ದ ಪಾಲಿಟಿಕ್

ಬಾಂಬ್‌ ಸ್ಷೋಟದಲ್ಲೂ ರಾಜಕೀಯ ಬೆಳೆ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಟೈಮರ್‌ ಚಾಲಿತ ಕಚ್ಚಾ ಬಾಂಬ್‌ ಸ್ಪೋಟ್‌ವಾಗಿದೆ, ರಾಜ್ಯದಲ್ಲಿ ಬಾಂಬ್‌ ಸ್ಷೋಟ್‌ ಘಟನೆ ನಡೆದದ್ದು ಇದೇ ಮೊದಲೇನಲ್ಲ. ತೀರಾ ಇತ್ತೀಚಿಗೆ ಮಂಗಳೂರಿನಲ್ಲಿ ಬಾಂಬ್‌ ಸ್ಪೋಟ್‌ವಾಗಿತ್ತು. ನಿನ್ನೆಯ ಘಟನೆಯ ಹಿಂದೆ ಉಗ್ರರ ಕೈವಾಡ ಇದೆಯೊ ಅಥವಾ ಅದು ವೃತ್ತಿ ವೈಷಮ್ಯದಿಂದ ಆದದ್ದೋ ಎಂಬುವುದು ತನಿಖೆಯಿಂದಲೇ ಗೊತ್ತಾಗಬೇಕು. ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು {ಯುಎಪಿಎ] ರಾಷ್ಟ್ರೀಯ ತನಿಖಾ ದಳ {ಎನ್‌ಐಎ} ಮತ್ತು ರಾಜ್ಯದ ಸಿಸಿಬಿ ಪೋಲಿಸರು ಜಂಟಿಯಾಗಿ ತನಿಖೆ ನಡೆಸುತ್ತಿವೆ.

ಬಾಂಬ್‌ ಇಟ್ಟವರಾರು, ಇದರ ಹಿಂದೆ ಯಾರಿದ್ದಾರೆ ಮತ್ತು ಇದಕ್ಕೆ ಕಾರಣವೆನೆಂದು ಇಂದಲ್ಲ ನಾಳೆ ಗೊತ್ತಾಗಬಹುದು. ತಿಂಡಿ ತನ್ನುವ ನೇಪದಲ್ಲಿ ಟೋಪಿ ಮತ್ತು ಮಾಸ್ಕ್‌ ಧರಸಿಕೊಂಡು ಕೆಫೆಗೆ ಬಂದಿರುವ ವ್ಯಕ್ತಿಯೆ ಟೈಮರ್‌  ಬಾಂಬ್‌ ಇಟ್ಟಿರಬಹುದೆಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸುತ್ತಿವೆ.

ಈ ಸಂದರ್ಭದಲ್ಲಿ ಆಡಳಿತ ಪಕ್ಷ – ವಿರೋಧ ಪಕ್ಷ ರಾಜಕೀಯ ಲಾಭಕ್ಕಾಗಿ ಪರಸ್ಪರ ಕೆಸರೇರಚಾಟ ನಡೆಸದೆ ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೇ ಮರುಕಳಿಸದಂತೆ ಏನೇನು ಮಾಡಬೇಕೋ ಅದಲ್ಲೆವನ್ನು ಅವು ಮಾಡಬೇಕು. ಕರ್ನಾಟಕ ಮತ್ತೊಂದು ಬಿಹಾರ ಅಥವಾ ಉತ್ತರ ಪ್ರದೇಶ ಆಗದಂತೆ ತಡೆಗಟ್ಟುವ ಜವಾಬ್ದಾರಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಪ್ರಥಮ ಆದ್ಯತೆಯೂ, ಕರ್ತವ್ಯವೂ ಆಗಿದೆ. ಆದರೆ ರಾಜ್ಯದ ಪ್ರಮುಖ ವಿರೋಧ ಪಕ್ಷ ಬಿಜೆಪಿ ಅದನ್ನು ಮರತು, ಈ ಬಾಂಬ್‌ ಸ್ಪೋಟ್‌ದಲ್ಲೂ ರಾಜಕೀಯ ಫಸಲು ತೆಗೆಯಲು ಹೊರಟಂತಿದೆ.

ಕೆಫೆಯಲ್ಲಿ ಬಾಂಬ್‌ ಸ್ಷೋಟದ್‌ ಹೊಗೆ ಇನ್ನೂ ಆರಿಲ್ಲ ಈ ಕಡೆ ಬಿಜೆಪಿಯ  ರಾಜ್ಯಾಧ್ಯಕ್ಷ  ಬಿ.ವೈ. ವಿಜೇಂದ್ರ ಮತ್ತು  ಆರ್‌ ಅಶೋಕ ಪತ್ರಿಕಾ ಗೋಷ್ಠಿ ನಡೆಸಿ ʼಮೊನ್ನೆ ವಿಧಾನ ಸೌಧದಲ್ಲಿ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೆನ್‌ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದ್ದಾರೆ, ಇಂದು ರಾಜ್ಯದ ರಾಜ್ಯಧಾನಿಯಲ್ಲಿ ಬಾಂಬ್‌ ಸ್ಪೊಟ್‌ವಾಗಿದೆ. ಅದಕ್ಕೂ ಇದಕ್ಕೂ ನೇರ ಸಂಬಂಧವಿದೆ. ಇದಕ್ಕೆಲ್ಲ ಕಾಂಗ್ರೆಸ್‌ ಪಕ್ಷದ ಮುಸ್ಲಿಂ ಓಲೈಕೆಯೆ ಕಾರಣವೆಂದು ಆರೋಪಿಸಿದ್ದಾರೆ. ಎಲ್ಲೆ ಬಾಂಬ್‌ ಸ್ಪೋಟ್‌ವಾಗಲಿ, ಅದು ಯಾರೆ ಮಾಡಿರಲಿ ತನಿಖೆಗೂ ಮುಂಚೆಯೆ ಅದನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟಲು ಬಿಜೆಪಿ ಅಣಿಯಾಗಿರುತ್ತದೆ. ಇಲ್ಲಿಯೂ ಅದನ್ನೇ ಮಾಡುತ್ತಿದೆ.

ಅಷ್ಟಕ್ಕೂ ರಾಜ್ಯ ಬಿಜೆಪಿ ನಾಯಕರು ವಿರೋಧಿಸಬೇಕಾಗಿರುವುದು ಬಿಜೆಪಿ ನೇತೃತದ ಕೇಂದ್ರ ಸರ್ಕಾರವನ್ನು. ಏಕೆಂದರೆ ಬಿಜೆಪಿ ನಾಯಕರು ಗುಲ್ಲೇಬ್ಬಿಸುತ್ತಿರುವಂತೆ ಇದು ರಾಜ್ಯದ ಕಾನೂನು ಸುವ್ಯೆವಸ್ಥೆಯ ವೈಫಲ್ಯವಲ್ಲ; ಇದು ರಾಷ್ಟ್ರೀಯ ಭದ್ರತೆಯ ವಿಫಲತೆ.  ಬಾಂಬ್‌ ಬ್ಲಾಸ್ಟ್‌ ಎಂಬುವುದು ಭಯೋತ್ಪಾದನೆ ಕೃತ್ಯ. ಎನ್ನುವುದಾದರೆ ಭಯೋತ್ಪಾದನೆ ಕೃತ್ಯ ಮುಂಚಿತವಾಗಿ ಪತ್ತೆ ಹಚ್ಚುವುದು, ಅದನ್ನು ತಡೆಯುದು ಹಾಗೂ ನಿರ್ನಾಮ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ರಾಷ್ಟ್ರದ ಭದ್ರತೆಗೆಂದೆ ರಾಜ್ಯಗಳಿಂದ ಸಾಕಷ್ಟು ತೆರಿಗೆ ಸಂಗ್ರಹಿಸುತ್ತದೆ. ದೇಶದೆಲ್ಲಾದರು ಬಾಂಬ್‌ ಬ್ಲಾಸ್ಟ್‌ ಆದರೆ ಅದು ರಾಷ್ಟ್ರದ ಭದ್ರತೆಯ ವಿಫಲದ ವ್ಯಾಪ್ತಿಯಲ್ಲಿ ಬರುವುದಿಲ್ಲವೆ? ಎನ್‌ಐಎ, ರಾ ಸೇರಿದಂತೆ ಹಲವು ಗುಢಾಚಾರ ಸಂಸ್ಥೆಗಳು  ಭಯೋತ್ಪಾದನಾ ನಿಗ್ರಹಕ್ಕೆಂದೆ ಕೆಲಸ ಮಾಡುತ್ತಿವೆ.

ಭಯೋತ್ಪಾದನೆ ಅಂತರಾಷ್ಟ್ರೀಯ, ಅಂತರರಾಜ್ಯ ಸಮಸ್ಯೆ. ರಾಜ್ಯದ ಪೋಲಿಸ್‌ ಇಲಾಖೆ ಇದನ್ನು ಮುಂಚಿತವಾಗಿಯೇ ಪತ್ತೆ ಹಚ್ಚಲು, ತಡೆಗಟ್ಟಲು ಹೇಗೆ ಸಾಧ್ಯ?  ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಮುಂಚಿತವಾಗಿಯೆ ಪತ್ತೆ ಹಚ್ಚಿ ನಿನ್ನೆಯ ಬೆಂಗಳೂರಿನ ಬಾಂಬ್‌ ಬ್ಲಾಸ್ಟ್ ತಡೆಗಟ್ಟಬೇಕಾಗಿತ್ತು. ತಡೆಗಟ್ಟಿಲ್ಲ. ವಿಫಲವಾಗಿದೆ. ಹಾಗಾಗಿ ಇದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಗುಢಾಚಾರ ಸಂಸ್ಥೆಗಳ ವೈಫಲ್ಯವೇ ವಿನಾ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಯ ವಿಫಲತೆಯಲ್ಲ.

ತಥಾಕಥಿತ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಿ ರಾಜಕೀಯ ಫಸಲು ತೆಗೆಯುವ ಉತ್ಸುಕತೆಯಲ್ಲಿದ್ದಂತಿದೆ. ನಾಳೆ ಪ್ರಾಯಶಃ ಇದು ಲೋಕಸಭಾ ಚುನಾವಣಾ ವಿಷಯ ಮಾಡಿದರೂ ಮಾಡಬಹುದು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!