ಹಕ್ಕಿದೆ : ನ್ಯಾ. ನಾಗಮೋಹನ ದಾಸ್

ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಬಿಕೆಡಿಬಿ ಇದ್ದಾಗಲೂ ತಾವು ‘ಬಸವಕಲ್ಯಾಣ ಕ್ಷೇತ್ರ ಸಮಿತಿ’ ಹುಟ್ಟು ಹಾಕಿದ್ದೇಕೆ?  ಹಾಗಾದರೆ ಬಿಕೆಡಿಬಿ ನಿಷ್ಕ್ರಿಯಗೊಂಡಿದೆಯೇ? ಹುಟ್ಟು ಹಾಕಿದ್ದರೂ ‘ಬಕ್ಷೇಸ’ಯಲ್ಲಿರುವ ಸದಸ್ಯರ ಹೆಸರಗಳನ್ನೇಕೆ ಬಹಿರಂಗಪಡಿಸುತ್ತಿಲ್ಲ? ( ಇದರಲ್ಲಿರುವ ಬಹುತೇಕ ಮಠಾಧೀಶರು ಮತ್ತು ಇತರರು ಆರೆಸ್ಸೆಸ್ ಹಿನ್ನಲೆಯವರೇ ಇದ್ದಾರೆಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ) ಅನುಭವ ಮಟಂಪಕ್ಕೆ ಸಂಬಂಧಿಸಿದ ಸಭೆಯಲ್ಲಿ ಲಿಂಗಾಯತ ವಿದ್ವಾಂಸರು ಮತ್ತು ಮಠಾಧೀಶರು ಏಕೆ ಕಾಣುತ್ತಿಲ್ಲ?  ಕಟ್ಟಡಕ್ಕೆ ಸಂಬಂಧಿಸಿದ ಸಭೆಗಳ ಆಹ್ವಾನ ಪತ್ರಿಕೆಗಳಲ್ಲಿ ನಂದಿ ಚಿತ್ರ ಹಾಕುವುದು, ವಿಕಾಸ ಅಕಾಡೆಮಿಯ ಹೆಸರು ಸೇರಿಸುವುದು, ಅನುಭವ ಮಂಟಪಕ್ಕೆ ರಾಮಮಂದಿರದ ಸ್ಪರ್ಶ ನೀಡುತ್ತೇನೆ, ಕಲ್ಯಾಣವನ್ನು ಕಾಶಿ-ಶ್ರೀಶೈಲ ಮಾಡುತ್ತೇನೆ ಎನ್ನುವ ನಿಮ್ಮ ಮಾತಿನ ಹಿಂದಿರುವ ಉದ್ದೇಶವಾದರೂ ಏನು? 

ಮಾತು ಮಾತಿಗೂ ಕಲ್ಯಾಣವನ್ನು ಒಂದು ಸಾಂಸ್ಕೃತಿಕ ನಗರ ಮಾಡುವುದಾಗಿ ಹೇಳುತ್ತಿರುವಿರಲ್ಲ, ಅದು ಯಾವ ಸಂಸ್ಕೃತಿಯ ನಗರ? ಎಂತಹ ಸಂಸ್ಕೃತಿಯ ನಗರ?  ಶರಣ ಸಂಸ್ಕೃತಿಯ ನಗರ ಮಾಡುವುದಾದರೇ ಅಲ್ಲಿ ನಿಮಗೇನು ಕೆಲಸ? ಮೇಲಾಗಿ ಕಲ್ಯಾಣ ಈಗಾಗಲೇ ಶರಣರ ಸಾಂಸ್ಕೃತಿಕ ನಗರವೆಂದೇ ಅಂತರಾಷ್ಟ್ರೀಯ ಖ್ಯಾತ  ಪಡದಿದೆ!

ಈಗ ನೀವು ಶರಣ ಸಂಸ್ಕೃತಿ ಅಳಸಿಹಾಕಿ,ವೈದಿಕ ಸಂಸ್ಕೃತಿಯ ನಗರವನ್ನಾಗಿ ಮಾರ್ಪಡಿಸುವ ಹಿಕಮತ್ ನಲ್ಲಿ ತೊಡಗಿದ್ದಿರಿ ಎಂಬುವುದು ಅನುಭವ ಮಂಪಟಕ್ಕೆ ಸಂಬಂಧಸಿದಂತೆ ತಮ್ಮ ಎಲ್ಲಾ ಮಾತು-ಕೃತಿಗಳು ಸಾರಿ ಸಾರಿ ಹೇಳುತ್ತಿವೆ.

ಶರಣರು ನಡೆದಾಡಿದ, ಸೂಫಿಸಂತರು ನೆಲೆಯೂರಿದ, ನಾಡಾಡಿ ದಾಸರು ಹಾಡುತ್ತಾ ಅಲೆದಾಡಿದ ಈ ನಾಡನ್ನು ‘ಹನುಮನು ಉದಯಿಸಿದ ನಾಡಿದು’ ಎಂದು ಸದಾ ಸಾರುತ್ತಾ ಅಡ್ಡಾಡುವ ನಿಮಗೆ ಕಲ್ಯಾಣದಲ್ಲಿ ಕಾಲಿಡುವ ನೈತಿಕ ಹಕ್ಕು ಇದೆಯೇ?

ಇದನ್ನೂ ಓದಿ : ಸುಮೋಟೋ ಕೇಸ್ ಬೇಡದವರ ಮೇಲೆ ಬಳಸಲು ಇರೋ ಅಸ್ತ್ರವೆ?!

ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದನೆಯದು,  ನಿಮ್ಮ  ಪೂರ್ವಾಶ್ರಮದ ಎಲ್ಲಾ ತತ್ವಾದರ್ಶ, ಧ್ಯೇಯಗಳು ಮತ್ತು ಸಂಬಂಧಗಳನ್ನು ತುಸು ಕಾಲ ದೂರವಿಟ್ಟು ಬಸವ ಆಶಯಕ್ಕೆ, ಲಿಂಗಾಯತ ತತ್ವಕ್ಕೆ ಚ್ಯುತಿ ತರದ ರೀತಿಯಲ್ಲಿ ನೂತನ  ಅನುಭವ ಮಂಟಪ ಕಟ್ಟಣದ ರೇಖದೇಖಿ  ನೋಡಿಕೊಳ್ಳುವುದು; ‘ಬಸವಕಲ್ಯಾಣ ಕ್ಷೇತ್ರ ಸಮಿತಿ’ ಎನ್ನುವ ವೈದಿಕತೆಗೆ ಪ್ರತಿಕವಾಗಿರುವ ಹೆಸರನ್ನು ಬದಲಾಯಿಸಿ, ಆರೆಸ್ಸೆಸ್ ಹಿನ್ನೆಲೆಯಲ್ಲಿರುವ ಜನರಿಂದ ತುಂಬಿರುವ ಈ  ಸಮಿತಿಯನ್ನು ವಿಸರ್ಜಿಸಿ ನಾಡಿನ ಲಿಂಗಾಯತ ವಿದ್ವಾಂಸರು ಮತ್ತು  ಮಠಾಧೀಶರು ಒಳಗೊಂಡಿರುವ ನೂತನ ಸಮಿತಿ ರಚಿಸುವುದು.

ಎರಡನೆಯದು, ಇದು ನಿಮಗೆ ಕಷ್ಟ ಎನಿಸಿದರೆ ತಾವು ತಮ್ಮ ಜವಾಬ್ದಾರಿಯಿಂದ ಗೌರವಿತವಾಗಿ ಹಿಂದೆ ಸರಿಯುವದು.

ಯಾವುದೇ ಕಾರಣಕ್ಕೂ,ಯಾವ ಬೆಲೆ ತೆತ್ತಾದರೂ ಸರಿ, ತತ್ವ ನಿಷ್ಠ  ಲಿಂಗಾಯತ ಮಠಾಧೀಶರು, ಬಸವ ಮಾರ್ಗಿಗಳು ಅನುಭವ ಮಂಟಪಕ್ಕೆ ಮತ್ತು ಇಡೀ ಬಸವ ಕಲ್ಯಾಣಕ್ಕೆ ವೈದಿಕ ಸ್ಪರ್ಶ ನೀಡಲು ಬೀಡುವುದಿಲ್ಲ.

ಕೊನೆಮಾತು: ಪಾಟೀಲಜೀ, ಸರ್ಕಾರ ನಿಮ್ಮನ್ನು ನೇಮಿಸಿದ್ದು ಅಥವಾ ಮುಖ್ಯಮಂತ್ರಿಗಳು ಮೌಖಿಕವಾಗಿ ಹೇಳಿದ್ದು ಅನುಭವ ಮಂಟಪ ಕಟ್ಟಡದ ರೇಖದೇಖಿ ನೋಡಕೊಳ್ಳಲೋ? ಅನುಭವ ಮಂಟಪಕ್ಕೆ ವೈದಿಕ ಸ್ಪರ್ಶ ನೀಡಲೋ?  ಇಡೀ ಬಸವಕಲ್ಯಾಣವನ್ನು ಸಾಂಸ್ಕೃತಿಕವಾಗಿ ವಿಕೃತಗೊಳಿಸಲೋ? 

ಪ್ರೀತಿ ಇರಲಿ!

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!