ದ ಪಾಲಿಟಿಕ್

ನಮ್ಮ ಕುರಿತು

ದ ಪಾಲಿಟಿಕ್ ಡಿಜಿಟಲ್ ಮಾಧ್ಯಮ ರಾಜಕೀಯ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ಓದುಗರಿಗಾಗಿ, ಈ ದೇಶದ ರಾಜಕೀಯ ಚಿತ್ರಣವನ್ನು ಸಮಗ್ರವಾಗಿಯೂ, ಸ್ಪಷ್ಟವಾಗಿಯೂ, ನಿಷ್ಪಕ್ಷಪಾತವಾಗಿಯೂ ತಿಳಿದುಕೊಳ್ಳಲು ಬಯಸುವವರಿಗಾಗಿ. ಈ ಡಿಜಿಟಲ್ ಮಾಧ್ಯಮವು ‘ಪಾಲಿಟಿಕ್ ಮೀಡಿಯಾ ಹೌಸ್’ ಎಂಬ ನೋಂದಾಯಿತ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿದೆ. ರಾಜಕೀಯವೆಂದರೆ ಅಧಿಕಾರದಾಟ. ಅದೊಂದು ಮಾಯಾಲೋಕ. ಅಲ್ಲಿ ದಿನದಿನವೂ ಕ್ಷಣಕ್ಷಣವೂ ಬೆಳವಣಿಗೆಗಳಾಗುತ್ತಿರುತ್ತವೆ. ಅಲ್ಲಿ ರಂಗುರಂಗಿನ ವ್ಯಕ್ತಿಗಳಿರುತ್ತಾರೆ. ಅಲ್ಲಿ ನಡೆಯುವ ಎಲ್ಲ ವಿದ್ಯಮಾನಗಳಲ್ಲಿ, ಅಲ್ಲಿ ಕೈಗೊಳ್ಳಲಾಗುವ ಅಥವಾ ಕೈಗೊಳ್ಳದೇ ಉಳಿದ ಪ್ರತಿಯೊಂದು ನಿರ್ಧಾರದಲ್ಲಿ ದೇಶದ ಪ್ರಗತಿಯ ಮತ್ತು ಅವನತಿಯ ಪ್ರಶ್ನೆಗಳಿವೆ; ದೇಶದ ಅಳಿವು ಉಳಿವಿನ ಪ್ರಶ್ನೆಗಳಿವೆ; ದೇಶದ ಸಾಮಾನ್ಯ ಜನರ ನಿತ್ಯ ಬದುಕಿನ ಪ್ರಶ್ನೆಗಳಿವೆ.

ಹಾಗಾಗಿ ರಾಜಕೀಯದ ಎಲ್ಲಾ ಆಗುಹೋಗುಗಳ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸತ್ಯ ತಿಳಿಯಬೇಕಾಗಿದೆ. ವೈಭವೀಕರಣ ಇಲ್ಲದ, ಅವಗಣನೆಗೆ ಒಳಗಾಗದ ಸ್ಪಷ್ಟ ಮತ್ತು ನಿಷ್ಪಕ್ಷಪಾತ ಮಾಹಿತಿ ನಿರಂತರ ದೊರೆಯುವ ಅಗತ್ಯವಿದೆ. ಮಾಹಿತಿಗಳನ್ನು ಅರಗಿಸಿಕೊಳ್ಳಲಾಗದರಿಗೆ ಮಾಹಿತಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ನೀಡುವ ಅಗತ್ಯವಿದೆ. ಅಧಿಕಾರದ ಗುಂಗಿನಲ್ಲಿ ಮೈಮರೆತವರನ್ನು ಪ್ರಶ್ನಿಸಿ ಉತ್ತರ ಪಡೆದುಕೊಳ್ಳುವ ಅಗತ್ಯವಿದೆ. ಒಂದು ಕಾಲದಲ್ಲಿ ನಾಡಿನ ಮಾಧ್ಯಮಗಳು ಈ ಕೆಲಸವನ್ನು ಬಹುಮಟ್ಟಿಗೆ ಮಾಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಮಾಹಿತಿಯ ಮಹಾಪೂರದಲ್ಲಿ ಸತ್ಯವನ್ನು ಗುರುತಿಸುವುದು ಕಷ್ಟವಾಗಿದೆ. ಮಾತ್ರವಲ್ಲ ಅಸಾಧ್ಯವಾಗಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ಯಾವುದೊ ರಾಜಕೀಯ ಪಕ್ಷದ ಅಥವಾ ಯಾವುದೋ ಲಾಭಕೋರ ಖಾಸಗಿ ಶಕ್ತಿಗಳ ಹಿಡಿತದಲ್ಲಿರುವ ಕಾರಣ ವಸ್ತುನಿಷ್ಠ ವಿಶ್ಲೇಷಣೆ ಎನ್ನುವುದು ಮರೀಚಿಕೆಯಾಗಿ ಹೋಗಿದೆ. ರಾಜಕೀಯ ಮತ್ತು ಕಾರ್ಪೊರೇಟ್ ಹಂಗಿನಲ್ಲಿ ಇಲ್ಲದ ಮಾಧ್ಯಮಗಳಿಗೂ ಸತ್ಯದ ಮೂಲಕ ಅಧಿಕಾರಸ್ಥರನ್ನು ಎದುರು ಹಾಕಿಕೊಳ್ಳುವಷ್ಟು ಧೈರ್ಯ ಉಳಿದಿಲ್ಲ.

ಹೀಗಾಗಿ, ರಾಜಕೀಯ ಪತ್ರಿಕೋದ್ಯಮ (ಪೊಲಿಟಿಕಲ್ ಜರ್ನಲಿಸಂ) ಎನ್ನುವುದು ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಬಳಲಿದೆ, ಬಡವಾಗಿದೆ. ದ ಪಾಲಿಟಿಕ್ ಹುಟ್ಟಿಕೊಂಡಿರುವುದು ಈ ಹಿನ್ನೆಲೆಯಲ್ಲಿ. ಇದರ ಉದ್ದೇಶ ದೇಶದಾದ್ಯಂತ ಕಾಣಿಸಿಕೊಂಡಿರುವ ವಸ್ತುನಿಷ್ಠ ರಾಜಕೀಯ ಪತ್ರಿಕೋದ್ಯಮದ ಕೊರತೆಯನ್ನು ಸ್ಥಳೀಯವಾದ ಸಣ್ಣದೊಂದು ಪ್ರಯತ್ನದ ಮೂಲಕ ಸಾಧ್ಯವಾದಷ್ಟು ತುಂಬುವುದಾಗಿದೆ. ರಾಜಕೀಯದ ಕುರಿತಾದ ಸತ್ಯವನ್ನು ಜನರ ಮುಂದಿಡಬೇಕೆಂಬ ಉದ್ದೇಶ ಬಿಟ್ಟರೆ ಇನ್ಯಾವ ಕಾರ್ಯಸೂಚಿಯೂ ದ ಪಾಲಿಟಿಕ್‌ಗೆ ಇಲ್ಲ. ಇದಕ್ಕೆ ಸೈದ್ಧಾಂತಿಕ ಹಂಗಿಲ್ಲ. ಪತ್ರಿಕೋದ್ಯಮವೇ ಒಂದು ಸಿದ್ಧಾಂತ (journalism itself is an Ism) ಎಂದು ದ ಪಾಲಿಟಿಕ್‌ನ ನಂಬಿಕೆಯಾಗಿದೆ.

ರಾಜಕೀಯದ ಆಗುಹೋಗುಗಳನ್ನು ಯಾವುದೇ ರಾಗದ್ವೇಷ ಇಲ್ಲದೆ ದ ಪಾಲಿಟಿಕ್‌ನಲ್ಲಿ ವಿಶೇಷ ವರದಿಗಳನ್ನು ಮಾಡುತ್ತಿದ್ದೇವೆ. ರಾಜಕೀಯದಲ್ಲಾಗುವ ಬೆಳವಣಿಗೆಗಳ ಬಗ್ಗೆ ನಮ್ಮ ತಂಡದಿಂದ ಮತ್ತು ಆಹ್ವಾನಿತ ಪರಿಣತರಿಂದ ವಿಶ್ಲೇಷಣೆಗಳನ್ನು ಬರೆಸಿ ಪ್ರಕಟ ಮಾಡುತ್ತಿದ್ದೇವೆ. ರಾಜಕೀಯ ವ್ಯಕ್ತಿಗಳಿಗೆ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಮುಂದಿಟ್ಟು ಅವರಿಂದ ಬಂದ ಉತ್ತರಗಳನ್ನು ಸಂದರ್ಶನದ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ಕಾಲಕಾಲಕ್ಕೆ ಇನ್ನೂ ಹೊಸ ಮಾದರಿಯಲ್ಲಿ ರಾಜಕೀಯಕ್ಕೆ ಸಂಬಂದಿಸಿದ ವಿಚಾರಗಳನ್ನು ಓದುಗರ ಮುಂದಿಡಲಿದ್ದೇವೆ. ಏನನ್ನೂ ವೈಭವೀಕರಿಸುವುದಿಲ್ಲ. ಯಾವುದನ್ನೂ ಮುಚ್ಚಿಡುವುದಿಲ್ಲ. ರಾಜಯಕೀಯಕ್ಕೆ ಸಂಬಂಧಿಸಿದ ವಿಷಯ ಯಾವುದೇ ಇರಲಿ, ಬರಹದ ಸ್ವರೂಪ ಯಾವುದೇ ಇರಲಿ ವಿಶ್ವಾಸಾರ್ಹತೆಯಲ್ಲಿ ಎಳ್ಳಷ್ಟೂ ರಾಜಿಯಿಲ್ಲ. ಅದು ಕಂಡುಬಂದರೆ ನಮ್ಮನ್ನು ಪ್ರಶ್ನಿಸುವ ಸ್ವಾತಂತ್ರ್ಯ ನಿಮಗಿದೆ. ನಿಮ್ಮ ಪ್ರಶ್ನೆಗಳಿಗೆ ನಾವು ನೀಡುವ ಉತ್ತರದಲ್ಲಿ ಆತ್ಮಸಾಕ್ಷಿಯ ಕೊರತೆಯಿದೆ ಎಂದು ನಿಮಗನಿಸಿದ್ದಲ್ಲಿ ನಮ್ಮನ್ನು ತಿರಸ್ಕರಿಸುವ ಸ್ವಾತಂತ್ರ್ಯ ತಮಗೆ ಹೇಗೂ ಇದೆ.

ರಾಜಕೀಯ ಪತ್ರಿಕೋದ್ಯಮ ಸೊರಗಿ ಹೋಗಿ ದೇಶದ ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳೇ ಶಿಥಿಲವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ನಮ್ಮದು ಹೀಗೊಂದು ಪ್ರಯತ್ನ. ಸತ್ಯದ ಬೆನ್ನಿಗೆ ನಿಲ್ಲುವ ಕೋಟ್ಯಂತರ ಮನಸ್ಸುಗಳು ನಮ್ಮ ಬೆಂಬಲಕ್ಕೆ ಸದಾ ಇರುತ್ತಾರೆ ಎಂಬ ವಿಶ್ವಾಸ ಎಂಬ ವಿಶ್ವಾಸ ನಮಗಿದೆ.

ದ ಪಾಲಿಟಿಕ್ ಡಿಜಿಟಲ್ ಮಾಧ್ಯಮ ರಾಜಕೀಯ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ಓದುಗರಿಗಾಗಿ ಮೀಸಲಾಗಿರುತ್ತದೆ. ಈ ಡಿಜಿಟಲ್ ಮಾಧ್ಯಮವು ‘ಪಾಲಿಟಿಕ್ ಮೀಡಿಯಾ ಹೌಸ್’ ಎಂಬ ನೋಂದಾಯಿತ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿದೆ. ಈ ದೇಶದ ರಾಜಕೀಯ ಚಿತ್ರಣವನ್ನು ಸಮಗ್ರವಾಗಿಯೂ, ಸ್ಪಷ್ಟವಾಗಿಯೂ, ನಿಷ್ಪಕ್ಷಪಾತವಾಗಿಯೂ ತಿಳಿದುಕೊಳ್ಳಲು ಬಯಸುವವರಿಗಾಗಿ. ರಾಜಕೀಯವೆಂದರೆ ಅಧಿಕಾರದಾಟ. ಅದೊಂದು ಮಾಯಾಲೋಕ. ಅಲ್ಲಿ ದಿನದಿನವೂ ಕ್ಷಣಕ್ಷಣವೂ ಬೆಳವಣಿಗೆಗಳಾಗುತ್ತಿರುತ್ತವೆ. ಅಲ್ಲಿ ರಂಗುರಂಗಿನ ವ್ಯಕ್ತಿಗಳಿರುತ್ತಾರೆ. ಅಲ್ಲಿ ನಡೆಯುವ ಎಲ್ಲ ವಿದ್ಯಮಾನಗಳಲ್ಲಿ, ಅಲ್ಲಿ ಕೈಗೊಳ್ಳಲಾಗುವ ಅಥವಾ ಕೈಗೊಳ್ಳದೇ ಉಳಿದ ಪ್ರತಿಯೊಂದು ನಿರ್ಧಾರದಲ್ಲಿ ದೇಶದ ಪ್ರಗತಿಯ ಮತ್ತು ಅವನತಿಯ ಪ್ರಶ್ನೆಗಳಿವೆ; ದೇಶದ ಅಳಿವು ಉಳಿವಿನ ಪ್ರಶ್ನೆಗಳಿವೆ; ದೇಶದ ಸಾಮಾನ್ಯ ಜನರ ನಿತ್ಯ ಬದುಕಿನ ಪ್ರಶ್ನೆಗಳಿವೆ.

ಹಾಗಾಗಿ ರಾಜಕೀಯದ ಎಲ್ಲಾ ಆಗುಹೋಗುಗಳ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸತ್ಯ ತಿಳಿಯಬೇಕಾಗಿದೆ. ವೈಭವೀಕರಣ ಇಲ್ಲದ, ಅವಗಣನೆಗೆ ಒಳಗಾಗದ ಸ್ಪಷ್ಟ ಮತ್ತು ನಿಷ್ಪಕ್ಷಪಾತ ಮಾಹಿತಿ ನಿರಂತರ ದೊರೆಯುವ ಅಗತ್ಯವಿದೆ. ಮಾಹಿತಿಗಳನ್ನು ಅರಗಿಸಿಕೊಳ್ಳಲಾಗದರಿಗೆ ಮಾಹಿತಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ನೀಡುವ ಅಗತ್ಯವಿದೆ. ಅಧಿಕಾರದ ಗುಂಗಿನಲ್ಲಿ ಮೈಮರೆತವರನ್ನು ಪ್ರಶ್ನಿಸಿ ಉತ್ತರ ಪಡೆದುಕೊಳ್ಳುವ ಅಗತ್ಯವಿದೆ. ಒಂದು ಕಾಲದಲ್ಲಿ ನಾಡಿನ ಮಾಧ್ಯಮಗಳು ಈ ಕೆಲಸವನ್ನು ಬಹುಮಟ್ಟಿಗೆ ಮಾಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಮಾಹಿತಿಯ ಮಹಾಪೂರದಲ್ಲಿ ಸತ್ಯವನ್ನು ಗುರುತಿಸುವುದು ಕಷ್ಟವಾಗಿದೆ. ಮಾತ್ರವಲ್ಲ ಅಸಾಧ್ಯವಾಗಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ಯಾವುದೊ ರಾಜಕೀಯ ಪಕ್ಷದ ಅಥವಾ ಯಾವುದೋ ಲಾಭಕೋರ ಖಾಸಗಿ ಶಕ್ತಿಗಳ ಹಿಡಿತದಲ್ಲಿರುವ ಕಾರಣ ವಸ್ತುನಿಷ್ಠ ವಿಶ್ಲೇಷಣೆ ಎನ್ನುವುದು ಮರೀಚಿಕೆಯಾಗಿ ಹೋಗಿದೆ. ರಾಜಕೀಯ ಮತ್ತು ಕಾರ್ಪೊರೇಟ್ ಹಂಗಿನಲ್ಲಿ ಇಲ್ಲದ ಮಾಧ್ಯಮಗಳಿಗೂ ಸತ್ಯದ ಮೂಲಕ ಅಧಿಕಾರಸ್ಥರನ್ನು ಎದುರು ಹಾಕಿಕೊಳ್ಳುವಷ್ಟು ಧೈರ್ಯ ಉಳಿದಿಲ್ಲ.

ಹೀಗಾಗಿ, ರಾಜಕೀಯ ಪತ್ರಿಕೋದ್ಯಮ (ಪೊಲಿಟಿಕಲ್ ಜರ್ನಲಿಸಂ) ಎನ್ನುವುದು ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲೇ ಬಳಲಿದೆ, ಬಡವಾಗಿದೆ. ದ ಪಾಲಿಟಿಕ್ ಹುಟ್ಟಿಕೊಂಡಿರುವುದು ಈ ಹಿನ್ನೆಲೆಯಲ್ಲಿ. ಇದರ ಉದ್ದೇಶ ದೇಶದಾದ್ಯಂತ ಕಾಣಿಸಿಕೊಂಡಿರುವ ವಸ್ತುನಿಷ್ಠ ರಾಜಕೀಯ ಪತ್ರಿಕೋದ್ಯಮದ ಕೊರತೆಯನ್ನು ಸ್ಥಳೀಯವಾದ ಸಣ್ಣದೊಂದು ಪ್ರಯತ್ನದ ಮೂಲಕ ಸಾಧ್ಯವಾದಷ್ಟು ತುಂಬುವುದಾಗಿದೆ. ರಾಜಕೀಯದ ಕುರಿತಾದ ಸತ್ಯವನ್ನು ಜನರ ಮುಂದಿಡಬೇಕೆಂಬ ಉದ್ದೇಶ ಬಿಟ್ಟರೆ ಇನ್ಯಾವ ಕಾರ್ಯಸೂಚಿಯೂ ದ ಪಾಲಿಟಿಕ್‌ಗೆ ಇಲ್ಲ. ಇದಕ್ಕೆ ಸೈದ್ಧಾಂತಿಕ ಹಂಗಿಲ್ಲ. ಪತ್ರಿಕೋದ್ಯಮವೇ ಒಂದು ಸಿದ್ಧಾಂತ (journalism itself is an Ism) ಎಂದು ದ ಪಾಲಿಟಿಕ್‌ನ ನಂಬಿಕೆಯಾಗಿದೆ.

ರಾಜಕೀಯದ ಆಗುಹೋಗುಗಳನ್ನು ಯಾವುದೇ ರಾಗದ್ವೇಷ ಇಲ್ಲದೆ ದ ಪಾಲಿಟಿಕ್‌ನಲ್ಲಿ ವಿಶೇಷ ವರದಿಗಳನ್ನು ಮಾಡುತ್ತಿದ್ದೇವೆ. ರಾಜಕೀಯದಲ್ಲಾಗುವ ಬೆಳವಣಿಗೆಗಳ ಬಗ್ಗೆ ನಮ್ಮ ತಂಡದಿಂದ ಮತ್ತು ಆಹ್ವಾನಿತ ಪರಿಣತರಿಂದ ವಿಶ್ಲೇಷಣೆಗಳನ್ನು ಬರೆಸಿ ಪ್ರಕಟ ಮಾಡುತ್ತಿದ್ದೇವೆ. ರಾಜಕೀಯ ವ್ಯಕ್ತಿಗಳಿಗೆ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಮುಂದಿಟ್ಟು ಅವರಿಂದ ಬಂದ ಉತ್ತರಗಳನ್ನು ಸಂದರ್ಶನದ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ಕಾಲಕಾಲಕ್ಕೆ ಇನ್ನೂ ಹೊಸ ಮಾದರಿಯಲ್ಲಿ ರಾಜಕೀಯಕ್ಕೆ ಸಂಬಂದಿಸಿದ ವಿಚಾರಗಳನ್ನು ಓದುಗರ ಮುಂದಿಡಲಿದ್ದೇವೆ. ಏನನ್ನೂ ವೈಭವೀಕರಿಸುವುದಿಲ್ಲ. ಯಾವುದನ್ನೂ ಮುಚ್ಚಿಡುವುದಿಲ್ಲ. ರಾಜಯಕೀಯಕ್ಕೆ ಸಂಬಂಧಿಸಿದ ವಿಷಯ ಯಾವುದೇ ಇರಲಿ, ಬರಹದ ಸ್ವರೂಪ ಯಾವುದೇ ಇರಲಿ ವಿಶ್ವಾಸಾರ್ಹತೆಯಲ್ಲಿ ಎಳ್ಳಷ್ಟೂ ರಾಜಿಯಿಲ್ಲ. ಅದು ಕಂಡುಬಂದರೆ ನಮ್ಮನ್ನು ಪ್ರಶ್ನಿಸುವ ಸ್ವಾತಂತ್ರ್ಯ ನಿಮಗಿದೆ. ನಿಮ್ಮ ಪ್ರಶ್ನೆಗಳಿಗೆ ನಾವು ನೀಡುವ ಉತ್ತರದಲ್ಲಿ ಆತ್ಮಸಾಕ್ಷಿಯ ಕೊರತೆಯಿದೆ ಎಂದು ನಿಮಗನಿಸಿದ್ದಲ್ಲಿ ನಮ್ಮನ್ನು ತಿರಸ್ಕರಿಸುವ ಸ್ವಾತಂತ್ರ್ಯ ತಮಗೆ ಹೇಗೂ ಇದೆ.

ರಾಜಕೀಯ ಪತ್ರಿಕೋದ್ಯಮ ಸೊರಗಿ ಹೋಗಿ ದೇಶದ ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳೇ ಶಿಥಿಲವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ನಮ್ಮದು ಹೀಗೊಂದು ಪ್ರಯತ್ನ. ಸತ್ಯದ ಬೆನ್ನಿಗೆ ನಿಲ್ಲುವ ಕೋಟ್ಯಂತರ ಮನಸ್ಸುಗಳು ನಮ್ಮ ಬೆಂಬಲಕ್ಕೆ ಸದಾ ಇರುತ್ತಾರೆ ಎಂಬ ವಿಶ್ವಾಸ ಎಂಬ ವಿಶ್ವಾಸ ನಮಗಿದೆ.

For any queries, write to : editorthepolitic@gmail.com

Meet Our Team

BT Venkatesh

Senior Legal Adviser

A Narayan

Chief Advisor

Siddappa Mulge

Editor in Chief

error: Content is protected !!