ಸಂಸ್ಕ್ರತಿ ಎನ್ನುವುದು ಒಂದು ಬಹುವ್ಯಾಪಕ ಸಂಕೀರ್ಣ ಪರಿಕಲ್ಪನೆ. ಅದರಲ್ಲಿ ಧಮ೯, ಭಾಷೆ, ಶಿಕ್ಷಣ, ಸಂಪ್ರದಾಯ, ನ್ಯಾಯ, ನೀತಿ, ಸಾಹಿತ್ಯ,ಸಂಗೀತ, ನಾಟಕ,ಇತ್ಯಾದಿ ಪರಿಕರಗಳು ಅಡಕವಾಗಿರುತ್ತವೆ. “ನಾವು ಏನಾಗಿದ್ದೇವೆಯೋ, ಹೇಗಿದ್ದೇವೆಯೋ ಅದು ಸಂಸ್ಕೃತಿ, ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ” ಎನ್ನುವುದು ಸಂಸ್ಕೃತಿಯ ಸಮಾಜಶಾಸ್ತ್ರಿಯ ಪರಿಭಾಷೆ. ಇವೆಲ್ಲವೂ ಬಸವಣ್ಣನಲ್ಲಿ ಅಥ೯ವತ್ತಾಗಿ ಮೇಳೈಸಿವೆ ಎಂದರೆ ಅತಿಶಯೋಕ್ತಿಯಲ್ಲ. ಸಾವಿರಾರು ವಷ೯ಗಳಿಂದ ಜಡ್ಡು ಹಿಡಿದ ಗೊಡ್ಡು ಧಾರ್ಮಿಕ ಆಥಿ೯ಕ ಸಾಮಾಜಿಕ ಆಚರಣೆಗಳಿಗೆ ತಿಲಾಂಜಲಿ ನೀಡಿ ಹೊಸ ಧಾರ್ಮಿಕ ಆಥಿ೯ಕ ರಾಜಕೀಯ ಸಂಸ್ಕ್ರತಿಯನ್ನು ಕಟ್ಟಿದವ ಬಸವಣ್ಣ.
ಕಾಲ೯ಮಾಕ್ಸ೯ನಿಗಿಂತ 800 ವಷ೯ಗಳ ಹಿಂದೆ ಆಥಿ೯ಕ ಮತ್ತು ಸಾಮಾಜಿಕ ಸಮಾನತೆಯುಳ್ಳ ಸಮಾಜದ ಕನಸು ಕಂಡಿದ್ದ ಬಸವಣ್ಣ ಅದನ್ನು ನಿಮಿ೯ಸಲು ಪ್ರಯತ್ನಿಸಿದ. ಕಾಯಕವೇ ಕೈಲಾಸ ಎಂಬ ಮಹಾಮಂತ್ರದ ಮೂಲಕ ಆಥಿ೯ಕ ಕ್ಷೇತ್ರದಲ್ಲಿ ಸಮಾನತೆ ಸಾರುತ್ತ ಶ್ರಮಜೀವಿಗಳಿಗೆ ಮಹತ್ವ ನೀಡಿದ ಭಾರತದ ಮೊದಲ ದಾಶ೯ನಿಕ ಬಸವಣ್ಣ. ಆ ದ್ರಷ್ಟಿಯಿಂದ ಇಂದಿನ ಎಡಪಂಥೀಯರಿಗೆ ಬಸವಣ್ಣ ಬಹಳ ಇಷ್ಟ ಏಕೆಂದರೆ ಅವನ ತತ್ವಗಳು ಮಾಕ್ಸ೯ನ ಏಲಿಯನೇಶನ್ನಿಗೆ ಹತ್ತಿರವಾಗಿವೆ.
ಆದರೆ ಬಸವಣ್ಣನನ್ನು ಹತ್ತೊಂಬತ್ತನೆಯ ಶತಮಾನದಿಂದ ಬೆಳೆದುಬಂದಿರುವ ಎಡ, ಬಲ, ಕೇಂದ್ರೀಯ ಎಂಬ ಸೀಮಿತ ಮಿತಿಯೊಳಗೆ ಬಂಧಿಸಲಾಗದು. ಅವನು ಅಪಾರ ಭಕ್ತಿ ಭಂಡಾರಿ, ಏಕದೇವೋಪಾಸಕ ಎಂದರೆ ಎಡಪಂಥಿಯರಿಗೆ ಅದು ಅಪಥ್ಯವಾಗುತ್ತದೆ. ಏಕೆಂದರೆ ಅದು ಮಾಕ್ಸ೯ನ ವಿರುದ್ಧದ ಹೆಗೆಲ್ಲನ ಏಲಿಯನೇಶನ್ನಿಗೆ ಸಮೀಪವಾಗಿದೆ. ಆದರೆ ಅದು ಸತ್ಯ! ಬಸವಣ್ಣ ಓರ್ವ ಪರಿಪೂರ್ಣ ಚಿಂತಕ, ಅವನಲ್ಲಿ ಎಡ ಬಲ ಕೇಂದ್ರಗಳೆಲ್ಲವೂ ಮಿಶ್ರಿತ. ದಾಸೋಹ ಎಂಬುದು ಆದೇ ಅಥ೯ದ ವಿಶಾಲ ಪರಿಕಲ್ಪನೆ.
ಇದನ್ನೂ ಓದಿ : ಬೀದರ ಲೋಕಸಭಾ ಕ್ಷೇತ್ರ : ಕೂತುಹಲ ಮೂಡಿಸಿದ ಟಿಕೆಟ್ ಲಾಬಿ
ಪ್ರಾಮಾಣಿಕ ದುಡಿಮೆಯಿಂದ ಬಂದ ಆದಾಯದಲ್ಲಿ ತನ್ನ ಅವಶ್ಯಕತೆ ಪೂರೈಸಿ ಉಳಿದದ್ದು ಸಮಾಜದ ಆಸ್ತಿ. ಅದು ಸಮಾಜಕ್ಕೆ ಸಂದಾಯವಾಗಬೇಕಾದ ಸಾಮಗ್ರಿ. ಅದರ ಆಧುಣಿಕ ಅಸ್ತ್ರವೆ ತೆರಿಗೆ ಪದ್ಧತಿ. ಧಾರ್ಮಿಕವಾಗಿ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಏಕದೇವೋಪಾಸನೆಯುಳ್ಳ ಹೊಸ ಧಮ೯ವನ್ನು ಸ್ಥಾಪಿಸಿದವನು ಬಸವಣ್ಢ. ಅದರ ನಿಜವಾದ ಅನುಯಾಯಿಗಳು ಇಂದಿನ ಲಿಂಗಾಯತರಲ್ಲ, ಆದರೆ ಕಳವಗ೯ದ ಕಾಯಕಜೀವಿಗಳು. ಇಂದಿನ ಉನ್ನತ ವರ್ಗದ ಬಹುತೇಕ ಲಿಂಗಾಯತರು ಮತ್ತು ಅನೇಕ ಲಿಂಗಾಯತ ಮಠಗಳು ಮಹಾಜಾತಿವಾದಿಗಳಾಗಿ, ವರ್ಗವಾದಿಗಳಾಗಿ ಹೆಜ್ಜೆಹೆಜ್ಜೆಗೂ ಬಸವಣ್ಣನಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದರೆ ಅದು ವಾಸ್ತವ ಸತ್ಯ.
ಭಾಷೆಯ ದ್ರಷ್ಟಿಯಿಂದ ಜೈನ ಕವಿಗಳ ನಂತರ ಕನ್ನಡವನ್ನು ಅಪಾರವಾಗಿ ಬೆಳೆಸಿದವರು ಹನ್ನೆರಡನೆಯ ಶತಮಾನದ ಶರಣ ಜೀವಿಗಳು, ಅವರ ನಾಯಕನೇ ಬಸವಣ್ಢ! ಇಂದಿನ ಅಪಾರವಾದ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಬ್ರಹತ್ ಭಂಡಾರವಾಗಿ ಬೆಳೆಯುತ್ತಿದೆ.
ಅಸ್ಪ್ರಶ್ಯತೆಯ ಸಾಮಾಜಿಕ ಅನಿಷ್ಟ ಸಂಪ್ರದಾಯಕ್ಕೆ ಮೊಟ್ಟಮೊದಲ ಕೊಡಲಿಯ ಪೆಟ್ಟುಕೊಟ್ಟವರು ಬಸವಣ್ಢ. ಅದಕ್ಕೆ ಆಧಾರವಾಗಿದ್ದ ವೈದಿಕ ಧಮ೯ದ ವಿರುದ್ಧ ಶೆಡ್ಡುಹೊಡಿದವರು ಬಸವಣ್ಢ. ಆದ್ದರಿಂದಲೇ ಎಲ್ಲೆಲ್ಲೂ ಬಸವಣ್ಢನ ತತ್ವಗಳನ್ನು ಇಂದಿಗೂ ವಿರೋಧಿಸುತ್ತಿರುವವರು ಅದೇ ಗುಂಪಿನ ಜನರು. ಅದು ಒಂದು ಮಹತ್ವದ ಸಾಮಾಜಿಕ ಧಾರ್ಮಿಕ ಬದಲಾವಣೆಗೆ ನಾಂದಿ ಹಾಡಿತು.
ಸವ೯ಕ್ಷೇತ್ರಗಳಲ್ಲಿ ಸಮಾನತೆಯ ಮೊದಲ ಹರಿಕಾರ ಬಸವಣ್ಣ. ಅದು ಪೊಳ್ಳು ಘೋಷಣೆಯಾಗಿರಲಿಲ್ಲ, ಸಾಮಾಜಿಕ ಕ್ರಾಂತಿಯ ಕಹಳೆಯಾಗಿತ್ತು. ಇಂದಿನ ಸ್ತ್ರೀ ಸ್ವಾತಂತ್ರ್ಯದ ಆಂದೋಲನಕ್ಕೆ ಅಂದಿನ ಸೀಮಿತ ಪರಿಸರದಲ್ಲಿ ಅಡಿಪಾಯ ಹಾಡಿದವರು ಶರಣರು, ವಿಶೇಷವಾಗಿ 34 ಜನ ಮಹಿಳಾ ಶರಣೆಯರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಷ್ಮಮ್ಮ, ರೇಮಮ್ಮ, ನೀಲಾಂಬಿಕೆ, ರೇಕಮ್ಮ, ಬೋಂತಾದೇವಿ ಮುಂತಾದ ಶರಣೆಯರು.
ರಾಜಕೀಯ ಕ್ಷೇತ್ರದಲ್ಲಿ ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲಿ 900 ವಷ೯ದ ಹಿಂದೆ ಅನುಭವ ಮಂಟಪವನ್ನು ಕಟ್ಟಿ ಬೆಳಸಿದವರು ಬಸವಣ್ಣ.ಸಂಗೀತ ನ್ರತ್ಯ ಸಿನೆಮಾ ನಾಟಕಗಳ ಕ್ಷೇತ್ರಗಳಲ್ಲಿ ಶರಣರ ವಚನಗಳ ಅಭಿವ್ಯಕ್ತಿಗೆ ಸಾಕ್ಷಿಯಾಗಿ ಅನೇಕ ಸಿನೆಮಾ, ನಾಟಕ, ನ್ರತ್ಯ, ವಚನ ಸಂಗೀತ ಕನಾ೯ಟಕದಲ್ಲಿ ಬೆಳೆದು ಬಂದಿವೆ.
ಹೀಗೆ ಯಾವುದೇ ರೀತಿಯಿಂದ ನೋಡಿದರೂ ಬಸವಣ್ಣನವರಿಗೆ ಸರಿಸಮನಾಗಿ ಆ ಎತ್ತರಕ್ಕೆ ನಿಲ್ಲಬಲ್ಲ ಇನ್ನೋವ೯ ವ್ಯಕ್ತಿ ನಮಗೆ ದೊರೆಯುವುದು ವಿರಳ.
ಬಸವಣ್ಣನ ತತ್ವಗಳನ್ನು ಚೆನ್ನಾಗಿ ತಿಳಿದು ಆಚರಿಸುತ್ತಿರುವ ಇಂದಿನ ಕನಾ೯ಟಕದ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರು ಮಾತ್ರ ಬಸವಣ್ಣನ್ನು ಕನಾ೯ಟಕದ ಸಾಂಸ್ಕ್ರತಿಕ ನಾಯಕನನ್ನಾಗಿ ಘೋಷಿಸ ಬಲ್ಲವರು. ಅದು ಇಲ್ಲಿಯ ವರೆಗೆ ಕನಾ೯ಟಕವನ್ನಾಳಿದ ಯಾವುದೇ ಲಿಂಗಾಯತ ಮುಖ್ಯಮಂತ್ರಿಗೆ ಸಾಧ್ಯವಾಗದಿದ್ದುದು ಒಂದು ದುರಂತ!